ಬಸವಣ್ಣ ಲಿಂಗಾಯತರ ಆಸ್ತಿಯಲ್ಲ, ಸರ್ವಧರ್ಮದ ಶರಣ

0
65

ಜಗಜ್ಯೋತಿ ಬಸವೇಶ್ವರ ಜಯಂತಿಯಂದು ಸಚಿವ ಜಾರಕಿಹೊಳಿ ಹೇಳಿಕೆ
ಬೆಳಗಾವಿ 09: ಮಾನವತಾವಾದಿ ಬಸವಣ್ಣನವರನ್ನು ಲಿಂಗಾಯತರ ಆಸ್ತಿಯಲ್ಲ ಸರ್ವ ಧರ್ಮದವರೂ ಆರಾಧಿಸುವ ಶರಣರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಇಂದಿಲ್ಲಿ ಹೇಳಿದರು.
ಅವರು ಸೋಮವಾರ ನಗರದ ಬಸವೇಶ್ವರ ವೃತ್ತದ ಉದ್ಯಾನವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಅಖಿಲ ಭಾರತ ವೀರಶೈವ ಮಹಾಸಭೆ, ಜಿಲ್ಲಾ ಘಟಕ ಬೆಳಗಾವಿ, ಶ್ರೀ ಜಗಜ್ಯೋತಿ ಬಸವೇಶ್ವರ ಉತ್ಸವ ಕೇಂದ್ರ ಸಮಿತಿ ಸಂಯುಕ್ತಾಶ್ರಯದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದಿದ್ದವರು ಅವರನ್ನು ಲಿಂಗಾಯತ ಸಮಾಜದವರು ತಮ್ಮ ಆಸ್ತಿ ಎಂದು ತಿಳಿದುಕೊಂಡು ಬೇರೆಯವರಿಗೆ ಅವರನ್ನು ಆರಾಧಿಸುವ ಅವಕಾಶ ನೀಡುತ್ತಿಲ್ಲ. ಬಸವಾದಿ ಶರಣರ ವಚನ ಸಾಹಿತ್ಯಗಳನ್ನು ಎಲ್ಲರೂ ಪಾಲಿಸುತ್ತಿದ್ದಾರೆ. ಬಸವಣ್ಣನವರನ್ನು ಲಿಂಗಾಯತರು ಕರ್ನಾಟಕ ಬಿಟ್ಟು ಹೊರ ದೇಶಗಳಾದ ಜಪಾನ, ಚೀನಾ, ಅಮೇರಿಕೆಯ ವರೆಗೆ ಅವರನ್ನು ಪ್ರಯಾಣಿಸಲು ಬಿಡದಿದ್ದರೂ ಅವರು ವಿಶ್ವಗುರುವಾದರು. ಅವರ ತತ್ವಾದರ್ಶಗಳನ್ನು ಎಲ್ಲರು ಅಳವಡಿಸಿಕೊಂಡು ಏಕತೆಯಿಂದ ಬಾಳಬೇಕೆಂದು ಅವರು ಹೇಳಿದರು.
ಬಸವಣ್ಣನವರು ಸಮಾಜದ ಹೆಸರಿಗೆ ಮಾತ್ರ ವಿಶ್ವ ಗುರುವಾಗಿದ್ದಾರೆ. ಆದರೆ ಅವರನ್ನು ಕರ್ನಾಟಕದಿಂದ ಆಚೇಗೆ ಬಿಡಲಿಲ್ಲ. ಆದರೂ ಅವರು ವಿಶ್ವಗುರುವಿಗೆ ಅರ್ಹವ್ಯಕ್ತಿಯಾಗಿದ್ದಾರೆ. ಲಿಂಗಾಯತರು ಅವರನ್ನು ನಮ್ಮ ಆಸ್ತಿ ಎಂದು ತಿಳಿದುಕೊಂಡು ಬೇರೆ ಸಮುದಾಯದವರಿಗೆ ಬಿಡುತ್ತಿಲ್ಲ. ಬಸವಣ್ಣನವರು ಎಲ್ಲ ಸಮುದಾಯಕ್ಕೆ ಬೇಕಾದವರು ಅವರ ವಚನ ಸಾಹಿತ್ಯಗಳನ್ನು ಪಾಲಿಸುವ ಅಗತ್ಯವಿದೆ ಎಂದರು.
ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಬಸವೇಶ್ವರ ಜಯಂತಿಗಳನ್ನು ಆಚರಿಸುತ್ತಾ ಬರುತ್ತಿವೆ. ಆದರೆ 12ನೇ ಶತಮಾನದ ಬಸವಣ್ಣನವರ ವಿಚಾರಗಳನ್ನು ಸಮಾಜದಲ್ಲಿರುವ ಯಾರೋಬ್ಬರು ಅಳವಡಿಸಿಕೊಂಡಿಲ್ಲ. ಅವರ ವಿಚಾರ ತತ್ವಗಳನ್ನು ಎಲ್ಲರೂ ತಿಳಿದುಕೊಳ್ಳುವುದು ಅವಶ್ಯವಾಗಿದೆ ಅಂದಾಗ ಮಾತ್ರ ಬಸವೇಶ್ವರ ಜಯಂತಿಗೆ ಅರ್ಥ ಬರುತ್ತದೆ ಎಂದರು.
12ನೇ ಶತಮಾನದ ಅನುಭವ ಮಂಟಪದಲ್ಲಿ ಬಸವಣ್ಣನವರು ಹೇಳಿದ ವಚನ ಸಾಹಿತ್ಯವನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಅವರು ಭಾರತದ ಸಂವಿಧಾನ ಮುಖಾಂತರ ಇಡೀ ದೇಶಕ್ಕೆ ಅವರ ಸಂದೇಶವನ್ನು ತಿಳಿಸಿದ್ದಾರೆ. ಆದರೆ ಇಂದಿನ ದಿನಮಾನಗಳಲ್ಲಿ ಜನಸಾಮಾನ್ಯರಿಗೆ ಅವರ ಇತಿಹಾಸಗಳನ್ನು ಓದಲು ಸಮಯವಿಲ್ಲ. ಇತಿಹಾಸ ಎಲ್ಲಿಯವರೆಗೆ ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯ ವರೆಗೆ ಬುದ್ದ, ಬಸವಣ್ಣ, ಅಂಬೇಡ್ಕರ ಅವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ಬಸವಣ್ಣನವರ ವಚನದಲ್ಲಿ ಹೊಲಯ ಎಂದು ಎಲ್ಲೂ ಉಚ್ಛರಿಸಿಲ್ಲ. ಹೋಲಸು ಕೆಲಸ ಮಾಡಿದವರು ಮಾತ್ರ ಹೊಲಯ ಎಂದು ಸಂಭೋಧಿಸಿದ್ದಾರೆ. ಇರದ ಅರ್ಥ ಕಾಯಕವೇ ಕೈಲಾಸ್ ಕಾಯಕ ಮಾಡುವವರು ಕೈಲಾಸದಲ್ಲಿ ಸುಖ ಅನುಭವಿಸುತ್ತಾರೆ. ಕಾಯಕ ಮಾಡದೇ ಉದಾಸಿನತೆ ತೋರುವವರಿಗೆ ಮಾತ್ರ ಹೊಲಯ ಎಂದು ವಚನಗಳಲ್ಲಿ ತಿಳಿದು ಬರುತ್ತದೆ. ಮೊದಲು ಶರಣರ ವಿಚಾರಗಳನ್ನು ನಮ್ಮಲ್ಲಿ ಅಳವಡಿಸಿಕೊಂಡಾಗ ಕೆಟ್ಟ ವಿಚಾರಗಳು ಮಾಯವಾಗುತ್ತದೆ ಎಂದು ಸಚಿವ ಜಾರಕಿಹೊಳಿ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದ ಸುರೇಶ ಅಂಗಡಿ, ಬಸವಣ್ಣನವರನ್ನು ಲಿಂಗಾಯತರು ಕಟ್ಟಿಹಾಕಿಲ್ಲ. ಬಸವಣ್ಣನವರ ಮೂರ್ತಿಯನ್ನು ಲಂಡನಿನಲ್ಲಿ ಪ್ರತಿಷ್ಠಾಪಿಸಿದ ಶ್ರೇಯ ನಮ್ಮ ಭಾರತೀಯರಲ್ಲಿದೆ. ಆದರೆ ವಿಪರ್ಯಾಸವೆಂದರೆ 12 ನೇ ಶತಮಾನದಲ್ಲಿದ್ದ ಕೆಟ್ಟ ಪರಿಸ್ಥಿತಿ ಇಂದಿಗೂ ಜೀವಂತವಾಗಿದೆ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.
ಇಂದಿನ ಯುವಕರು ಹೆಚ್ಚು ಕೆಲಸದ ಕಡೆ ಹೆಚ್ಚಿನ ಜವಾಬ್ದಾರಿ ನೀಡಬೇಕು. ಯುವಕರು ಕಾಯಕ ಮಾಡಿ ಬೇರೆಯವರಿಗೆ ದುಡಿಯಲು ಸ್ಪೂರ್ತಿ ನೀಡಬೇಕು. ಈಗಾಗಲೇ ಕೇಂದ್ರ ಸರಕಾರ ಶ್ರೀಮಂತರ ಮೇಲೆ ಹೆಚ್ಚಿನ ಕರವನ್ನು ವಸೂಲಿ ಮಾಡಿ ಬಡವರಿಗೆ ನೀಡುತ್ತಿದೆ. ಬಸವೇಶ್ವರರ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡಾಗ ಮಾತ್ರ ಬಸವಜಯಂತಿಗೆ ಅರ್ಥ ಬರುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಸಂಜಯ ಪಾಟೀಲ, ಎಮ್.ಬಿ.ಝೀರಲಿ, ಜಿಲ್ಲಾಧಿಕಾರಿ ಎನ್.ಜಯರಾಮ್, ನಗರ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇಗೌಡ, ಜಿಲ್ಲಾ ಪಂಚಾಯತ್ ಸಿಇಓ ಬಗಾದಿ ಗೌತಮ, ಮಾಜಿ ಮಹಾಪೌರ ಸಿದ್ದನಗೌಡ ಪಾಟೀಲ, ನಗರ ಸೇವಕರಾದ ಸರಳಾ ಹೇರೇಕರ, ರಮೇಶ ಕಳಸಣ್ಣವರ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here