ತಾಂತ್ರಿಕತೆಯಿಂದ ಗ್ರಾಮೀಣ ಸಂಸ್ಕøತಿ ನಶಿಸುತ್ತಿದೆ: ಭಾತೆ

0
59

ಚಿಕ್ಕೋಡಿ 18: ಇವತ್ತಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್, ಟಿವಿ ಸೀನೆಮಾಗಳ ಹಾವಳಿಯಿಂದ ನಾಟಕದಂಥಹ ಕಲೆ, ಗ್ರಾಮೀಣ ಸಂಸ್ಕøತಿ ನಶಿಸಿ ಹೋಗುತ್ತಿದ್ದು, ಅದನ್ನು ಕಾಪಾಡಿಕೊಂಡು ಹೋಗುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಡೆಯಬೇಕಿದೆ ಎಂದು ಮಾಜಿ ಜಿ.ಪಂ ಸದಸ್ಯ ಮಹೇಶ ಭಾತೆ ಹೇಳಿದರು.
ತಾಲೂಕಿನ ಬೆಳಕೂಡ ಗ್ರಾಮ ವ್ಯಾಪ್ತಿಯ ಬಸವನಗರದಲ್ಲಿ ಬಸವೇಶ್ವರ ಜಾತ್ರಾ ನಿಮಿತ್ಯ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೊದಲಿನ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೂಂರ್ಯೋದಯಕ್ಕಿಂತ ಮುಂಚೆ ಗಂಡ-ಹೆಂಡರು ಇಬ್ಬರು ತಮ್ಮ ಎತ್ತುಗಳ ಗಾಡಿಯಲ್ಲಿ ಹೊಲಕ್ಕೆ ಹೋಗಿ ನೆಗಿಲು ಹೊಡೆಯುವುದು, ಹಂತಿ ಕಟ್ಟಿ ರಾಶಿ ಮಾಡುವುದು ಇಂದು ಮರೆಯಾಗುತ್ತಿದೆ. ಇವತ್ತು ರೈತರು ಎತ್ತುಗಳನ್ನು ಸಾಕುತ್ತಿಲ್ಲ. ಟ್ಯಾಕ್ಟರ ಬಳಸುತ್ತಿದ್ದಾರೆ. ರಾಶಿಯನ್ನು ಯಂತ್ರದ ಮೂಲಕ ಮಾಡುತ್ತಿದ್ದಾರೆ. ಮೊದಲಿದ್ದ ಗ್ರಾಮೀಣ ಸೊಗಡು ಮರೆಯಾಗುತ್ತಿರುವ ಈ ಸಮಯದಲ್ಲಿ ರೈತರ ಮಕ್ಕಳು ನಾಟಕ ಮಾಡುವ ಮೂಲಕ ನಾಟಕ ಕಲೆಯನ್ನು ಜೀವಂತವಾಗಿರಿಸಿರುವು ಶ್ಲಾಘನೀವಾಗಿದೆ ಎಂದರು.
ಕಮತೇನಟ್ಟಿಯ ಶಿವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ತಾ.ಪಂ ಸದಸ್ಯ ಕಾಶಿನಾಥ ಕುರಣೆ, ಚಿಕ್ಕೋಡಿ ಪುರಸಭೆ ಸದಸ್ಯ ಕಲ್ಮೇಶ ಕಿವಡ, ಗ್ರಾ.ಪಂ ಉಪಾಧ್ಯಕ್ಷ ಮಹಾದೇವ ಪಾಮದಿನ್ನಿ, ಕುಮಾರ ಕರನಿಂಗ, ಟಿ.ಎಸ್.ಮೋರೆ, ಚನ್ನಪ್ಪಾ ಕಾಮಗೌಡ, ನಂದಕುಮಾರ ಕಟಾವಿ, ಮಲ್ಲಪ್ಪಾ ಅರಬಾಂವಿ, ಎ.ವೈ.ಕುಂದರಗಿ, ಪ್ರಭಾಕರ ಡಬ್ಬನ್ನವರ, ಮಾರುತಿ ಪೂಜೇರಿ, ರಾಜು ಮಾಳಿ, ಸಿದ್ದಪ್ಪಾ ಮಾಳಿ, ಶಬ್ಬೀರ ಗೌಂಡಿ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here