ವಿಪ ಚುನಾವಣೆ ಪಕ್ಷೇತರರಿಗೆ ಮತದಾರರ ಬೆಂಬಲ

0
82

ಬೆಳಗಾವಿ:28 ಬರುವ ವಿಧಾನ ಪರಿಷತ್ ಪದವೀಧರರ ಚುನಾವಣೆಯಲ್ಲಿ ಮತದಾರರು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪಕ್ಷೇತರ ಅಭ್ಯರ್ಥಿಗಳಿಗೆ ಮಣೆ ಹಾಕಲಿದ್ದಾರೆ ಎಂದು ವಿಪ ಪದವೀಧರ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಎಸ್.ಮಿಟ್ಟಲಕೋಡ ಇಂದಿಲ್ಲಿ ಹೇಳಿದರು.
ಅವರು ಶನಿವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಕುಟುಂಬ ರಾಜಕಾರಣವನ್ನು ಮಾಡುತ್ತ ರಾಜ್ಯದಲ್ಲಿ ಪದವೀಧರರ ಸಮಸ್ಯೆಯನ್ನು ಬಗೆ ಹರಿಸುಲು ವಿಫಲವಾದ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಹಣ ಬಲ ಮತ್ತು ತೋಳಬಲದಿಂದ ಮತದಾರರನ್ನು ವಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ಅವರನ್ನು ತಿರಸ್ಕರಿಸಿ ಇತಿಹಾಸ ಸೃಷ್ಠಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದಿನ ವಿಧಾನ ಪರಿಷತ್‍ನ ಯಾವೊಬ್ಬ ಸದಸ್ಯರು ಪದವೀಧರರ ಸಮಸ್ಯೆಯನ್ನು ಆಲಿಸುವಲ್ಲಿ ವಿಫಲರಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಕ ಪಕ್ಷಗಳು ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ ತಾಲೂಕಾ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಅಧಿಕಾರಕ್ಕೆ ಬಂದ ಹಾಗೆ ವಿಪ ಪದವೀಧರರ ಚುನಾವಣೆಯಲ್ಲೂ ಅದೇ ರೀತಿಯ ಹುಚ್ಚು ಕನಸನ್ನು ಕಾಣುತ್ತಿದ್ದಾರೆ ಎಂದು ಅವರು ಹೇಳಿದರು.
ಮತದಾರರು ಈ ಬಾರಿ ರಾಷ್ಟ್ರೀಯ ಪಕ್ಷಗಳಲ್ಲಿ ನಡೆಯುತ್ತಿರುವ ಕುಟುಂಬ ರಾಜಕಾರಣವನ್ನು ದಿಕ್ಕರಿಸಿ ಪ್ರಜ್ಞಾವಂತ ಅಭ್ಯರ್ಥಿಗಳಿಗೆ ಮಣೆ ಹಾಕುವ ಎಲ್ಲ ಲಕ್ಷಣಗಳು ಘೋಚರಿಸುತ್ತಿದೆ. ಪದವೀಧರ ಮತದಾರರು ಪ್ರಜ್ಞೆಯಿಂದ ಯೋಚಿಸಿ ನಿಮ್ಮಪರ ಧ್ವನಿ ಎತ್ತುವ ಹೋರಾಟಗಾರರಿಗೆ ಹಂಬಲವಿದ್ದಲ್ಲಿ ಪ್ರಾಶಸ್ತ್ಯ ಮತಗಳಿರುವುದರಿಂದ ಪ್ರಥಮ ಪ್ರಾಶಸ್ತ್ಯ ಮತವನ್ನು ತಮಗೆ ನೀಡುವಂತೆ ಅವರು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಆರ್.ಹೊಸಮನಿ ಹಾಜರಿದ್ದರು.

loading...

LEAVE A REPLY

Please enter your comment!
Please enter your name here