ಉದ್ಯಮಿ ಕೊಲೆ ಚುರುಕುಗೊಂಡ ತನಿಖೆ

0
23

ಬೆಳಗಾವಿ:1 ಸದಾಶಿವನಗರದ ಉದ್ಯಮಿಯನ್ನು ಮಂಗಳವಾರ ಬೆಳಗಿನಜಾವ ಕಣ್ಣಿಗೆ ಕಾರದ ಪುಡಿ ಎರಚಿ ಕೊಲೆ ಮಾಡಿದ ಆರೋಪಿಯ ಕುರುಹುಗಳು ಸಿಕ್ಕಿದ್ದು ಆದಷ್ಟು ಬೇಗನೆ ಬಂಧಿಸಲಾಗುವುದು ಎಂದು ಅಪರಾಧ ವಿಭಾಗದ ಡಿಸಿಪಿ ಅಮರನಾಥ ರೆಡ್ಡಿ ಹೇಳಿದ್ದಾರೆ.
ಉದ್ಯಮಿ ಜನಾರ್ಧನ ಭಟ್ ಕುಟುಂಬದವರು ಚಿತ್ರದುರ್ಗಕ್ಕೆ ಹೊದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಕಣ್ಣಿಗೆ ಕಾರದ ಪುಡಿ ಎರಚಿ ಕೊಲೆ ಮಾಡಿದ್ದಲ್ಲದೇ ಪೊಲೀಸರಿಗೆ ಸಂಶಯ ಬಾರದಂತೆ ಕೊಲೆ ಮಾಡಿದ ಕೊಠಡಿಯ ಸುತ್ತ ಬ್ಲಿಚಿಂಗ್ ಪೌಡರನ್ನು ಹಾಕಿ ಹೋಗಿದ್ದಾರೆ. ಈ ಕುರಿತು ಎಪಿಎಮ್‍ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿದ್ದು ಆದಷ್ಟು ಬೇಗ ಬಂಧಿಸುವುದಾಗಿ ಅವರು ಹೇಳಿದರು.

loading...

LEAVE A REPLY

Please enter your comment!
Please enter your name here