ಅಂಕೋಲಾ ಠಾಣೆಯಿಂದ ವರ್ಗಾವಣೆಗೊಂಡ ಮಾರುತಿ ಏತಪ್ಪನವರಿಗೆ ಬಿಳ್ಕೊಡುಗೆ

0
69

ಅಂಕೋಲಾ : ಅಂಕೋಲಾ ಪೊಲೀಸ್ ಠಾಣೆಯಲ್ಲಿ ಸುಮಾರು ಮೂರುವರೆ ವರ್ಷ ಸೇವೆ ಸಲ್ಲಿಸಿ ಹಾವೇರಿ ಜಿಲ್ಲೆಯ ಬ್ಯಾಡಗಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಪಿಸಿ ಮಾರುತಿ ಏತಪ್ಪನವರ್ ಅವರನ್ನು ಭಾನುವಾರ ಬಿಳ್ಕೊಡಲಾಯಿತು.
ಪಿಐ ಅರುಣಕುಮಾರ ಕೋಳೂರ ಅವರು ಮಾತನಾಡಿ ಮಾರುತಿ ಏತಪ್ಪನವರ್ ನಮ್ಮ ಠಾಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ತುರ್ತು ಸಂದರ್ಭದಲ್ಲಿ ನಿರಂತರ ಸೇವೆ ಸಲ್ಲಿಸಿದ್ದರು ಕೂಡ ಬೇಸರ ಮಾಡಿಕೊಳ್ಳದೇ ಸೇವೆ ಸಲ್ಲಿಸಿದ್ದು, ಮುಂದಿಯು ಕೂಡ ಉತ್ತಮ ಸೇವೆ ಸಲ್ಲಿಸಲಿ ಎಂದರು.
ಸನ್ಮಾನ ಸ್ವೀಕರಿಸಿ ವರ್ಗಾವಣೆಗೊಂಡ ಪಿಸಿ ಮಾರುತಿ ಏತಪ್ಪನವರ್ ಮಾತನಾಡಿ ಅಂಕೋಲಾ ಠಾಣೆಯಲ್ಲಿ ಸೇವೆ ಸಲ್ಲಿಸಿದ ನನಗೆ ಹಲವು ಅನುಭವಗಳು ಉಂಟಾಗಿವೆ. ನ್ಯಾಯಯುತವಾಗಿ ಸೇವೆಸ ಲ್ಲಿಸಿದ ಆತ್ಮತೃಪ್ತಿ ನನ್ನಲಿದೆ. ಮುಂದಿಯು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಎ.ಎಸ್.ಐ ಲಲಿತಾ ರಜಪೂತ, ಸಿಬ್ಬಂದಿಗಳಾದ ವಿಶಾಲ ನಾಯ್ಕ, ಎಲ್.ಎಚ್.ಗಿರೀಶ, ಹುಸೇನ್, ವಿಜಯ ರಾಠೋಡ್, ಶಿವಾನಂದ ಜಾಡರ್ ಮಾತನಾಡಿದರು. ಸಂತೋಷ ನಿರ್ವಹಿಸಿದರು. ಈ ಸಂದರ್ಭದಲ್ಲಿ ಎ.ಎಸ್.ಐ.ಗಳಾದ ದುರ್ಗಾಪ್ಪ ಕಲಘಟಗಿ, ಅಶೋಕ ತಳಗಪ್ಪನವರ್, ಸಿಬ್ಬಂದಿಗಳಾದ ವಸಂತ ನಾಯ್ಕ, ರಾಜೇಶ ನಾಯ್ಕ, ವಿದ್ಯಾ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here