ಕಸಾಪದಿಂದ ಕಲೆ ಸಂಶೋಧನೆ ಮಾಡುವ ಮೂಲಕ ಅದರ ರಕ್ಷಣೆಯ ಕೆಲಸಮಾಗಬೇಕು: ಡಾ.ನಲ್ಲೂರ ಪ್ರಸಾದ

0
81

ಜೋಯಿಡಾ : ಕನ್ನಡ ಸಾಹಿತ್ಯ ಪರಿಷತ್ ಕೇವಲ ಸಾಹಿತ್ಯ ಕಾರ್ಯಕ್ರಮಗಳನ್ನು ಮಾಡದೇ ಸಂಸ್ಕøತಿ, ಕಲೆ, ಭಾಷೆ, ಬುಡಕಟ್ಟುಗಳ ಕಲೆಗಳನ್ನು ಸಂಶೋಧನೆ ಮಾಡುವುದರ ಮೂಲಕ ಅದನ್ನು ಕಾಪಾಡುವ ಕೆಲಸಮಾಡಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತನ ಮಾಜಿ ರಾಜ್ಯಾಧ್ಯಕ್ಷ ಡಾ: ನಲ್ಲೂರ ಪ್ರಸಾದ ಹೇಳಿದರು.
ಅವರು ಜೋಯಿಡಾ ಕುಣಬಿ ಭವನದಲ್ಲಿ ತಾಲೂಕಾ ಕನ್ನಡ ಸಾಹಿತ್ ಪರಿಷತ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚಾರಣೆ ಮತ್ತು ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜೋಯಿಡಾ ಗಡಿ ತಾಲೂಕಾಗಿರುವುದರಿಂದ ಕನ್ನಡದ ಉಳವಿಗೆ ಇಲ್ಲಿ ಹೆಚ್ಚು ಮಹತ್ವ ನೀಡಬೇಕಿದೆ. ಇಲ್ಲಿರುವ ಬುಡಕಟ್ಟು ಸಾಹಿತಿಗಳನ್ನು ಗುರುತಿಸಬೇಕಿದೆ. ಶರಣರ ನಾಡು ಉಳವಿಯಲ್ಲಿ ವಚನ ಸಾಹಿತ್ಯ ಸಮ್ಮೇಳನಗಳನ್ನು ಮಾಡುವುದರ ಮೂಲಕ ವಚನ ಸಾಹಿತ್ಯವನ್ನು ಸಂರಕ್ಷಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ನಾಟಕಕಾರ, ನಾಟಕ ಅಕಾಡಮಿ ಪ್ರಶಸ್ತಿ ವಿಜೇತ ಹುಲಿ ಚಂದ್ರಶೇಖರ ಮಾತನಾಡಿ ಸೂಪಾದಲ್ಲಿ ಕಳೆದ ಎರಡು ದಶಕಗಳ ಹಿಂದಿನಿಂದಲೂ ಕನ್ನಡ ಕಟ್ಟುವ ಕಾರ್ಯ ನಡೆಯುತ್ತಿದೆ. ಆ ಸಮಯದಲ್ಲಿ ಉಧ್ಯೋಗ ಸಲುವಾಗಿ ಕಾರ್ಯನಿರ್ವಹಿಸುತ್ತಿದ್ದ ನಾನು ಕನ್ನಡ ಸಂಘಟನೆ ಕಟ್ಟಿ ಬೆಳೆಸುವ ಜವಬ್ದಾರಿ ನಿಭಾಯಿಸಿದ್ದೇನೆ. ಮನೆ ಮನೆಗೆ ತೆರಳಿ ಕನ್ನಡ ಪುಸ್ತಕಗಳನ್ನು ನೀಡಿ ಓದುಲು ಪ್ರೇರಣೆ ನೀಡುವ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್‍ನ ಜೋಯಿಡಾ ತಾಲೂಕಿನ ಮೊದಲ ಅಧ್ಯಕ್ಷನಾಗಿ ಕನ್ನಡ ಸೇವೆ ಮಾಡಿದ್ದನ್ನು ನೆನೆಪಿಸಿ ಈ ಕರ್ಮಭೂಮಿಯಲ್ಲಿ ಇನ್ನೂ ಕನ್ನಡ ಸಂಘಟನೆ ಮಾಡಲು ಕೈಜೋಡಿಸುವುದಾಗಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತನ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅಧ್ಯಕ್ಷತೆ ಮಾತುಗಳನ್ನಾಡಿ ಮುಂಬರುವ ದಿನಗಳಲ್ಲಿ ಜೋಯಿಡಾ ತಾಲೂಕಿನಲ್ಲಿ ಬುಡಕಟ್ಟು ಸಮ್ಮೇಳನ, ವಚನ ಸಮ್ಮೇಳನಗಳನ್ನು ಮಾಡುವುದರ ಮೂಲಕ ಸ್ಥಳಿಯ ಕಲೆ, ಸಾಹಿತ್ಯ,ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ ಕೆಲಸಮಾಡಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್, ರಾಜ್ಯ ಮಹಿಳಾ ಮಹಾ ಮಂಡಳ ನಿರ್ದೇಶಕಿ ಶಕುಂತಲಾ ಹಿರೆಗೌಡರ, ಜಿಲ್ಲಾ ಗೌರವ ಕಾರ್ಯದರ್ಶಿ ಮಹೇಂದ್ರಕುಮಾರ ಮಾತನಾಡಿದರು.
ಮಾಜಿ ರಾಜ್ಯಾಧ್ಯಕ್ಷ ನಲ್ಲೂರ ಪ್ರಸಾದ, ರಂಗ ಚೇತನ ಪ್ರಶಸ್ತಿ ವಿಜೇತ ಹೂಲಿ ಶೇಖರ ದಂಪತಿಗಳಿಗೆ ತಾಲೂಕಾ ಕ.ಸಾ.ಪ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇತ್ತಿಚಿಗೆ ನಮ್ಮನ್ನು ಅಗಲಿರುವ ನಿಕಟ ಪೂರ್ವ ರಾಜ್ಯಾಧ್ಯಕ್ಷ ಪುಂಡಲಿಕ ಹಾಲಂಬಿಯವರಿಗೆ ಮೌನಾಚಾರಣೆ ಮೂಲಕ ಶೃದಾಂಚಲಿ ಸಲ್ಲಿಸಲಾಯಿತು. ನಿಕಟ ಪೂರ್ವ ಪದಾಧಿಕಾರಿಗಳಿಗೆ ಗೌರವಾರ್ಪಣೆ ಮಾಡಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಕ.ಸಾ.ಪ ತಾಲೂಕಾ ಅಧ್ಯಕ್ಷ ಸುಭಾಷ ಗಾವಡಾ ಸ್ವಾಗತಿಸಿ ಪ್ರಸ್ಥಾವಿಕ ಮಾತನಾಡಿದರು. ಗೌರವ ಕಾರ್ಯದರ್ಶಿ ಸೀತಾ ದಾನಗೇರಿ ಮತ್ತು ಶಿಕ್ಷಕ ಭಾಸ್ಕರ ಗಾಂವಕರ ನಿರುಪಿಸಿದರು. ಗೌರವ ಕಾರ್ಯದರ್ಶಿ ದೀಪಕ ಗೋಕರ್ಣ ವಂದಿಸಿದರು. ಕೋಶಾಧ್ಯಕ್ಷ ಗಿರೀಶ ಪಾಟಿಲ್, ಸದಸ್ಯರಾದ ಸದಾನಂದ ಪಟಗಾರ, ಶೀವರಾಮ ವೆಳಿಪ, ಪಾಂಡುರಂಗ ಗಾವಡಾ, ಎಮ್.ವಾಯ್ ಕಬ್ಬೂರ, ಮಹಾದೇವ ಹಳದಣಕರ ಮುಂತಾದವರು ಸಹಕರಿಸಿದರು.

loading...

LEAVE A REPLY

Please enter your comment!
Please enter your name here