ಸಾಹಿತ್ಯದ ರಚನೆ ಸರಳವಲ್ಲ : ರೇವಡಿಗಾರ

0
75

ಸಿಂದಗಿ,22- ಕಾವ್ಯ ಮತ್ತು ಸಾಹಿತ್ಯದ ರಚನೆ ಸರಳವಾದ ಮಾತಲ್ಲ ಅದು ಮನಸ್ಸಿನ ಭಾವನೆ ಗಳಿಂದ ಮಾತ್ರ ಹೊರಹೊಮ್ಮಿದಾಗ ಮಾತ್ರ ಕಾವ್ಯ ಮತ್ತು ಸಾಹಿತ್ಯ ರೂಪಗೊಳ್ಳುವುದು ಎಂದು ಹಿರಿಯ ಪತ್ರಕರ್ತ ರೇ.ಚ.ರೇವಡಿಗಾರ ಹೇಳಿದರು.

ಪಟ್ಟಣದ ಜ್ಞಾನಭಾರತಿ ಪ್ರಾಥಮಿಕ ಶಾಲಾ ಸಭಾಭವನದಲ್ಲಿ  ಕೇಶವಜಿ ಪ್ರಕಾಶನ ಯಾಳವಾರ ಹಾಗೂ ಶ್ರೀಸಿದ್ದೇಶ್ವರ ಡಿ.ಇಡಿ ಕಾಲೇಜ್  ಇವರ ಸಹಯೋಗದಲ್ಲಿ ಶಿಕ್ಷಕ ಗುಂಡಪ್ಪ ರಾ ಕುಂಬಾರ ಅವರ ಸ್ವರಚಿತ ಶಿಚೈತನ್ಯಷಿ ಕವನಸಂಕಲನ ಬಿಡುಗಡೆ ಸಮಾರಂಭದಲ್ಲಿ ಕವನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿ, ಪ್ರತಿಯೊಬ್ಬ ಯುವಕರು ಕಾವ್ಯಗಳು ರಚನೆಯಲ್ಲಿ ಹೆಚ್ಚಿನ ಒಲವನ್ನು ತೋರಿಸುವುದರ ಮೂಲಕ ಮುಂದಿನ ಪೀಳಿಗೆಗೆ ಸಾಹಿತ್ಯದಲ್ಲಿನ ಭಾವನೆಗಳು ಬಿಂಬಿಸಬೇಕು ಎಂದು ಹೇಳಿದರು.

ವಿಜಾಪೂರದ ಕವಿಯತ್ರಿ ಕೆ.ಸುನಂದಾ ಅವರು ಮಾತನಾಡಿ, ಹೆಣ್ಣು ಮಕ್ಕಳು ಬಂಗಾರದ ಮೋಹವನ್ನು ಬಿಟ್ಟು ಪ್ರತಿಯೊಬ್ಬರು ಶಿಕ್ಷಣವೆಂಬ ಸಿಂಗಾರದೆಡೆಗೆ ಸಾಗಬೇಕು, ಹೆಣ್ಣು ಇಂದಿನ ದಿನ ಜಗತ್ತಿನೊಂದಿಗೆ ಬೆರೆತು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿ ಮಕ್ಕಳಿಗೆ ಶಿಕ್ಷಣ ಮತ್ತು ಸಾಹಿತ್ಯದೆಡೆಗೆ ಕೊಂಡಯ್ಯಬೇಕು ಎಂದು ಹೇಳಿದರು.

ಜೆಡಿಎಸ್ ಯುವ ಧುರೀಣ ಅಶೋಕ ಮನಗೂಳಿ ಮಾತನಾಡಿ, ಸಿಂದಗಿಯು ಒಂದು ಸಾಹಿತ್ಯದ ಕ್ಷೇತ್ರದಲ್ಲಿ ತವರೂರಾಗಿದೆ, ವಿದ್ಯಾರ್ಥಿಗಳು ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಕಾವ್ಯಗಳ ರಚನೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಬೇಕು ಎಂದು ಹೇಳಿದರು.

ಮಾಜಿ ಜಿಪಂ ಉಪಾಧ್ಯಕ್ಷ ಸಿದ್ದು ಪಾಟೀಲ, ಪಿಎಸ್ಐ ಆರ್.ಎಸ್. ಬಿರಾದಾರ, ಕವಿ ಗುಂಡಪ್ಪ ರಾ ಕುಂಬಾರ ವೇದಿಕೆ ಮೇಲೆ ಇದ್ದರು.

ನಿವೃತ್ತ ಶಿಕ್ಷಕ ಎಸ್.ಎಸ್.ಅಂಗಡಗೇರಿ ಅಧ್ಯಕ್ಷತೆ ವಹಿಸಿದ್ದರು. ಬಿಜಾಪೂರದ ಸಾಹಿತಿ ಪರಶುರಾಮ ಕುಂಬಾರ ಪುಸ್ತಕ ಪರಿಚಯ ನೀಡಿದರು, ಕವಿ ಶಿಕ್ಷಕ ಶಿಕ್ಷಕ ಗುಂಡಪ್ಪ ರಾ ಕುಂಬಾರ ಪ್ರಸ್ತಾವಿಕವಾಗಿ ಮಾತನಾಡಿದರು.

ರಾಜಶೇಖರ ದೇವಣಿ, ಮಡಿವಾಳಯ್ಯ ಹಿರೇಮಠ, ರುದ್ರಗೌಡ ಬಿರಾದಾರ, ಶಿವಶಂಕರ ಕುಂಬಾರ, ಪ್ರೇಮಾ ನಾಯಕ,  ಬಿದರ ಪ್ರಗತಿ ಚಿತ್ರಕಲಾ ಮಂಡಳಿ ಅಧ್ಯಕ್ಷರಾದ ಎನ್.ವಿ. ಬೋವಿ,ಎಂ.ಬಿ.ನಾಯ್ಕೌಡಿ, ಎಸ್.ಬಿ. ಪೋದ್ದಾರೆ, ಗುಂಡಣ್ಣ ಮೋರಟಗಿ ಸಂಜು ಬಮ್ಮನಳ್ಳಿ, ಗಂಗಾದರ ಬಿರಾದಾರ, ರಾಜು ಪಾಟೀಲ, ಜಗದೇವಿ.ಸಿ.ನಂದಿಕೋಲ, ಜಗದೀಶ ಪಾಟೀಲ, ಪಿ.ಎಂ.ಹಿರೇಮಠ, ಗುರು ಕೊರಳ್ಳಿ ಮತ್ತಿರರು ಉಪಸ್ಥಿತರಿದ್ದರು.

ಇದೇ ಸಮಾರಂಭದಲ್ಲಿ ಸಿದ್ದೇಶ್ವರ ಡಿಇಡಿ ಕಾಲೇಜ್ಗೆ ಪ್ರಥಮ ಸ್ಥಾನ ಪಡೆದ ಕುಮಾರಿ ರುಕ್ಷಾನಾ ಸೌದಾಗರ ಅವರನ್ನು ಸನ್ಮಾನಸಿ ಗೌರವಿಸಲಾಯಿತು.

ಶಿಕ್ಷಕ ಬಸವರಾಜ ಅಗಸರ ಸ್ವಾಗತಿಸಿದರು. ಎಸ್.ಎ.ರಾಠೋಡ  ನಿರೂಪಿಸಿ. ಎಂ.ಎಸ್.ರೂಗಿ ವಂದಿಸಿದರು.

 

loading...

LEAVE A REPLY

Please enter your comment!
Please enter your name here