ನಿವೃತ್ತಿ ಹೊಂದಿದ ತಾಲೂಕು ದಂಡಾಧಿಕಾರಿ ನಾಗಾವಿ ಅವರಿಗೆ ಸನ್ಮಾನ

0
36

ಹುಬ್ಬಳ್ಳಿ : ದಿ.31 ರಂದು ಹುಬ್ಬಳ್ಳಿಯ ತಹಶೀಲ್ದಾರರಾದ ನಾಗಾವಿ ಇವರಿಗೆ ಬೀಳ್ಕೊಡುವ ಕಾರ್ಯಕ್ರಮವನ್ನು ತಹಶೀಲ್ದಾರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಳಸಾ ಬಂಡೂರಿ ಹೋರಾಟಗಾರರು ಹಾಗೂ ವಿವಿಧ ರೈತ ಪರ ಸಂಘಟನೆಯ ಮುಖಂಡರು ನಾಗಾವಿ ಇವರಿಗೆ ಸನ್ಮಾನಿಸಿ ರೈತರು ಸೇರಿದಂತೆ ಎಲ್ಲಾ ವರ್ಗದ ಜನರೊಂದಿಗೆ ಉತ್ತಮ ಜನಸ್ಪಂದನೆ ಹಾಗೂ ಬಾಂಧವ್ಯದೊಂದಿಗೆ ಕಾರ್ಯ ನಿರ್ವಹಿಸಿದ ನಾಗಾವಿ ಇವರ ಕಾರ್ಯವೈಖರ್ಯವನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾಜಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿಯ ಮಾಜಿ ಅಧ್ಯಕ್ಷರಾದ ವೀರಣ್ಣಾ ಮಳಗಿ, ಶಿವಣ್ಣಾ ಹುಬ್ಬಳ್ಳಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ವಿನಯಕುಮಾರ ಪಾಟೀಲ, ಶಿವಕುಮಾರ ಸ್ವಾಮಿ ಹಿರೇಮಠ, ಸುರೇಶ ಗೌಡ ಪಾಟೀಲ, ಶಂಕ್ರಣ್ಣ ಅಸೂಂಡಿ, ಗುರು ಅಂಗಡಿ, ಮುತ್ತುಶೆಟ್ಟರ, ಈರಣ್ಣ ನೀರಲಗಿ, ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here