ಗಾಂಧಿನಗರದಲ್ಲಿ ಮೇಳೈಸಿದ ಶಿವಾಜಿ ಜಯಂತಿ

0
43

ದಾಂಡೇಲಿ : ಸ್ಥಳೀಯ ಗಾಂಧಿನಗರದ ಶ್ರೀ ಛತ್ರಪತಿ ಶಿವಾಜಿ ಯುವ ಸೇವಾ ಟ್ರಸ್ಟ್ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವು ಸೋಮವಾರ ಛತ್ರಪತಿ ಶಿವಾಜಿ ಜಯಂತಿಯನ್ನು ಗಾಂಧಿನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಮುಂಜಾನೆ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರ ಪೊಲೀಸ್ ಠಾಣೆಯ ಪಿಎಸೈ ಕುಮಾರ ಹಾಡಕರ ಅವರು ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಈ ರಾಷ್ಟ್ರಕಂಡ ಅಪರೂಪದ ಅಪೂರ್ವ ವ್ಯಕ್ತಿಗಳಲ್ಲಿ ಶಿವಾಜಿ ಮಹಾರಾಜರು ಒಬ್ಬರು. ಶಿವಾಜಿಯವರಲ್ಲಿದ್ದ ದೇಶಭಕ್ತಿ, ದೇಶಕ್ಕಾಗಿ ಅವರು ಸಂಘಟಿಸಿದ್ದ ಹೋರಾಟ ಸ್ಮರಣೀಯ. ಇಂಥಹ ದಾರ್ಶನಿಕ ವ್ಯಕ್ತಿಗಳ ಜಯಂತಿಯನ್ನು ಆಚರಿಸಿಕೊಳ್ಳುವುದರ ಮೂಲಕ ಪ್ರತಿಯೊಬ್ಬರು ದೇಶಪ್ರೇಮವನ್ನು ಮೈಗೂಡಿಸಿ ಸುಸಂಸ್ಕøತ ನಾಡು ಕಟ್ಟಲು ಪಣ ತೊಡಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ. ಛತ್ರಪತಿ ಶಿವಾಜಿ ಯುವ ಸೇವಾ ಟ್ರಸ್ಟಿನ ಅಧ್ಯಕ್ಷ ಕೃಷ್ಣ ಪ್ರಕಾಶ ಗೌಡ ಹಾಗೂ ಪದಾಧಿಕಾರಿಗಳಾದ ವಿಜಯ ಮಿರಾಶಿ, ಕಿಶೋರ.ಎ. ಅವಾಟೆ, ಸಂತೋಷ.ಎ.ತಾಂಬುಡಾ, ಜ್ಞಾನೇಶ್ವರ.ಆರ್. ಕುಂಬಾರ, ರವಿಕುಮಾರ.ಜಿ. ಗೌಡಾ, ಮಂಜುನಾಥ.ಎಚ್.ಕುಟ್ರಿ, ಮಹೇಶ.ಎನ್. ಶಿವಳ್ಳಿಮಠ, ದೊಂಡಿಬಾ.ಎಸ್.ಗಾಡೇಕರ, ಸಂಜಯ.ಎಸ್.ನಾಯ್ಕ, ಸಾಗರ.ಎ.ಬೋಕರೆ ಮತ್ತು ಸ್ಥಳೀಯ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ವಿಜಯ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಸಂಜೆ ಶಿವಾಜಿ ಮಹಾರಾಜರ ಭವ್ಯ ಮೂರ್ತಿಯ ಶೋಭಾಯಾತ್ರೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗಮನ ಸೆಳೆಯಿತು.

loading...

LEAVE A REPLY

Please enter your comment!
Please enter your name here