್ವಾಭಿಮಾನ

0
27

ಆ ದಾರಿಯೊಳಗಿನ

ಪ್ರಥಮ ಹೆಜ್ಜೆಯೊಳಗೆ

ಒಂದಿಷ್ಟು ಕನಸು ಕಟ್ಟಿಕೊಂಡೆವು

ವೀತ್ವಕ್ಕೊಂದು ಕಾವು ಕೊಟ್ಟು

ಸ್ವಾಭಿಮಾನಕ್ಕೊಂದು ಧ್ವಜ ಹಿಡಿದು

ನಿಲ್ಲುವ ಧೈರ್ಯ ತಂದುಕೊಂಡೆವು

ಕಿತ್ತೂರು ಎಂದಾಗಲೆಲ್ಲ

ಸ್ವಾತಂತ್ರ್ಯದ ಉಸಿರಿನ ಹಾಸು

ನಮ್ಮ ನಮ್ಮೊಳಗೆ ಇರಲಿ ಒಕ್ಕಟ್ಟು

ನಾಡ ಕಟ್ಟುವ ಭಾಗ್ಯಕ್ಕೆ ಬರದಿರಲಿ ಬಿಕ್ಕಟ್ಟು

ರಾಣಿ ಚೆನ್ನಮ್ಮಾಜಿಯ ದಿಟ್ಟತೆ ಸೊರಗದಿರಲಿ

ದೇಶ ಭಕ್ತಿಯ ಸೊಬಗು ಎದೆ ತುಂಬಿಕೊಂಡಿರಲಿ

ಕನ್ನಡ ನಾಡಿನ ಕೀರ್ತಿ ಕಿತ್ತೂರು

ಚೆನ್ನಮ್ಮಾಜಿ ದಿವ್ಯ ತೇಜದ ಬೆಳಗು

ರಾಯಣ್ಣನ ಧೀರತ್ವಕ್ಕೆ ನಮಿಸು

ಹೆಜ್ಜೆ ಹೆಜ್ಜೆಗೂ ಸ್ವಾತಂತ್ರ್ಯವ ಹರಿಸು

ನಾಡ ನುಡಿಯೊಳು ಏಕತೆಯ ಭರಿಸು

ಸ್ವಾತಂತ್ರ್ಯ ನಂದಾದೀಪ ಆರದಂತಿರಿಸು

ಭೇದ ಭಾವಕ್ಕೆ ಇಂಬುಗೊಟ್ಟು ಕೆಡದಿರು

ನಂಬಿದವರ ಬೆನ್ನಿಗೆ ಚೂರಿ ಹಾಕದಿರು

ಅಲಂಕಾರ ಲಾಲಸೆಯೊಳಗೆ ಮಂಕಾಗದಿರು

ಸ್ವಾಭಿಮಾನ ಬದುಕಿಗೆ ಪಣ ತೊಟ್ಟು ದುಡಿ

ಚೆನ್ನಮ್ಮಾಜಿಯ ವೃತವ ನೆಚ್ಚಿ ನುಡಿ

ಸ್ವಾತಂತ್ರ್ಯದ ಆ ಹೆಮ್ಮೆಗೆ ಮೆಚ್ಚಿ ನಡಿ

ಸ.ರಾ. ಸುಳಕೂಡೆ

ಬೆಳಗಾವಿ

 

 

 

loading...

LEAVE A REPLY

Please enter your comment!
Please enter your name here