ವಿಶ್ವಮಾನ್ಯತೆಗೆ ಕಾರಣವಾದ ವೇದಸಾಹಿತ್ಯಗಳ ಪರಿರಕ್ಷಣೆಗಾಗಿ ಜಟಾಪಾರಾಯಣ

0
75

ಶಿರಸಿ : ಭಾರತೀಯ ಸಂಸ್ಕøತಿಯ ವಿಶ್ವಮಾನ್ಯತೆಗೆ ಕಾರಣವಾದ ವೇದಸಾಹಿತ್ಯಗಳ ಪರಿರಕ್ಷಣೆಗಾಗಿ ಶ್ರೀ ಕೃಷ್ಣಯಜುರ್ವೆದ ಜಟಾಪಾರಾಯಣ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಜುಲೈ 6ರಿಂದ 19ರವರೆಗೆ ಏರ್ಪಡಿಸಲಾಗಿದೆ.
ನಗರದ ಯೋಗಮಂದಿರದಲ್ಲಿ ಭಾನುವಾರ ಸಂಜೆ ಜಟಾಪಾರಾಯಣ ಸಮಿತಿಯ ವಿದ್ವಾನ್ ಶಂಕರ ಭಟ್ಟ ಬಾಲಿಗದ್ದೆ ಹಾಗೂ ವಿದ್ವಾನ್ ನಾರಾಯಣ ಭಟ್ಟ ವಿವರಣೆ ನಿಡಿದರು. ಸನಾತನ ಆರ್ಯುವೈದಿಕ ಭಾರತೀಯ ಸಂಸ್ಕøತಿಗೆ ಮತ್ತು ಭಾರತದ ವಿಶ್ವಮಾನ್ಯತೆಗೆ ವೇದಗಳೇ ಮೂಲ ಕಾರಣಗಳಾಗಿವೆ. ಪ್ರಪಂಚದಲ್ಲಿ ಇದುವರೆಗೆ ಲಭ್ಯವಾದ ಸಾಹಿತ್ಯ ಶ್ರೇಣಿಯಲ್ಲಿ ವೇದಸಾಹಿತ್ಯವು ಅತ್ಯಂತ ಪ್ರಾಚೀನವಾದುದಾಗಿದೆ. ಹತ್ತು ಸಾವಿರ ವರ್ಷಕ್ಕೂ ಮಿಗಿಲಾದ ಇತಿಹಾಸ ಹೊಂದಿದೆ. ಜಗತ್ತಿನಲ್ಲಿ ಇಂದಿನವರೆಗೂ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡ ಸಾಹಿತ್ಯ ವೇದಸಾಹಿತ್ಯವಾಗಿದೆ ಎಂದರು. ಶಬ್ಧರಾಶಿಯಾದ ವೇದಸಾಹಿತ್ಯವನ್ನು ಉಳಿಸಿಕೊಳ್ಳುವಲ್ಲಿ ಋಷಿಗಳ ತಪಸ್ಸು ಅವಿಸ್ಮರಣಿಯವಾಗಿದೆ. ಇವುಗಳ ಪರಿರಕ್ಷಣೆಗೆ ವೇದಗಳಿಗೆ ಎಂಟು ರೀತಿಯ ವಿಕೃತಿ ಪಾಠಗಳನ್ನು ಋಷಿಗಳು ನೀಡಿದ್ದಾರೆ. ಅದರಲ್ಲೊಂದಾದ ಪುಣ್ಯಪ್ರದ ಹಾಗೂ ವೈಜ್ಞಾನಿಕವೂ ಆದ ಜಟಾಪಾರಾಯಣವನ್ನು ಸ್ವಣ್ರ್ವವಲ್ಲೀ ಸಂಸ್ಥಾನ ಹಾಗೂ ಬೆಂಗಳೂರಿನ ಶ್ರೀ ವಿದ್ಯಾರಣ್ಯ ವೇದಸಭಾ ಸಂಘಟಿಸಿವೆ ಎಂದು ತಿಳಿಸಿದರು.
ಮುಖಸ್ಥ ಪಾರಾಯಣ….
ಅತ್ಯಂತ ವಿರಳವಾಗಿ ನಡೆಯುವ ಈ ಕಾರ್ಯಕ್ರಮ ಕರ್ನಾಟಕದಲ್ಲಿ ಆರನೇ ಬಾರಿಗೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡನೆ ಬಾರಿಗೆ ನಡೆಯುತ್ತಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಪ್ರಸಿದ್ಧ ವಿದ್ವಾಂಸರು ಭಾಗವಹಿಸಲಿದ್ದಾರೆ. ಜುಲೈ 6ರಿಂದ 14 ದಿನಗಳ ಕಾಲ ನಡೆಯುವ ಜಟಾ ಪಾರಾಯಣದಲ್ಲಿ ಪ್ರತಿದಿನ ಹತ್ತು ಗಂಟೆಗಳ ಕಾಲ ನಿರಂತರ ಪಾರಾಯಣ ನಡೆಯಲಿದೆ ಎಂದು ತಿಳಿಸಿದರು.
ಆಸಕ್ತರು ಪಾರಾಯಣವನ್ನು ಶ್ರವಣ ಮಾಡಬಹುದಾಗಿದೆ. ಯಾವುದೇ ಪುಸ್ತಕದ ಅವಲಂಬನೆಯಿಲ್ಲದೇ ಮುಖಸ್ಥವಾಗಿ ಪಾರಾಯಣ ಮಾಡುವುದು ಇದರ ವಿಶೇಷವಾಗಿದೆ. ಅಂದಾಜು 6ಲಕ್ಷ ರೂ. ವೆಚ್ಚದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜು.6ರ ಬೆಳಿಗ್ಗೆ 9ಕ್ಕೆ ಗಣಪತಿಪೂಜಾ, ವೇದಪುರುಷಾರಾಧನೆ, ಸ್ವರ್ಣವಲ್ಲೀ ಶ್ರೀಗಳಿಂದ ದೀಪಜ್ವಾಲನದ ಮೂಲಕ ಪಾರಾಯಣ ಆರಂಭವಾಗಲಿದೆ. ಪ್ರತಿದಿನ ಬೆಳಗ್ಗೆ 7.30ರಿಂದ ನಡೆಯಲಿದೆ. ಜು.19ರಂದು ವ್ಯಾಸಪೂರ್ಣಿಮೆಯಂದು ವ್ಯಾಸವಂದನೆಯೊಂದಿಗೆ ಪಾರಾಯಣ ಮಂಗಲವಾಗಲಿದೆ ಎಂದು ತಿಳಿಸಿದರು.
ಭಾಗವಹಿಸುವ ಪಾರಾಯಣಕರ್ತರು….
ಜಟಾಪಾರಾಯಣದಲ್ಲಿ ನಾರಾಯಣ ಘನಪಾಠಿ ಚೆನ್ನೈ, ಗೋಪಾಲ ಘನಪಾಠಿ ಕುಂಭಕೋಣ, ಗನಪತಿ ಯಜ್ಞಪತಿ ಭಟ್ಟ ಗೋಕರ್ಣ, ಸುಚೇತನ ಭಟ್ಟ ಜಡ್ಡಿನಬೈಲು, ಯಾದವೇಶ ಭಟ್ಟ ಕುಮಟಾ, ರಾಧಾಕೃಷ್ಣ ಭಟ್ಟ ಮತ್ತಿಘಟ್ಟಾ, ಮಹಾಬಲೇಶ್ವರ ಭಟ್ಟ ಗೋಕರ್ಣ, ನಾಗರಾಜ ಭಟ್ಟ, ಪ್ರಸನ್ನ ವೆಂಕಟೇಶ ಚೆನ್ನೈ ಭಾಗವಹಿಸುವರು ಎಂದರು.

loading...

LEAVE A REPLY

Please enter your comment!
Please enter your name here