ಎರಡು ವಾರಗಳ ಟೆನ್ನಿಸ್ ಶಿಬಿರ ಸಮಾರೋಪ

0
43

ಬೆಳಗಾವಿ 22: ಮಹೇಶ ಭೂಪತಿ ಟೆನ್ನಿಸ್ ಅಕಾಡೆಮಿಯು ಬೆಳಗಾವಿ ಕ್ಲಬ್‍ದಲ್ಲಿ 2 ವಾರದ ವಿಶೇಷ ಟೆನ್ನಿಸ್ ಶಿಬಿರವನ್ನು ಮೇ 4 ರಿಂದ ಎರಡು ವಾರಗಳ ಕಾಲ ಏರ್ಪಡಿಸಿತ್ತು. ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರನ್ನು ಟೆನ್ನಿಸ್ ಕಡೆಗೆ ಸೆಳೆಯುವ ಮತ್ತು ವೃತ್ತಿಪರ ತರುಬೇತಿದಾರರಿಂದ ಟೆನ್ನಿಸ್ ಆಟವನ್ನು ಕಲಿಸುವ ಉದ್ದೇಶದೊಂದಿಗೆ ಮಹೇಶ ಭೂಪತಿ ಟೆನ್ನಿಸ್ ಆಕಾಡೆಮಿ ಪ್ರಥಮ ಭಾರಿಗೆ ಬೆಳಗಾವಿ ನಗರದಲ್ಲಿ ಆಯೋಜಿಸಿದ ಶಿಬಿರದಲ್ಲಿ ಟೆನ್ನಿಸ್ ಪ್ರೀಯರು ಉತ್ಸಾಹದಿಂದ ಭಾಗವಹಿಸಿದ್ದರು.
ಶಿಬಿರದ ಸಮಾರಫೊ ಸಮಾರಂಭದಲ್ಲಿ ಮಹೇಶ ಭೂಪತಿ ಟೆನ್ನಿಸ್ ಅಕಾಡೆಮಿಯ ತರಬೇತಿ ನಿರ್ದೇಶಕ ಶಂಕರ ಕೃಷ್ಣಸ್ವಾಮಿ ಭಾಗವಹಿಸಿದ್ದರು. ಅವರು ಮಾತನಾಡಿ ನಾವು ನಡೆಸುವ ಶಿಬಿರಗಳು ತಳಮಟ್ಟದ ಪ್ರತಿಭೆಗಳನ್ನು ಗುರುತಿಸಿ ಮತ್ತು ಅವರನ್ನು ಪ್ರೋತ್ಸಾಹಿಸುವ ಗುರಿ ಹೊಂದಲಾಗಿದೆ. ಬೆಳಗಾವಿಯ ಯುವ ಮತ್ತು ಆಸಕ್ತರಿಗೆ ಈ ಶಿಬಿರವು ಟೆನ್ನಿಸ್ ಆಟದ ಆಳ ಮತ್ತು ಅಗಲವನ್ನು ಕಲಿಯಲು ಉತ್ತಮ ಅವಕಾಶವನ್ನು ಕಲ್ಪಸಿದೆ ಎಂದರು.
ಮಹೇಶ ಭೂಪತಿ ಟೆನ್ನಿಸ್ ಅಕಾಡೆಮಿ ವತಿಯಿಂದ ಶಿಬಿರ ಆಯೋಜಿಸಿದ ವಿವೇಕ ಅಪರಾಜ ಮಾತನಾಡಿ. ಈ ಶಿಬಿರವು ಬೆಳಗಾವಿಯ ಜನರಿಗೆ ಟೆನ್ನಿಸ್ ಆಟ ಆಡುವುದನ್ನು ತಿಳಿಸಿಕೊಟ್ಟಿದೆ, ಇಂತಹ ಶಿಬಿರಗಳು ಮೇಲಿಂದ ಮೇಲೆ ಜರುಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here