ಹೊರಟ್ಟಿ ಗೆಲುವು ನಿಶ್ಚಿತ: ಡಾ. ಸಂಗಾಪೂರ

0
22

ದಾಂಡೇಲಿ : ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರವಾಗಿ ಆಯ್ಕೆಯಾಗುತ್ತಿರುವ ಬಸವರಾಜ ಹೊರಟ್ಟಿಯವರದ್ದು, ಈ ಬಾರಿ ಗೆಲುವು ನಿಶ್ಚಿತ ಎಂದು ಕರ್ನಾಟಕದ ವಿಶ್ವವಿದ್ಯಾಲಯದ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಹಾಗೂ ರಾಜ್ಯ ಕಾಲೇಜು ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಡಾ. ಎನ್.ಬಿ ಸಂಗಾಪುರ ನುಡಿದರು.
ಅವರು ಸೋಮವಾರ ನಗರದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಾ ಹೊರಟ್ಟಿಯವರ ಬಗ್ಗೆ ಕೇವಲ ಪೊಳ್ಳು ಆರೋಪ ಮಾಡುತ್ತಿರುವ ಈ ಕ್ಷೇತ್ರದ ವಿರೋಧಿ ಪಕ್ಷದ ಅಭ್ಯರ್ಥಿಗಳು ಹೊರಟ್ಟಿಯವರ ಬಗ್ಗೆ ಶೀಘ್ರದಲ್ಲಿ ಹೊರಬರಲಿರುವ ಸಾಧನೆಯ ದಾಖಲೆಯ ಪುಸ್ತಕವನ್ನು ನೋಡಿಯಾದರೂ ಬಾಯಿ ಮುಚ್ಚಿಕೊಳ್ಳುವದು ಸೂಕ್ತ ಎಂದರು.
ಶಿಕ್ಷಕರ ಬಳಗದ ಪ್ರದಾಧಿಕಾರಿ ಡಾ. ಡಿ.ಎಂ ಹೀರೆಮಠ ಮಾತನಾಡಿ ಈ ಬಾರಿ ಮೇ.23 ರಂದು ಬೆಳಗಾವಿಯಲ್ಲಿ ಹೊರಟ್ಟಿಯವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಮತದಾರರು ಉಪಸ್ಥಿತರಿದ್ದು, ಹೊರಟ್ಟಿಯವರ 7ನೇಯ ವಿಶ್ವ ದಾಖಲೆಯ ಗೆಲುವಿಗೆ ಸಾಕ್ಷಿಯಾಗಲಿದ್ದಾರೆಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಲೇಜು ಶಿಕ್ಷಕರ ಬಳಗದ ಪದಾಧಿಕಾರಿಗಳಾದ ಪ್ರೊ. ಎಂ.ಎಸ್ ಮುರುಗೋಡಮಠ, ಪ್ರಾಚಾರ್ಯ ಎಸ್.ಬಿ ಯಲ್ಲೂರು, ಡಾ. ಲೋಕಾಪುರ, ಡಾ. ಎಂ.ಬಿ ಹೆಗ್ಗಣ್ಣವರ, ಡಾ. ಎಸ್.ಬಿ ಗಾಡಿ , ಆರ್.ಟಿ ಹೀರೆಗೌಡರ, ಯು.ಎಸ್. ಪಾಟೀಲ ಇತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here