ಪೊಲೀಸರ ವಿವಿಧ ಬೇಡಿಕೆಗಳ ಪ್ರತಿಭಟನೆಗೆ ಅಂಕೋಲಾ ನಾಗರಿಕರ ಬೆಂಬಲ

0
29

ಅಂಕೋಲಾ : ಪೊಲೀಸರು ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಜೂ.4 ರಂದು ನಡೆಸಲು ನಿರ್ಧರಿಸಿರುವ ಹೋರಾಟಕ್ಕೆ ಅಂಕೋಲಾದ ನಾಗರಿಕರು ಬೆಂಬಲ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದಾರೆ.

ನ್ಯಾಯವಾದಿ, ಹೋರಾಟಗಾರ ಉಮೇಶ ನಾಯ್ಕ ನೇತೃತ್ವದಲ್ಲಿ ಸಾರ್ವಜನಿಕರು ತಹಶೀಲ್ದಾರ್ ವಿ.ಜಿ. ಲಾಂಜೇಕರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಪೊಲೀಸರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಅವನ್ನು ಈಡೇರಿಸಲು ಕ್ರಮತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಸಮಾಜದ ರಕ್ಷಣೆಯಲ್ಲಿ ಬಹುದೊಡ್ಡ ಪಾತ್ರ ವಹಿಸುವ ಪೊಲೀಸರು ತಮ್ಮ ಬೇಡಿಕೆಗಾಗಿ ಪ್ರತಿಭಟನೆಗೆ ನಿರ್ಧ ರಿಸಿರುವುದು ವಿಪರ್ಯಾಸ. ರಾಜ್ಯ ಪಲೀಸರು ಭತ್ಯೆ, ವೇತನ ತಾರತಮ್ಯ, ಸೌಲಭ್ಯಗಳ ಕೊರತೆ ಇನ್ನಿತರ ಹಲ ವಾರು ಸಮಸ್ಯೆಗಳಿಂದ ಬಳಲುತ್ತಿದ್ದು, ಇವರ ರಕ್ಷಣೆಗೆ ಸರ್ಕಾರ ಬರಬೇಕು. ಇಲ್ಲದಿದ್ದರೆ ಸರ್ವಜನಿಕರು ಈ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವುದು ಅನಿವಾರ್ಯ ಎಂದು ಮನವಿಯಲ್ಲಿ ಹೇಳಿದ್ದಾರೆ. ಪ್ರಮುಖರಾದ ರಾಘವೇಂದ್ರ ಜಿ.ನಾಯ್ಕ, ವಸಂತ ಖೇಮು ನಾಯ್ಕ, ಗಣಪತಿ ನಾಯಕ ಸೂರ್ವೆ, ಅಮರ ಲಕ್ಷ್ಮೇಶ್ವರ, ಸಚಿನ ನಾಯ್ಕ, ವಿನಾಯಕ ನಾಯ್ಕ, ಅಕ್ಷಯ ನಾಯ್ಕ, ವಿಘ್ನೇಶ ಹರಿಕಾಂತ ಮತ್ತಿತರರು ಇದ್ದರು.

loading...

LEAVE A REPLY

Please enter your comment!
Please enter your name here