ಇಂದು ವಿದ್ಯುತ್ ವ್ಯತ್ಯಯ

0
58

ಬೆಳಗಾವಿ 22: (U.ಉ ಕೇಬಲ್ ಕಾಮಗಾರಿ) ಕೈಗೊಳ್ಳುವ ಪ್ರಯುಕ್ತ ಬೆಳಗಾವಿ ನಗರದ 110 ಕೆವಿ ಕಣಬರ್ಗಿ ವಿದ್ಯುತ ಉಪ ಕೇಂದ್ರದಿಂದ ಎಫ್-4 ರಾಮತೀರ್ಥ ನಗರ ಫೀಡರಗಳ ವ್ಯಾಪ್ತಿಯಲ್ಲಿ ಬರುವ ರಾಮತೀರ್ಥ ನಗರ, ಸ್ಕಿಂಮ್ ನಂ.35,43,43ಎ, ಫೇವ್ ಏರಿಯಾ, ಗಣೇಶ ಸರ್ಕಲ್ ದಿಂದ ಪತ್ರಿಕ್ಷಾ ಹೋಟೆಲ್‍ವರೆಗೆ ಮತ್ತು ಎದುರುಗಡೆ ಸ್ಟೇಟ್ ಬ್ಯಾಂಕ ಆಫ್ ಮೈಸೂರ ಏರಿಯಾ ಈ ಪ್ರದೇಶಗಳಲ್ಲಿ ಮೇ 23 ರಂದು 10-30 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದುಯೆಂದು ನಗರ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
24 ರಂದು ವಿದ್ಯುತ್ ವ್ಯತ್ಯಯ
ಬೆಳಗಾವಿ 22: ಪಿ. ಡಬ್ಲೂ. ಡಿ ರವರ ವತಿಯಿಂದ ರಸ್ತೆ ಅಗಲೀಕರಣ ಕೆಲಸ ಕೈಗೊಳ್ಳುವ ಪ್ರಯುಕ್ತ ಬೆಳಗಾವಿ ನಗರದ 33 ಕೆ.ವ್ಹಿ. ಫೋರ್ಟ್, 33 ಕೆ.ವ್ಹಿ. ಆರ್. ಎಮ್.-2 ವಿದ್ಯುತ್ ವಿತರಣಾ ಕೇಂದ್ರದಿಂದ ಎಫ್-2 ಫೋರ್ಟ್ ರೋಡ್, ಎಫ್-4 ಮಾರುತಿ ಗಲ್ಲಿ ಫೀಡರ್‍ಗಳ ವ್ಯಾಪ್ತಿಯಲ್ಲಿ ಬರುವ ಫೋರ್ಟ್ ರೋಡ್, ಪಾತೀಲ್ ಗಲ್ಲಿ, ಶನಿ ಮಂದಿರ, ತಹಶೀಲ್ದಾರ್ ಗಲ್ಲಿ, ಭಾಂದೂರ ಗಲ್ಲಿ, ಫುಲ್ಬಾಗ್ ಗಲ್ಲಿ, ಅನಂತಶಯನ ಗಲ್ಲಿ, ಕಲ್ಮಠ ರೋಡ್, ಮಠ ಗಲ್ಲಿ, ಶೇರಿ ಗಲ್ಲಿ, ಕಪಿಲೇಶ್ವರ ರೋಡ್. ರಾಮಲಿಂಗಖಿಂಡ ಗಲ್ಲಿ, ಗಣಪತಿ ಗಲ್ಲಿ, ಭಾತಖಾಂಡೆ ಗಲ್ಲಿ, ಕಿರ್ಲೋಸ್ಕರ್ ರೋಡ್, ನರಗುಂದಕರ ಭಾವೆ ಚೌಕ, ಅನಸೂರಕರ ಗಲ್ಲಿ, ಕೋನ್ವಾಳ ಗಲ್ಲಿ ಈ ಪ್ರದೇಶಗಳಲ್ಲಿ ಮೇ 24 ರಂದು ಮುಂಜಾನೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆಯೆಂದು ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದರಂತೆ (U.ಉ ಕೇಬಲ್ ಕಾಮಗಾರಿ) ಕೈಗೊಳ್ಳುವ ಪ್ರಯುಕ್ತ ಬೆಳಗಾವಿ ನಗರದ 11 ಕೆವಿ ಕಣಬರ್ಗಿ ವಿದ್ಯುತ ಉಪ ಕೇಂದ್ರದಿಂದ ಎಫ್-4 ರಾಮತೀರ್ಥ ನಗರ ಫೀಡರಗಳ ವ್ಯಾಪ್ತಿಯಲ್ಲಿ ಬರುವ ರಾಮತೀರ್ತ ನಗರ, ಸ್ಕಿಂಮ್ ನಂ.35,43,43ಎ, ಹಿಂದಿನ ಸ್ಟೆಟ್ ಬ್ಯಾಂಕ್ ಆಫ್ ಮೈಸೂರ, ಪ್ಲಾಟ್ ಸಂ.2000 ದಿಂದ 2800 ಈ ಎಲ್ಲ ಪ್ರದೇಶಗಳಲ್ಲಿ ಮೇ 24 ರಂದು ಮುಂಜಾನೆ 10-30 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದುಯೆಂದು ನಗರ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here