ಬಸವಣ್ಣನ ಮಾರ್ಗದಲ್ಲಿ ನಡೆದರೆ ವಿಶ್ವಶಾಂತಿ ಸಾಧ್ಯ: ಬಸವಲಿಂಗ ಮಹಾಸ್ವಾಮಿಗಳು

0
61

ದಾಂಡೇಲಿ : ಜಗತ್ತಿಗೆ ಶಾಂತಿಮಂತ್ರವನ್ನು ಸಾರಿದ ಬಸವಣ್ಣ ನಮ್ಮ ರಾಷ್ಟ್ರದ ಬಹುದೊಡ್ಡ ಆಸ್ತಿ. ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತೀಡಿ ಸಮಾಜ ಸುಧಾರಣೆಯ ಮಹಾನ್ ಸುಧಾರಕರಾಗಿ ಗಮನ ಸೆಳೆದ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರು ನಡೆದಾಗ ವಿಶ್ವದಲ್ಲಿಯೆ ಶಾಂತಿ ಸ್ಥಾಪನೆಯಾಗಲು ಸುಲಭ ಸಾಧ್ಯ ಎಂದು ನವಲಗುಂದದ ಗವಿಮಠದ ಸ್ವಾಮಿಗಳಾದ ಬಸವಲಿಂಗ ಮಹಾಸ್ವಾಮಿಗಳು ನುಡಿದರು.

ಅವರು ಸೋಮವಾರ ರೂ.18 ಲಕ್ಷ ವೆಚ್ಚದಲ್ಲಿ ಸ್ಥಳೀಯ ದಾನಿಗಳಿಂದ ನಿರ್ಮಾಣಗೊಂಡ ನಗರದ ಮೃತ್ಯುಂಜಯ ಮಠದÀ ಮಹಾದ್ವಾರವನ್ನು ಲೋಕಾರ್ಪಣೆ, ಸಾಮೂಹಿಕ ವಿವಾಹ ಮತ್ತು ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಮಾತನಾಡುತ್ತಿದ್ದರು. ಆಧುನಿಕ ಜೀವನಶೈಲಿಗೆ ಮಾರುಹೋಗುತ್ತಿರುವ ಇಂದಿನ ದಿನಮಾನದಲ್ಲಿ ಸಂಸ್ಕøತಿ, ಸಂಸ್ಕಾರಗಳು ಮರೆಯಾಗುತ್ತಿವೆ. ಕಾಲಕ್ಕೆ ತಕ್ಕಂತೆ ಪರಿವರ್ತನೆ ಜಗದ ನಿಯಮವಾದರೂ, ನಮ್ಮ ಆಚಾರ-ವಿಚಾರ, ಸಂಸ್ಕøತಿ, ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದರ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗಬೇಕೆಂದ ಅವರು ವೀರಶೈವ ಸಮಾಜ ಸಮಾಜದ ಉನ್ನತಿಗೆ ವಿಶೇಷವಾಗಿ ಶ್ರಮಿಸುತ್ತಿರುವುದು ಹೆಮ್ಮೆಯ ವಿಚಾರ. ಸಮಾಜ ಬಾಂಧವರು ಒಗ್ಗಟ್ಟಿನಿಂದ ಸಮಾಜವನ್ನು ಸದೃಢಗೊಳಿಸುವುದರ ಮೂಲಕ ವೀರಶೈವ ಸಮಾಜವನ್ನು ವಿಶ್ವಮಟ್ಟಕ್ಕೆ ಪಸರಿಸಬೇಕೆಂದು ಕರೆ ನೀಡಿದರು.

ವಿಧಾನ ಪರಿಷತ್ತಿನ ಸದಸ್ಯರಾದ ಎಸ್.ವಿ. ಸಂಕನೂರ ಮಾತನಾಡಿ ಬಸವಣ್ಣನವರ ವಚನಗಳು ಕೇಳುವುದರ ಜೊತೆ ಅವುಗಳನ್ನು ರೂಡಿಯಲ್ಲಿ ತರಲು, ಅವರು ಹಾಕಿ ಕೊಟ್ಟಂತಹ ಕಾಯಕದ ಹಾಗು ದಾಸೋಹದ ಪರಿಪಾಠಗಳನ್ನು ನಾವುಗಳು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ಹೆಚ್ಚು ಆಸಕ್ತಿ ವಹಿಸಿಕೊಳ್ಳಬೇಕಾಗಿದೆ ಎಂದರು.

ಮಾಜಿ ಶಾಸಕ ಸುನಿಲ ಹೆಗಡೆ ಮಾತನಾಡಿ 12 ನೇಯ ಶತಮಾನದಲ್ಲಿ ಬಸವಣ್ಣ ಹಾಕಿ ಕೊಟ್ಟ ಮಾನವ ಧರ್ಮದ ಭೋದನೆ ಇಡಿ ವಿಶ್ವಕ್ಕೆ ಆದರ್ಶ ತತ್ವದ ಭೋದನೆಯಾಗಿದೆ, ಇಂದು ಇಂಗ್ಲೆಂಡ್ ನಂತಹ ರಾಷ್ಟ್ರಗಳಲ್ಲಿ ಬಸವಣ್ಣನ ಪ್ರತಿಮೆಗಳು ನಿರ್ಮಾಣಗೊಳ್ಳುತ್ತಿರುವುದು ಇದಕ್ಕೆ ಸಾಕ್ಷಿ ಎಂದು ನುಡಿದರು.

ನಗರ ಸಭೆಯ ಅಧ್ಯಕ್ಷ ನಾಗೇಶ ಸಾಳುಂಕೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮೃತ್ಯುಂಜಯ ಮಠಕ್ಕೆ ನೂತನವಾಗಿ ಬ್ಯೆಲಪಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ನೀರಿನ ಟ್ಯಾಂಕಿನಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿ ಕೊಡಲಾಗುವುದೆಂದರು.

ಇದೇ ಸಂದರ್ಭದಲ್ಲಿ ಮಾಹಾದ್ವರದ ನಿರ್ಮಾಣಕ್ಕೆ ಸಹಾಯ ಮಾಡಿದ ದಾನಿಗಳನ್ನು, ದ್ವಾರ ನಿರ್ಮಾಣದ ಕುಶಲಕರ್ಮಿಗಳನ್ನು, ಅತಿಥಿಗಳನ್ನು ಬಸವಲಿಂಗ ಮಾಹಾಸ್ವಾಮಿಗಳು ಶಾಲು ಹೊದಿಸಿ ಸತ್ಕರಿಸಿದರು. ಮಠದಲ್ಲಿನ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 5 ನವದಂಪತಿಗಳ ವಿವಾಹ ನೆರವೇರಿಸಲಾಯಿತು.

ವೇದಿಕೆಯಲ್ಲಿ ವೀರಶ್ಯೆವ ಸಮಾಜದ ಗೌರವಾಧಕ್ಷ ಸಿ.ಎಸ್. ವಸ್ತ್ರದ, ಕೆ.ಎಸ್. ಪಾಟೀಲ, ಹಳಿಯಾಳದ ನಗರಸಭಾ ಸದಸ್ಯ ಶೆಟನ್ನವರ, ಡಾ .ಎನ್.ಜಿ. ಬ್ಯಾಕೊಡ, ಕೋಗಿಲವನದ ಗ್ರಾಮ ಪಂಚಾಯ್ತಿ ಸದಸ್ಯರಾದ ಅಶೋಕ ನಾಯ್ಕ. ಶಿವಲೀಲಾ ಎಸ್. ಹೀರೆಮಠ ಉಪಸ್ಥಿತರಿದ್ದರು.

ವೀರಶ್ವೆವ ಸಮಾಜದ ಅಧ್ಯಕ್ಷ ಅಶೋಕ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೀರಶೈವ ಸಮಾಜದ ಕಾರ್ಯದರ್ಶಿ ಶಿವಬಸಪ್ಪ. ಚ. ನರೇಗಲ ನಿರೂಪಿಸಿದರು. ಪ್ರಕಾಶ ಹೈದರಿ ವಂದನಾರ್ಪಣೆ ಸಲ್ಲಿಸಿದರು. ಹಿರಿಯ ಪತ್ರಕರ್ತ ಯು.ಎಸ್.ಪಾಟೀಲ ಸಹಕರಿಸಿದರು.

loading...

LEAVE A REPLY

Please enter your comment!
Please enter your name here