ಮಾನವ ಜನ್ಮವೆಂದರೆ ಗಾಳಿಯಲ್ಲಿಟ್ಟ ಪಣತಿ

0
83

ಮೋಳೆ (ತಾ. ಅಥಣಿ) 22- ಕೃಷ್ಣೆಯ ನೀರನ್ನು ಬಳಸಿ ಈ ಭಾಗದ ಜನರ ಜೀವನ ಸಿರಿವಂತವಾಗಿದೆ. ಆ ಸಂಪತ್ತನ್ನು ಬೆಳೆಸಿಕೊಂಡು ಉತ್ತಮ ಜೀವನ ಸಾಗಿಸಬೇಕು. ಒಂದು ವೇಳೆ ಹಾಗೆ ಮಾಡದೇ ವ್ಯಸನಕ್ಕೆ ಆಧೀನರಾದರೆ ಕೃಷ್ಣೆ ಮುನಿಸಿಕೊಂಡರೆ ನಮ್ಮ ಬದುಕು ತಿರುಗಿ ನಮ್ಮ ಬದುಕು ಅರ್ಥಹೀನವಾಗುತ್ತದೆ ಎಂದು ವಿಜಾಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.

ಶುಕ್ರವಾರ ಐನಾಪೂರ ಗ್ರಾಮದ ದೇಹು ಕರೆ ವಾರಕರಿ ಸಂಪ್ರದಾಯ ಹಾಗೂ ಗ್ರಾಮಸ್ಥರ ನೆರವಿನಿಂದ ನಿರ್ಮಾಣಗೊಳಿಸಿರುವ ವಿಠಲ ಮಂದಿರ ದೇವಸ್ಥಾನದಲ್ಲಿ ವಿಠಲ ರುಕ್ಮಿಣಿ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಜೀವನದಲ್ಲಿ ಶಾಂತಿ ಪಡೆದುಕೊಂಡಾಗ ಜೀವನ ಸಾರ್ಥಕ. ಅದಕ್ಕಾಗಿ ಬಾಯಿಯಿಂದ ವಿಠಲನ ಸ್ಮರಣೆ ಮಾಡಬೇಕು ಕಣ್ಣಿನಿಂದ ವಿಠಲನ  ಮೂರ್ತಿಯನ್ನು ನೋಡಿದಾಗ ಮಾತ್ರ ಜೀವನ ಪಾವನ ಎಂದರು. ಪ್ರತಿಯೊಂದು ಊರಿನಲ್ಲಿ ದೇವರ ಮಂದಿರಗಳು ಇರುವದರಿಂದ ಜೀವನ ಸುಧಾರಣೆಯಾಗುತ್ತದೆ. ಮದ್ಯ- ಮಾಂಸದ ಅಂಗಡಿಯಿದ್ದರೆ ಬದುಕು ಹಾಳಾಗುತ್ತದೆ. ನಮ್ಮ ಮದ್ಯದ ಅಂಗಡಿ ಯಲ್ಲಿ ಸುಧಾರಣೆಯಾಗುವದಿಲ್ಲ. ದೇವ ಮಂದಿರದಲ್ಲಿ ಜೀವನ ಸುಂದರ ಮಯವಾಗಿರುತ್ತದೆ. ಪ್ರತಿ ಗ್ರಾಮಗಳಲ್ಲಿ  ದೇವ ಮಂದಿರಗಳೇ ಇರಬೇಕು ಹೊರತು ಮದ್ಯ ಮಾಂಸದ ಅಂಗಡಿಗಳು ಇರಬಾರದು ಎಂದರು.

ಮಾನವ ಜನ್ಮವು ಗಾಳಿ ಯಲ್ಲಿ ಇಟ್ಟ ಪಣತಿ ಇದ್ದಂತೆ, ದ್ವೀಪದ ಬೆಳಕು ಉರುವಷ್ಟು ಹೇಗೆ ಪ್ರಕಾಶಮಾನವಾಗಿ ಉರಿಯುತ್ತದೆಯೋ ಅದರಂತೆ ಈ ಅಮೂಲ್ಯವಾದ ಜೀವನ ವನ್ನು ಹಾಳು ಮಾಡಿಕೊಳ್ಳದೇ ಭಗವಂತನ್ನು ನೆನೆಯುತ್ತ ಕಾಯಕದಲ್ಲಿ ಜೀವನ ಸಾಗಿಸಬೇಕು. ಈ ಭೂಮಿಯಲ್ಲಿ ಎಲ್ಲರೂ ಕ್ಷಣಿಕ ಜೀವಿಗಳು, ನಾವು ಶೃದ್ದಾ ಭಕ್ತಿಯಿಂದ ಕಾಯಕವನ್ನೇ ಮಾಡಬೇಕು ಅದನ್ನು ಭಗವಂತ ಮೆಚ್ಚುತ್ತಾನೆ. ಎಷ್ಟು ದಿನ ಬದುಕಿದೆವು ಎಂಬುದು ಮುಖ್ಯವಲ್ಲ. ಬದುಕಿದಷ್ಟು ದಿನ ಹೇಗೆ ಬಾಳಿದೆವು ಎಂಬುದು ಮುಖ್ಯ ಎಂದರು.

ಕಾಗವಾಡ ಹಾಗೂ ಸದಲಗಾ ಗುರುದೇವಾಶ್ರಮದ ಡಾ. ಶ್ರೀ ಶ್ರದ್ದಾನಂದ ಮಹಾಸ್ವಾಮಿಗಳಿಗೆ ಶ್ರೀ ಭುವನೇಶ್ವರಿ ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ಗಡಿನಾಡು ಚೇತನ ಪ್ರಶಸ್ತಿ ನೀಡಿ ಗೌರವಿಸಿದರು.

ಉಗಾರ ಗುರು ದೇವಾಶ್ರಮದ ಶ್ರೀ ಬಸಲಿಂಗ ಮಹಾಸ್ವಾಮಿಗಳು  ಗೀತೆಯನ್ನು ಹಾಡಿದರು. ವಾರಕರಿ ಸಂಪ್ರದಾಯದ  ಅಧ್ಯಕ್ಷ ಭರತೇಶ ಲೊಂಡೆ ಕೃಷ್ಣಾ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಮಲಗೌಡ ಪೋಲೀಸ್ ಪಾಟೀಲ, ಮಾಜಿ ಜಿ.ಪಂ. ಸದಸ್ಯ ಚಂದ್ರಶೇಖರ ಗಾಣಿಗೇರ, ಮಾಜಿ ತಾ.ಪಂ. ಸದಸ್ಯ ಚಿದಾನಂದ ಡೂಗನವರ,, ಸಿದ್ದಪ್ಪ ಖಟಾವಿ, ಬಾಳು ನಿಕ್ಕಂ, ನಾರಾಯಣ ಕಟ್ಟಿ, ಉದಯಕುಮಾರ ಮಾನೆ, ಬಿ.ಜಿ. ಮಾನೆ, ಮಹೇಶ ಸೊಲ್ಲಾಪೂರ, ವಿರುಪಾಕ್ಷ ಡೂಗನವರ ಸೇರಿದಂತೆ ಐನಾಪೂರ, ಕೃಷ್ಣಾ ಕಿತ್ತೂರ, ಮೋಳೆ, ಉಗಾರ ಗ್ರಾಮಗಳ ಸಾವಿರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

loading...

LEAVE A REPLY

Please enter your comment!
Please enter your name here