ಕಸಾಪ ಸಂಸ್ಥಾಪನಾ ದಿನ ಆಚರಣೆ

0
109

ಯಲ್ಲಾಪುರ : ಅಂತರ್ಜಾಲದಲ್ಲಿ ಕನ್ನಡದ ಮಹತ್ವದ ಅಂಶಗಳನ್ನು ದಾಖಲಿಸುವ ಮೂಲಕ ಯುವಕರಿಗೆ ತಕ್ಷಣ ಕನ್ನಡದ ಮಾಹಿತಿಗಳು ಲಭ್ಯವಾಗುವಂತೆ ಮಾಡುವ ಜೊತೆಗೆ ಯುವಜನಾಂಗದ ಅಶೋತ್ತರಗಳಿಗೆ ಪರಿಷತ್ತು ನಿರಂತರ ಸ್ಪಂದಿಸಬೇಕೆಂದು ತಹಶೀಲ್ದಾರ ರಾಜಶೇಖರ ಡಂಬಳ ಹೇಳಿದರು.ಅವರುಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ 101 ವರ್ಷ ತುಂಬಿದ ಹಿನ್ನಲೆಯಲ್ಲಿ ಹಮ್ಮಿಕೊಂಡ ಸಂಸ್ಥಾಪನಾ ದಿನಾಚಾರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಅನ್ಯ ಭಾಷೆಗಳಿಗೆ ಹೋಲಿಸಿದರೆ ಕನ್ನಡ ದಾಖಲೀಕರಣ ಅಂತರ್ಜಾಲದಲ್ಲಿ ಕಡಿಮೆಯೆನಿಸುತ್ತಿದೆ.ಇಂದಿನ ದಿನಗಳಲ್ಲಿ ಪುಸ್ತಕ ವಾಚನದ ಪ್ರವೃತ್ತಿ ನಶಿಸುತ್ತಿದೆ. ಕಾರಣ ಕನ್ನಡದ ಇತಿಹಾಸ ತಿಳಿದುಕೊಳ್ಳಲು ಸುಲಭವಾಗುವಂತೆ ಅಂತರ್ಜಾಲದಲ್ಲಿ ಕನ್ನಡದ ಕ್ರೂಡೀಕರಣ ಆಗಬೇಕು ಎಂದರು.ಉಪನ್ಯಾಸಕ ಸುಬ್ರಹ್ಮಣ್ಯ ಭಟ್ಟ ಪರಿಷತ್ತು ಬೆಳೆದು ಬಂದ ದಾರಿಯ ಕುರಿತು ಉಪನ್ಯಾಸ ನೀಡಿ ಕನ್ನಡ ಕರ್ನಾಟಕದ ಸಾರ್ವಭೌಮ ಭಾಷೆ ಕರ್ನಾಟಕದಲ್ಲಿಯೇ ಕನ್ನಡ ಅಲ್ಪ ಸಂಖ್ಯಾತ ಭಾಷೆಯಾಗಿ ಕಳೆದು ಹೋದರೆ ಮತ್ತೆಲ್ಲಿಯೂ ಬೆಳೆಯಲು ಸಾಧ್ಯವಿಲ್ಲ. ಕನ್ನಡವನ್ನು ಆಡು ಭಾಷೆಯಾಗಿ ಬಳಸುವ ಮೂಲಕ ಪ್ರತಿ ಮನೆ ಮನಗಳಲ್ಲಿ ಬೆಳಗುವಂತೆ ಮಾಡಬೇಕು ಎಂದರು.ಹಿರಿಯ ಸಾಹಿತಿ ನಾ,ಸು ಭರತನಹಳ್ಲಿ ಮಾತನಾಡಿ ಆಡುಮಾತಿನೊಳಗೆ ಉಳಿದ ಭಾಷೆಗಳು ಮಿಶ್ರವಾಗಿ ಕನ್ನಡದ ಅಶ್ಮೀತೆಗೆ ಧಕ್ಕೆಯಾಗುವ ಅಪಾಯವಿದೆ.ಕಾರಣ ಭಾಷಾಭಿಮಾನದ ಜಾಗೃತಿಯ ಜೊತೆಗೆ ಪಠ್ಯೇತರವಾಗಿ ಮಕ್ಕಳಲ್ಲಿ ಕನ್ನಡ ಅಭಿರುಚಿಯನ್ನು ಪ್ರಚೋದಿಸುವ ತ್ವರಿತ ಕಾರ್ಯ ಆಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಮಾತನಾಡಿ ಸಾಹಿತ್ಯ ಪರಿಷತ್ತು ಎಲ್ಲರನ್ನು ಜೊತೆಗೂಡಿಸಿಕೊಂಡು ಅಧ್ಯಕ್ಷ ಸ್ಥಾನಕ್ಕೆ ಚ್ಯುತಿಬಾರದಂತೆ ಕೊಂಡಯ್ಯಬೇಕಾದಹೊಣೆ ನನ್ನಮೇಲಿದೆ ಅಜೀವ ಸದಸ್ಯರ ಸಂಖ್ಯೆ ಹೆಚ್ಚಿಸುವದರ ಜೊತೆಗೆ ಸದಭಿರುಚಿಯ ಸಾಹಿತ್ಯ ಚಟುವಟಿಕೆಗಳ ಮೂಲಕ ಕನ್ನಡ ಕಟ್ಟುವ ಕೆಲಸ ಮುಂದುವರೆಸುವದಾಗಿ ತಿಳಿಸಿದರು.
ಕ್ಷೇತ್ರಶಿಕ್ಷಣಾಧಿಕಾರಿ ನಾರಾಯಣ ನಾಯಕ ,ನಿಕಟಪೂರ್ವ ಅಧ್ಯಕ್ಷಶ್ರೀರಂಗಕಟ್ಟಿ , ಜಿಲ್ಲಾಕಸಾಪ ಸಮಿತಿಯಗೌರವಸಲಹೆಗಾರ ಎಚ್.ಬಿನಾಯಕ,ಸಂಜೀವಿನಿ ಸಂಸ್ಥೆಅಧ್ಯಕ್ಷ ಉಲ್ಲಾಸಶಾನಭಾಗ ಮಾತನಾಡಿದರು. ಜಿಲ್ಲಾಕಸಾಪ ಸಮಿತಿಯ ಶೀವಲೀಲಾಹುಣಸಗಿ ಉಪಶ್ಥಿತರಿದ್ದರು.ಜಿಲ್ಲಾ ಸಹಕಾರ್ಯದರ್ಶಿ ಸುಬ್ರಾಯ ಬಿದ್ರೆಮನೆ ಸ್ವಾಗತಿಸಿದರು.ಭಾರತ ಸೇವಾದಳದ ತಾಲೂಕು ಸಂಘಟಕ ಸಂಜೀವಕುಮಾರ ಹೊಸ್ಕೇರಿ ನಿರ್ವಹಿಸಿದರು.ಪತ್ರಕರ್ತ ಶ್ರೀಧರ ವಂದಿಸಿದರು.

loading...

LEAVE A REPLY

Please enter your comment!
Please enter your name here