ಭರದಿಂದ ಸಾಗಿದ ಹೂಳೆತ್ತುವ ಕಾರ್ಯ

0
28

ದಾಂಡೇಲಿ : ದಾಂಡೇಲಿ ಸಮೀಪದ ಬೇಡರ ಶಿರಗೂರ ಗ್ರಾಮದ ಹಾಗೂ ಬಡಾಕಾನಶಿರಡಾದ ಕೆರೆಯ ಹೂಳೆತ್ತುವ ಕಾರ್ಯ ಸ್ಥಳೀಯ ವೆಸ್ಟ್‍ಕೋಸ್ಟ್ ಪೇಪರ ಮಿಲ್ಲಿನಿಂದ, ಪೇಪರ್ ಮಿಲ್ಲಿನ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಮಾರ್ಗದರ್ಶನದಲ್ಲಿ ಭರದಿಂದ ಸಾಗಿದೆ. ಅಲ್ಲಿನ ಗ್ರಾಮಸ್ಥರು ಟ್ರಾಕ್ಟ್‍ರಗಳಲ್ಲಿ ಹೂಳೆತ್ತಿದ ಮಣ್ಣನ್ನು ತುಂಬಿಕೊಂಡು ತಮ್ಮ ಹೊಲಗಳಿಗಾಗಿ ಸಂತೋಷದಿಂದ ಉಪಯೋಗಿಸುತ್ತಿದ್ದಾರೆ.
ಬೇಡರ ಶಿರಗೂರ ಗ್ರಾಮದ ಕೆರೆಯಲ್ಲಿ ಸುಮಾರು 500 ಟಿಪ್ಪರ್ ಹಾಗೂ 200ಕ್ಕೂ ಹೆಚ್ಚು ಟ್ರಾಕ್ಟರನಲ್ಲಿ ಮಣ್ಣನ್ನು ಸಾಗಿಸಲಾಗಿದೆ. ಬಡಾಕಾನ ಶಿರಡಾದ ಸುಮಾರು 10 ಎಕರೆ ವಿಸ್ತಾರದ ಕೆರೆಯ ಹೂಳೆತ್ತುವ ಕಾರ್ಯ ಕಳೆದ ಬುಧವಾರದಿಂದ ಆರಂಭಗೊಂಡು ಬರುವ ಮಂಗಳವಾರದವರೆಗೆ ಮುಂದುವರೆಯಲಿದೆ.
ಸ್ಥಳಕ್ಕೆ ಆಗಮಿಸಿ ಕಾರ್ಯ ಪರಿಶೀಲಿಸಿದ ಸ್ಥಳೀಯ ಕಾಗದ ಕಾರ್ಖಾನೆಯ ಸಂಪರ್ಕ ಅಧಿಕಾರಿ ರಾಜೇಶ ತಿವಾರಿ ಹೂಳೆತ್ತುವ ಕಾರ್ಯದಿಂದ ಮುಂಬರುವ ದಿನಗಳಲ್ಲಿ ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹಣೆಗೆ ಅನುಕೂಲವಾಗುವದಲ್ಲದೆ ಹೂಳೆತ್ತಿದ ಕೆರೆಯ ಫಲವತ್ತಾದ ಮಣ್ಣು ರೈತರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದರು. ಕಾಗದ ಕಾರ್ಖಾನೆಯ ಓಂ ಗೌರ್, ಎಸ್.ಎಮ್ ಪಾಟೀಲ ಸ್ಥಳದಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here