ಸ್ಥಾನಿಕ ಪರೀಕ್ಷೆಗಾಗಿ ಭೇಟಿ ನೀಡಿ: ಸಚಿವ ವಿನಯ

0
34

ಧಾರವಾಡ : ಜಿಲ್ಲೆಯಲ್ಲಿರುವ ಎಲ್ಲ ತಾಲೂಕಾ ತಹಶೀಲ್ದಾರರೂ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕರು ತಮ್ಮ ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಖುದ್ದಾಗಿ ಸ್ಥಾನಿಕ ಪರೀಕ್ಷೆಗಾಗಿ ಭೇಟಿ ನೀಡಿ ಕೆರೆಗಳಿಗೆ ಒಳ ಹರಿವು ಕಾಲುವೆ ಪರಿಶೀಲಿಸಿ ತೆರವು ಕಾರ್ಯ ಕಾಮಗಾರಿ ಪೂರ್ಣಗೊಳಿಸಬೇಕು. ಹಾಗೂ ಹೂಳಿದ್ದರೆ ತೆರವು ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬರಗಾಲ ಕಾಮಗಾರಿ, ಕುಡಿಯುವ ನೀರು ಮತ್ತು ದನಕರುಗಳಿಗೆ ಮೇವು (ಲಭ್ಯತೆ) ಪೂರೈಕೆ ಪ್ರಗತಿ ಪರಿಶೀಲನೆ ಹಾಗೂ ಮಳೆ ಹಾನಿ ವರದಿ ಪರಿಶೀಲನೆ ಮಾಡಿ ಮಾತನಾಡಿ, ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಕೆರೆ ಹೂಳೇತ್ತಲು ಪ್ರಥಮಾಧ್ಯತೆ ನೀಡಬೇಕು. ಮುಂಬರುವ ದಿನಗಳಲ್ಲಿ ಬರಗಾಲ ಸಂದರ್ಭದಲ್ಲಿಯು ನೀರಿನ ಲಭ್ಯತೆ ಅನುಗುಣವಾಗಿ ಕೆರೆ ಹೂಳೇತ್ತುವ ಕಾರ್ಯ ನಿರ್ವಹಿಸಬೇಕು. ಹಾಗೂ ಕೆರೆ ನೀರು ಲಿಕೇಜ್ ಆಗದ ರೀತಿ ನೋಡಿಕೊಳ್ಳಬೇಕು. ಈಗಾಗಲೇ ತಾಲೂಕುವಾರು ಬರಗಾಲ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿದೆ. ಆ ಹಣ ಬಳಕೆ ಮಾಡಿದ ಬಗ್ಗೆ ಪ್ರಮಾಣ ಪತ್ರ ಕಳುಹಿಸಬೇಕು ಎಂದರು.
ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೊಳನ್ ಮಾತನಾಡಿ, ಈಗಾಗಲೇ ಮಳೆ ಹಾನಿ ಪರಿಹಾರ ನೀಡಲು ಎಲ್ಲ ತಹಶೀಲ್ದಾರರಿಗೆ ತಲಾ 20 ಲಕ್ಷ ಹಣ ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಮಳೆಯಿಂದ ಮನೆ ಹಾನಿ, ಜನ ಹಾನಿಯಾದ ಬಗ್ಗೆ ವರದಿ ಬಂದಿದ್ದು, ಅರ್ಹರನ್ನು ಖುದ್ದಾಗಿ ಪರಿಶೀಲಿಸಿ ಎಲ್ಲ ತಹಶೀಲ್ದಾರರು ಕಂದಾಯ ನಿರೀಕ್ಷಕರನ್ನು ಕರೆದು ಸಭೆ ನಡೆಸಿ 3 ದಿನಗಳಗೆ ವರದಿ ಒಪ್ಪಿಸಬೇಕು ಹಾಗೂ ಪರಿಹಾರವನ್ನು ತಕ್ಷಣ ಕೊಡಬೇಕೆಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಸುಷಮಾ ಗೋಡಬೋಲೆ, ಅಪರ ಜಿಲಾಧಿಕಾರಿ ಡಾ.ಬಿ.ಸಿ. ಸತೀಶ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here