ಮಹಾಸತಿ ಧಾರಾವಾಹಿ ಚಿತ್ರೀಕರಣಕ್ಕೆ ಚಾಲನೆ

0
87

ಬೈಲಹೊಂಗಲ 18: ಉತ್ತರ ಕರ್ನಾಟಕದ ಸಂಸ್ಕøತಿ, ಪರಂಪರೆಯನ್ನು ಅನಾವರಣಗೊಳಿಸುವ ಇಚ್ಛೆಯಿಂದ ಈ ಭಾಗದಲ್ಲಿ ಉತ್ತರ ಕರ್ನಾಟಕ ಶೈಲಿಯ ಕೌಟುಂಬಿಕ ಧಾರಾವಾಹಿಯನ್ನು ಮಾಡಲಾಗುತ್ತಿದೆ ಎಂದು ನಟ, ನಿರ್ಮಾಪಕ ಹಾಗೂ ನಿರ್ದೇಶಕ ಸುನೀಲ ಪುರಾಣಿಕ ಹೇಳಿದರು.
ಅವರು ತಾಲೂಕಿನ ಆನಿಗೋಳ ಗ್ರಾಮದ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಸತಿ ಧಾರಾವಾಹಿಯ ಚಿತ್ರೀಕರಣಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ಖಾಸಗಿ ಚಾನೆಲಗಳಲ್ಲಿ ಸುಮಾರು 50 ಕ್ಕೂ ಹೆಚ್ಚು ಧಾರಾವಾಹಿಗಳು ಪ್ರಸಾರವಾಗುತ್ತಿದ್ದು, ಅದರಲ್ಲಿ ಬಹುತೇಕ ಧಾರಾವಾಹಿಗಳು ದಕ್ಷೀಣ ಭಾಗದಲ್ಲಿಯೇ ಚಿತ್ರೀಕರಣಗೊಂಡು ಅಲ್ಲಿನ ವಿಶೇಷತೆಗಳನ್ನು ನಾಡಿನ ಜನತೆಗೆ ತೋರಿಸುತ್ತಿವೆ. ಉತ್ತರ ಕರ್ನಾಟಕಕ್ಕೆ ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಅನ್ಯಾಯವಾಗಿದೆ. ಈ ಭಾಗದ ಸೊಗಡು, ಸಂಸ್ಕøತಿ, ಜನರ ಭಾಷೆ ಅತ್ಯಂತ ವೈಶಿಷ್ಟ್ಯವಾಗಿದ್ದು ಅದನ್ನು ಕರ್ನಾಟಕದ ಜನೆತೆಗೆ ಪರಿಚಯಿಸುವ ಸಲುವಾಗಿ ಮಹಾಸತಿ ಎಂಬ ಧಾರಾವಾಹಿಯನ್ನು ಮಾಡುತ್ತಿದ್ದೇನೆ ಎಂದರು.
ಈ ಧಾರಾವಾಹಿಯೂ ಜೂನ 21 ರಿಂದ ಉದಯ ಚಾನೇಲದಲ್ಲಿ ಪ್ರತಿದಿನ ಪ್ರಸಾರ ಆಗುವದು. ಮಹಾಸತಿ ಧಾರಾವಾಹಿಯೂ ಇಬ್ಬರು ಒಳ್ಳೆಯ ಸ್ನೇಹಿತರ ಕಥೆಯಾಗಿದ್ದು ಎರಡು ಕುಟುಂಬಗಳ ಮದ್ಯದ ಸಾಮಾಜಿಕ, ಧಾರ್ಮಿಕ ಕಟ್ಟುಪಾಡುಗಳ ಸಂಕೋಲೆ ಹೊಂದಿರುವ ಕೌಟುಂಬಿಕ ಧಾರಾವಾಹಿ ಇದಾಗಿದೆ. ಈ ಭಾಗದ ಪ್ರಮುಖ ಸಮಸ್ಯೆಯಾದ ಕಳಸಾ ಬಂಡೂರಿ ನಾಲಾ ಜೋಡಣೆ ವಿಷಯವನ್ನು ಕೂಡಾ ಧಾರಾವಾಹಿಯಲ್ಲಿ ಒಂದು ವಿಷಯವಸ್ತುವಾಗಿ ಇರಿಸಿಕೊಳ್ಳಲಾಗಿದ್ದು, ಅದರಂತೆ ಉತ್ತರ ಕರ್ನಾಟಕ ಭಾಗದ ಸಾಕಷ್ಟು ಸಮಸ್ಯೆಗಳ ವಿಷಯಾಧಾರಿತ ಧಾರಾವಾಹಿ ಇದಾಗಿದೆ ಸುಮಾರು ಒಂದು ವರ್ಷಗಳ ಕಾಲ ಬೈಲಹೊಂಗಲ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಧಾರಾವಾಹಿಯ ಚಿತ್ರೀಕರಣ ನಡೆಯಲಿದೆ ಎಂದರು.
ಇದರಲ್ಲಿ 18 ಮುಖ್ಯ ಪಾತ್ರಗಳು ಇದ್ದು, ಶಿವಾನಂದ ಹಿರೇಮಠ ಪಾತ್ರ ನಾನು ನಿರ್ವಹಿಸುತ್ತಿದ್ದು, ಗೋವಿಂದ ಪಾತ್ರದಲ್ಲಿ ಯಶವಂತ ಸರದೇಶಪಾಂಡೆ, ಗುಂಡಪ್ಪನ ಪಾತ್ರದಲ್ಲಿ ಕಲಾವಿದ ಸಿ.ಕೆ.ಮೆಕ್ಕೇದ ಕಾಣಿಸಿಕೊಳ್ಳಲಿದ್ದಾರೆ. ಹೊಸಮುಖಗಳಾದ ಐಶ್ವರ್ಯಾ ಬಾಜಪೇಯಿ, ವಿನಯ ಕುಲಕರ್ಣಿಮಿಂಚಲಿದ್ದಾರೆ ಎಂದರು. ಈ ಧಾರಾವಾಹಿಯಲ್ಲಿ ಎಲ್ಲ ಕಲಾವಿದರು ಉತ್ತರ ಕರ್ನಾಟಕ ಭಾಗದವರೆ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಶಾಸಕ ಡಾ. ವಿಶ್ವನಾಥ ಪಾಟೀಲ ಚಿತ್ರೀಕರಣ ಕ್ಯಾಮೆರಾಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಈ ಭಾಗದಲ್ಲಿ ಧಾರಾವಾಹಿ ನಿರ್ಮಾಣ ಮಾಡುತ್ತಿರುವದು ಸ್ವಾಗತಾರ್ಹ. ಜನತೆ ಧಾರಾವಾಹಿಗಳಲ್ಲಿ ಬರುವ ಒಳ್ಳೆಯ ವಿಷಯಗಳನ್ನು ಗ್ರಹಿಸಿಕೊಂಡು ಕೆಟ್ಟದರ ಕುರಿತು ವಿಚಾರ ಮಾಡಬಾರದು ಎಂದರಲ್ಲದೆ ಕಲಾವಿದರ ತಂಡ ಯಶಸ್ವಿಯಾಗಿ ಚಿತ್ರೀಕರಣ ಮಾಡಲಿ, ಧಾರಾವಾಹಿಯೂ ಜನಮೆಚ್ಚಿಗೆಯನ್ನು ಗಳಿಸಲಿ ಎಂದು ಶುಭ ಹಾರೈಸಿದರು.
ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಚಿತ್ರೀಕರಣಕ್ಕೆ ಚಾಲನೆ ನೀಡಿ ಮಾತನಾಡಿ, ಧಾರಾವಾಹಿಯೂ ಉತ್ತಮ ಕಥೆಯನ್ನು ಹೊಂದಿದ್ದು, ಚೆನ್ನಾಗಿ ಮೂಡಿ ಬಂದು ಜನ ಮನ್ನಣೆ ಗಳಿಸಲಿ ಎಂದರು.
ಈ ಸಂದರ್ಭದಲ್ಲಿ ಆನಿಗೋಳದ ಭೊಮ್ಮನಾಯ್ಕ ಪಾಟೀಲ, ರಾಜು ಸೋಗಲ, ವೀರಣ್ಣ ಮರಕುಂಬಿ, ಮಹಾಂತೇಶ ಪಾಟೀಲ, ಗ್ರಾಪಂ ಅಧ್ಯಕ್ಷ ರಮೇಶ ಪರಂಡೆ ಹಾಗೂ ಕಲಾವಿದರು ಇದ್ದರು.
ಪುರಸಭೆ ವಿಪಕ್ಷ ನಾಯಕ ಮಹಾಂತೇಶ ತುರಮರಿ ಸ್ವಾಗತಿಸಿ, ನಿರೂಪಿಸಿದರು.

loading...

LEAVE A REPLY

Please enter your comment!
Please enter your name here