ವಿಜೃಂಭಣೆಯಿಂದ ಜರುಗಿದ ಬಸವಣ್ಣನ ಮೆರವಣಿಗೆ

0
39

ಬೆಳಗಾವಿ 09: ಶ್ರೀ ಬಸವ ಜಯಂತಿಯ ಅಂಗವಾಗಿ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಸೋಮವಾರ ಸಂಜೆ ನಗರದ ಚನ್ನಮ್ಮ ವೃತ್ತದಲ್ಲಿ ಜಿಲ್ಲಾ ಉಸ್ತುವರಿ ಸಚಿವ ಸತೀಶ ಜಾರಕಿಹೊಳಿ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಚನ್ನಮ್ಮ ವೃತ್ತದಲ್ಲಿನ ಪ್ರತಿಮೆಗೆ ಮಾಲಾಪ್ರಣೆ ಮಾಡಿ, ಮೆರಣಿಗೆಗಾಗಿ ಸಿದ್ದ ಪಡಿಸಲಾಗಿದ್ದ ರಥದಲ್ಲಿಯ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅನೇಕ ರೂಪಕಗಳು, ಕಲಾ ತಂಡಗಳು ಮೆರವಣಿಗೆಗೆ ಶೋಭೆ ತಂದವು. ಲಿಂಗಾಯತ ಸಂಘಟನೆಯ ಮಹಿಳೆಯರು ಸಮವಸ್ತ್ರದಲ್ಲಿ ವಚನ ಗಾಯನದೊಂದಿಗೆ ಕೋಲಾಟ ಆಡಿರುವದು ಗಮನ ಸೆಳೆಯಿತು.
ಬಸವ ಜಯಂತಿಯ ಮೆರವಣಿಗೆ ಸಾಯಂಕಾಲ 4 ಗಂಟೆಗೆ ಚನ್ನಮ್ಮ ವೃತ್ತದಿಂದ ಆರಂಭಗೊಂಡು ಕಾಕತಿವೇಸ, ಗಣಪತಿಗಲ್ಲಿ, ಮಾರುತಿಗಲ್ಲಿ, ರಾಮದೇವಗಲ್ಲಿ, ಸಮಾದೇವಿಗಲ್ಲಿ ಮಾರ್ಗವಾಗಿ ಕಾಲೇಜು ರಸ್ತೆಯ ಕೆಎಲ್‍ಇ ಸಂಸ್ಥೆಯ ಜಿಎ ಹೈಸ್ಕೂಲಿಗೆ ಬಂದು ಕೊನೆಗೊಳ್ಳಲಿದೆ. ಇಲ್ಲಿ ಬಸವ ಭಕ್ತರಿಗೆ ಮಹಾಪ್ರಸಾದ ಸ್ವೀಕರಿಸಿದರು.
ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ, ಸಂಸದ ಸುರೇಶ ಅಂಗಡಿ, ಕಾಂಗ್ರೆಸ್ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ, ಮೇಯರ್ ಸರಿತಾ ಪಾಟೀಲ, ಶಾಸಕ ಫಿರೋಜ್ ಸೇಠ, ಎಪಿಎಮ್‍ಸಿ ಅಧ್ಯಕ್ಷ ಶಿವನಗೌಡ ಪಾಟೀಲ, ಶಾಸಕ ಸಂಜಯ ಪಾಟೀಲ, ಮಾಜಿ ಶಾಸಕ ಅಭಯ ಪಾಟೀಲ, ಶಶಿಕಾಂತ ಸಿದ್ನಾಳ, ರಾಜೀವ ಟೋಪಣ್ಣವರ, ಆನಂದ ದೇಸಾಯಿ, ಶಂಕರಣ್ಣ ವಿಜಾಪೂರ, ಶಂಕರ ಗುಡಸ್, ಕಲ್ಯಾಣರಾವ ಮುಚಳಂಬಿ, ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಮಹಾನಗರ ಪಾಲಿಕೆಯ ಆಯುಕ್ತ ಜಿ.ಪ್ರಭು, ನಗರ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ಸೇರಿದಂತೆ ಅನೇಕ ಮುಂಖಡರು ಮತ್ತು ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here