ಉತಾರ ಪೂರೈಸುವ ಕೌಂಟರನ್ನು ಸ್ಥಾಪಿಸಲು ಮನವಿ

0
466

ಬೈಲಹೊಂಗಲ 06: ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿರುವ ಉತಾರ ಪೂರೈಸುವ ಕೌಂಟರ ಒಂದೇ ಇರುವದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಮೊತ್ತೊಂದು ಕೌಂಟರನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ, ನೂರಾರು ರೈತರು ತಹಶೀಲ್ದಾರ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ಜಿಪಂ ಸದಸ್ಯ ಶಂಕರ ಮಾಡಲಗಿ ಮಾತನಾಡಿ, ತಾಲೂಕಿನ ಪ್ರತಿಯೊಂದು ಹಳ್ಳಿಗಳ ಪಹಣಿ ಪತ್ರಿಕೆಗಳನ್ನು ತಹಶೀಲ್ದಾರ ಕಚೇರಿ ಆವರಣದ ಕೌಂಟರನಿಂದ ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಂತು ಪಡೆಯಬೇಕಾಗಿದ್ದು, ಉತಾರ ಪೂರೈಸುವ ಕೌಂಟರ ಒಂದೇ ಇರುವದರಿಂದ ಬೆಳಿಗ್ಗೆ 7 ಕ್ಕೆ ಬಂದು ತಮ್ಮ ಸರದಿಗಾಗಿ ಕಾಯುವ ಪರಿಸ್ಥಿತಿ ಇದೆ. ಅಲ್ಲದೆ ಇಲ್ಲಿನ ಗಣಕ ಯಂತ್ರವೂ ಕೂಡಾ ಸರಿಯಾಗಿ ಕೆಲಸ ನಿರ್ವಹಿಸದಿರುವದರಿಂದ ಉತಾರ ಪಡೆಯುವವರು ಸಾಕಷ್ಟು ಸಮಯವನ್ನು ಹಾಳು ಮಾಡಿಕೊಳ್ಳುವಂತಾಗಿದೆ ಕೂಡಲೇ ಜಿಲ್ಲಾಧಿಕಾರಿಗಳು ಮೊತ್ತೊಂದು ಕೌಂಟರನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕೆಂದರು.
ತಾಲೂಕಿನ ಸಿದ್ದಸಮುದ್ರ ಗ್ರಾಮದ ಮಹಾದೇವ ಬೋಗೂರ ಪತ್ರಿಕೆಯೊಂದಿಗೆ ಮಾತನಾಡಿ, ನಾನು ಕಳೆದ ಎರಡು ದಿನಗಳಿಂದ ಉತಾರ ಬೇಕಾಗಿ ಕಚೇರಿಗೆ ಅಲೆದಾಡುತ್ತಿದ್ದು, ನೆಟವರ್ಕನಲ್ಲಿ ತೊಂದರೆ ಕಾಣಿಸಿ ಮತ್ತೆ ಇಂದು ಬೆಳಿಗ್ಗೆ 7 ಕ್ಕೆ ಬಂದು ಸರದಿ ಸಾಲಿನಲ್ಲಿ ನಿಂತಿದ್ದು, ಒಂದು ಉತಾರ ಪಡೆಯಲು ದೂರದಿಂದ ಬರಬೇಕು ಇದರಿಂದ ಅನಾವಶ್ಯಕವಾಗಿ ಹಣದ ಜೊತೆಗೆ ಸಮಯ ವ್ಯರ್ಥವಾಗುತ್ತಿದೆ ಎಂದು ತನ್ನ ಅಳಲು ತೋಡಿಕೊಂಡನು.
ಈ ಸಂದರ್ಭದಲ್ಲಿ ಮಹಾದೇವ ಬಾವಿಹಾಳ, ರಾಮು ರಜಪೂತ, ಎಸ್.ಆರ್.ಕಟ್ಟಿ, ಈರಪ್ಪ ಹೊಂಗಲ, ಮಧು ಬಡಿಗೇರ, ಮಹಾಂತೇಶ ಜಕನಗೌಡ್ರ, ಸೋಮನಿಂಗಪ್ಪ ಕರೆಮ್ಮನವರ ಹಾಗೂ ನೂರಾರು ರೈತರು ಇದ್ದರು.

loading...

LEAVE A REPLY

Please enter your comment!
Please enter your name here