ರಸ್ತೆ ಅಗಲೀಕರಣ ಮತ್ತು ಹಂಪನ್ನು ನಿರ್ಮಿಸುವ ಕುರಿತು ಜಿಲ್ಲಾಧಿಕಾರಿಯವರಿಗೆ ಮನವಿ

0
56

ಅಂಕೋಲಾ : ಕೇಣಿ ರಸ್ತೆಯ ಅಗಲೀಕರಣ ಮತ್ತು ಹಂಪನ್ನು ನಿರ್ಮಿಸುವುದರ ಕುರಿತು ಜಿಲ್ಲಾಧಿಕಾರಿಯ ವರಿಗೆ ತಹಶೀಲ್ದಾರ ಮೂಲಕ ಕೇಣಿ ಗ್ರಾಮಸ್ಥರು ಸೋಮವಾರ ಮನವಿ ಸಲ್ಲಿಸಿದರು.

ಮನವಿಯಲ್ಲಿ ಹೇಳಿದಂತೆ ಪುರಸಭೆ ವ್ಯಾಪ್ತಿಯಲ್ಲಿ ಬರುವ ಕೇಣಿ ಭಾಗದ ಪ್ರದೇಶದ ರಸ್ತೆ ಅಗಲೀಕರಣ ಹಾಗೂ ಕೇಣಿಯ ವಿವೇಕಾನಂದ ಮೈದಾನವು ಕೇಣಿ ಬೇಲೇಕೇರಿ ರಸ್ತೆಯಲ್ಲಿ ಹೊಂದಿಕೊಂಡಿರುವುದರಿಂದ ಮೈದಾನದಲ್ಲಿ ಚಿಕ್ಕ ಮಕ್ಕಳು ಹಾಗೂ ಯುವಕರು ಈ ಮೈದಾನದಲ್ಲಿ ಕ್ರಿಕೇಟ್ ಮತ್ತು ಇನ್ನಿತರ ಕ್ರೀಡೆಗಳನ್ನು ಆಡುತ್ತಿರುತ್ತಾರೆ. ಈ ಮೈದಾನದಲ್ಲಿ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಸಾಕಷ್ಟು ಆಟಗಾರರು ಕೂಡ ಸಾಕಷ್ಟು ಕ್ರಿಕೇಟ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾರೆ.

ಕೇಣಿಯ ಮೈದಾನಕ್ಕೆ ಹೊಂದಿಕೊಂಡ ರಸ್ತೆಗೆ ಎರಡು ಕಡೆಗಳಲ್ಲಿ ಹಂಪನ್ನು ನಿರ್ಮಿಸುವ ಅವಶ್ಯಕತೆ ಇರುತ್ತದೆ. ಈ ಕುರಿತು ಪುರಸಭೆ ಮುಖ್ಯಾಧಿಕಾರಿಯವರಿಗೆ ಮನವಿ ಮೂಲಕ ತಿಳಿಸಿದ್ದು ಇರುತ್ತದೆ. ಮುಂದಾ ಗುವ ಅವಘಡ ಹಾಗೂ ಅಪಘಾತಗಳ ಬಗ್ಗೆ ಮುನ್ನೆಚ್ಚರಿಕೆಗಾಗಿ ನಾವೆಲ್ಲರೂ ತಮ್ಮಲ್ಲಿ ಮನವಿ ಸಲ್ಲಿಸಿದ್ದೇವೆ. ತಾವು ದಯಮಾಡಿ ನಮ್ಮ ಮನವಿಗೆ ಸ್ಪಂದಿಸಿ ಹಂಪನ್ನು ಒಂದು ವಾರದೊಳಗೆ ನಿರ್ಮಿಸಿಕೊಡಬೇಕಾಗಿ ವಿನಂತಿ. ಇಲ್ಲವಾದಲ್ಲಿ ಅನಿವಾರ್ಯವಾಗಿ ಊರ ನಾಗರಿಕರು ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ತಹಶೀಲ್ದಾರ ವಿ.ಜಿ.ಲಾಂಜೇಕರ ಮನವಿ ಸ್ವೀಕರಿಸಿದರು. ಸುದೀಪ ಎ.ಬಂಟ ಮನವಿ ಓದಿದರು.
ಈ ಸಂದರ್ಭದಲ್ಲಿ ರಾಜು ಬಂಟ್, ಗಜಾನನ ಬಂಟ, ರಾಘು ಬಂಟ್, ಗೌರೀಶ ಬಂಟ, ವಿಘ್ನೇಶ್ವರ ಬಂಟ, ಪ್ರಸನ್ನ ನಾಯ್ಕ, ಅರವಿಂದ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here