ಪ್ರಶ್ನೆ ಪತ್ರಿಕೆ ಸೋರಿಕೆ ಮಹೇಶ ಪಿಯು ಕಾಲೇಜ ಭಾಗಿ

0
31

ಕಾನೂನು ಕ್ರಮಕ್ಕೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ
ಬೆಳಗಾವಿ 28: ನಗರದ ಮಾಳಮಾರುತಿ ಬಡವಣೆಯಲ್ಲಿರುವ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯ ದ್ವೀತಿಯ ಪಿಯುಸಿ ರಾಸಾಯನಿಕ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯಲ್ಲಿ ಭಾಗಿಯಾಗಿರುವದನ್ನು ಖಂಡಿಸಿ ಗುರುವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಮಹಾವಿದ್ಯಾಲಯದ ಎದುರು ಪ್ರತಿಭಟನೆ ನಡೆಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೆಶಕರಿಗೆ ಮನವಿ ಸಲ್ಲಿಸಿದರು.
ಮಧ್ಯಾಹ್ನ 2 ಗಂಟೆಗೆ ಎಬಿವಿಪಿ ಕಾರ್ಯಕರ್ತರು ಮಹೇಶ ಮಹಾವಿದ್ಯಾಲಯದ ಎದುರು ಜಮಾಯಿತಗೊಂಡು ಕಾಲೇಜಿನಲ್ಲಿರುವ ಸಸಿಗಳ ಕುಂಡಗಳನ್ನು ಒಡೆದು ತಮ್ಮ ಅಕ್ರೋಶ ವ್ಯಕ್ತ ಪಡಿಸಿ ಶಿಕ್ಷಣ ಇಲಾಖೆ ಹಾಗೂ ಸರಕಾರ ವಿರುದ್ಧ ಘೋಷಣೆ ಕೂಗಿದರು.
ನಂತರ ಪ್ರತಿಭಟನೆಯಲ್ಲಿ ಎಬಿವಿಪಿ ಸಂಘಟನಾ ಕಾರ್ಯದರ್ಶಿ ಪೃತ್ವಿಕುಮಾರ ಮಾತನಾಡಿ, ದ್ವೀತಿಯ ಪಿಯುಸಿ ರಾಸಾಯನಿಕ ಶಾಸ್ತ್ರಪ್ರಶ್ನೆ ಪತ್ರಿಕೆ ಸೋರಿಕೆ ದಂಧೆÉಯಲ್ಲಿ ರಾಜ್ಯದಲ್ಲಿ 11 ಪದವಿ ಪೂರ್ವ ಕಾಲೇಜುಗಳು ಭಾಗಿಯಾಗಿವೆ ಎಂದು ಸಿಐಡಿ ತಂಡ ಉಲ್ಲೇಖಿಸಲಾಗಿದೆ. ಅದರಲ್ಲೂ ಬೆಳಗಾವಿಯ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯ ಒಂದಾಗಿದೆ. ಈ ಖಾಸಗಿ ಸಂಸ್ಥೆಗಳು ತಮ್ಮ ಕಾಲೇಜುಗಳ ಫಲಿತಾಂಶ ಶೇ.100ರಷ್ಟು ಹೆಚ್ಚಿಸಿಕೊಳ್ಳಲು ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯಲ್ಲಿ ಭಾಗಿಯಾಗಿವೆ. ಅಲ್ಲದೆ ಕಷ್ಟು ಪಟ್ಟು ವಿದ್ಯಾಭ್ಯಾಸ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಅತಂತ್ರ ಸ್ಥಿತಿಗೆ ತಳ್ಳಿದೆ. ಈ ದಂಧೆಗೆ ಕಡಿವಾಣ ಹಾಕುವಲ್ಲಿ ಶಿಕ್ಷಣ ಇಲಾಖೆ ಹಾಗೂ ಸರಕಾರ ಸಂಪೂರ್ಣ ವಿಫಲವಾಗಿವೆ ಎಂದು ತಮ್ಮ ಆಕ್ರೋಶ ಹೊರಗೆಡವಿದರು.
ಇಂದಿನ ದಿನಮಾನಗಳಲ್ಲಿ ಶಿಕ್ಷಣ ಸಂಪೂರ್ಣ ಉನ್ನತಿಗೆ ಹೊರೆತು ವ್ಯಾಪಾರಕಲ್ಲ ಎಂಬ ವಿಷಯವನ್ನು ಶಿಕ್ಷಣ ಸಂಸ್ಥೆಗಳು ಅರೆತುಕೊಳ್ಳಬೇಕಿದೆ. ರಾಜ್ಯದ 11 ಖಾಸಗಿ ಪ್ರತಿಷ್ಠತ ಶಿಕ್ಷಣ ಸಂಸ್ಥೆಗಳು ವಿಜ್ಞಾನ ವಿಷಯದಲ್ಲಿ 100ಕ್ಕೆ 100ರಷು ್ಟಫಲಿತಾಂಶ ನೀಡುತ್ತಿವೆ ಎಂದು ವಿದ್ಯಾರ್ಥಿ ಮತ್ತು ಪೆÇೀಷಕರಲ್ಲಿ ಲಕ್ಷಾಂತರ ರೂ.ಗಳನ್ನು ವಸೂಲಿ ಮಾಡಲಾಗುತ್ತಿದೆ. ಶಿಕ್ಷಣ ಕೇವಲ ವ್ಯಾಪಾರ ಎಂದು ಬಿಂಭಿಸುವ ಮಹೇಶ ಮಹವಿದ್ಯಾಲಯದ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಬಿವಿಪಿ ಕಾರ್ಯಕರ್ತರು ಆಗ್ರಹಿಸಿದರು.
ಗಿರೀಶ ಬಡಿಗೇರ, ಭೀಮಸೇನ ಪಪ್ಪು, ಸಂದೇಶ ಪಡಕರ, ಸೌರಭÀ ದುಗ್ಗಾಣಿ, ಮಹಾದೇವ ದರೆಗೌಡರ ಸೇರಿದಂತೆ ನೂರಾರು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here