ಕಾಂಗ್ರೆಸ್ ನಾಯಕರುಗಳ ವಿರುದ್ಧ ಕಾರ್ಯಕರ್ತರ ಅಸಮಧಾನ

0
25

ಪ್ರಭಾವಿಗಳಾದ ಹುಕ್ಕೇರಿ,ಹೆಬ್ಬಾಳಕರ ಪಕ್ಷದಲ್ಲಿ ವರ್ಚಸ್ಸು ಕಳೆದುಕೊಳ್ಳುತ್ತಿದ್ದಾರೆಯೇ…?
ಭರಮಗೌಡಾ ಪಾಟೀಲ
ಬೆಳಗಾವಿ 22: ಬೆಳಗಾವಿ ಜಿಲ್ಲೆಯಲ್ಲೇ ಜನಪ್ರಿಯ ಕೆಲಸಗಾರ ಎನಿಸಿಕೊಂಡ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಅವರು ಹಾಗೂ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರು ಕಾಂಗ್ರೆಸ್ ಪಕ್ಷದಲ್ಲಿ ವರ್ಚಸ್ಸು ಕಳೆದುಕೊಳ್ಳುತ್ತಿದ್ದಾರೆಯೇ? ಎಂಬ ಪ್ರಶ್ನೆಗಳು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉದ್ಭವಿಸುತ್ತಿವೆ.
ಬೆಂಗಳೂರಿನಲ್ಲಿ ಇಚೆಗೆ ರಾಜ್ಯ ಸರಕಾರ 3 ವರ್ಷ ಪೂರೈಸಿದ ಸಂದರ್ಭದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಸದಸ್ಯರೊಬ್ಬರು ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಅಧ್ಯಕ್ಷರು ದೊಡ್ಡ ನಾಯಕರುಗಳ ಬೆಂಬಲವಿರುವುದರಿಂದ್ದ ಅವರು ಹೇಳಿದ ಕೆಲಸ ಕಾರ್ಯಗಳು ಮಾತ್ರ ನಡೆಯುತ್ತವೆ ಎಂದು ತಮ್ಮ ಅಸಮಧಾನವನ್ನು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೊರಹಾಕಿದ್ದರು. ಇನ್ನು ಜಿಪಂ ಉಪಾಧ್ಯಕ್ಷ ಸ್ಥಾನವನ್ನು ತಮ್ಮ ಬೆಂಬಲಿಗರಿಗೆ ಕೊಡಿಸುವಲ್ಲಿ ಅವರು ವಿಫಲರಾಗಿದ್ದು ಲಕ್ಷ್ಮೀ ಹೆಬ್ಬಾಳಕರ ಅವರ ಬೆಂಬಲಿಗರು ಇವರ ವಿರುದ್ಧ ಅಸಧಾನ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ನಂತರದ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಇಂಥ ಸಂದೇಹ ಮತ್ತಷ್ಟು ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ಹುಕ್ಕೇರಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರೇ ಸಂಸದ ಪ್ರಕಾಶ ಹುಕ್ಕೇರಿ ಕಾರ್ಯ ವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಂಸದ ಪ್ರಕಾಶ ಹುಕ್ಕೇರಿ ವಿರುದ್ಧ ಧಿಕ್ಕಾರ ಕೂಗಿದ್ದರು.
ಚಿಕ್ಕೋಡಿ ಪುರಸಭೆÉಯಲ್ಲಿ ಮುಸ್ಲಿಂಗೆ ಉಪಾಧÀ್ಯಕ್ಷ ಸ್ಥಾನ ನೀಡುವುದಾಗಿ ಹೇಳಿದ್ದರೂ ಕೊಡದೇ ಇರುವುದರಿಂದ ಆ ಆಕಾಂಕ್ಷಿಯೂ ಸಂಸದ ಪ್ರಕಾಶ ಹುಕ್ಕೇರಿ ಮೇಲೆ ಸಿಟ್ಟಾಗಿದ್ದಾರೆ. ಪುರಸಭೆÉಯಲ್ಲಿ ದಲಿತರಿಗೆ ಅಧÀ್ಯಕ್ಷ ಸ್ಥಾನ ನೀಡುವುದಾಗಿ ಹೇಳಿದ್ದರೂ ಮೀಸಲಾತಿಯಲ್ಲಿ ಬದಲಾವಣೆ ಮಾಡಿಕೊಂಡು ಬರುವಲ್ಲಿ ಸಂಸದರ ಕೈವಾಡ ಇದೆ ಎಂಬ ಆರೋಪವಿದೆ.
ಜಿಪಂನಲ್ಲಿ ದಲಿತರಿಗೆ ಆದ್ಯತೆ ನೀಡಿ ತಮ್ಮ ಆಪ್ತ ಮಹಾವೀರ ಮೋಹಿತೆ ಅವರ ಸೊಸೆ ಜಯಶ್ರೀ ಮೋಹಿತೆಯವರಿಗೆ ಕೊನೆ ಘಳಿಗೆಯಲ್ಲಿ ಆ ಹುದ್ದೆ ತಪ್ಪಿಸುವಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಪಾತ್ರ ಪ್ರಮುಖವಾಗಿದೆ. ಮಹಾವೀರ ಮೋಹಿತೆ ರಾಜಕೀಯವಾಗಿ ಬಲಾಢ್ಯರಾದರೆ ತಮ್ಮ ರಾಜಕೀಯ ನೆಲೆಗೆ ಕುತ್ತು ಬರುತ್ತದೆ ಎಂಬ ಭಯದಿಂದ ಅಧÀ್ಯಕ್ಷ ಸ್ಥಾನ ನೀಡುವಲ್ಲಿ ಅಡ್ಡಗಾಲು ಹಾಕಿದರು ಎನ್ನಲಾಗುತ್ತಿದೆ.
ಇದರಿಂದ ಅಲ್ಲಿಯೂ ಸ್ವಪಕ್ಷೀಯರಿಂದ ಪ್ರತಿಭÀಟನೆ ಎದುರಿಸಿದರು. ಅಂದೇ ಮೋಹಿತೆ ಕಡೆಯವರು ಬಹಿರಂಗವಾಗಿ ಧಿಕ್ಕಾರ ಕೂಗಿದ್ದ ಜಗಜ್ಜಾಹೀರು. ನಂತರ ಮಹಾವೀರ ಮೋಹಿತೆ ಅವರು ಚಿಕ್ಕೋಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಗಂಭೀರ ಆರೋಪ ಮಾಡುವುರೊಂದಿಗೆ ಈ ನಾಯಕರುಗಳು ದಲಿತ ಮತಗಳಿಂದ ಆಯ್ಕೆಯಾಗಿ ನಂತರ ದಲಿತರನ್ನು ಮರೆಯುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇವರಿಗೆ ತಕ್ಕ ಶಾಸ್ತಿ ಮಾಡುವುದಾಗಿ ತಮ್ಮ ಸೋಸೆಗೆ ದೊರೆಯಬೇಕಾಗಿದ್ದ ಜಿಪಂ ಅಧ್ಯಕ್ಷ ಸ್ಥಾನದ ಸಿಟ್ಟನ್ನು ಅವರು ಹೊರಹಾಕಿದ್ದಾರೆ.
ಈ ಎರಡು ಬೆಳವಣಿಗೆಯಿಂದ ಜಿಲ್ಲೆಯ ಇಬ್ಬರು ಪ್ರಬಲ ನಾಯಕರುಗಳು ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ವರ್ಚಸ್ಸನ್ನು ಕಳೆದುಕೊಳ್ಳುತ್ತಿದ್ದಾರೆ ಅಥವಾ ಈ ಇಬ್ಬರು ನಾಯಕರುಗಳ ವರ್ಚಸ್ಸು ಕಡಿಮೆ ಮಾಡಲ್ಲಿಕ್ಕೆ ಪಕ್ಷದಲ್ಲಿ ಹುನ್ನಾರ ನಡೆಯುತ್ತಿದೆಯಾ ಎಂಬ ಪ್ರಶ್ನೆಗಳು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಾಡುತ್ತಿವೆ.

loading...

LEAVE A REPLY

Please enter your comment!
Please enter your name here