ಜು.9ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಪದಗ್ರಹಣ ಸಮಾರಂಭ

0
63

ಸಿದ್ದಾಪುರ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಜು.9 ರಂದು ಲೈಯನ್ಸ್ ಭಾಲಭವನದಲ್ಲಿ ನಡೆಸಲು ತಾಲೂಕಾ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಅವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ತಾಲೂಕಾ ಘಟಕದ ಸಭೆಯಲ್ಲಿ ಈ ಕುರಿತು ನಿರ್ಣಯಿಸಲಾಯಿತು.
ಪದಗ್ರಹಣ ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿಗಳನ್ನು ಉದ್ಘಾಟಕರನ್ನಾಗಿ ಆಮಂತ್ರಿಸುವಂತೆ ಹಾಗೂ ತಾಲೂಕಿನ ಹಿರಿಯ ಅಧಿಕಾರಿಗಳ, ಜನಪ್ರತಿನಿಧಿಗಳನ್ನು ಉಪಸ್ಥಿತರಿರುವಂತೆ ಕೇಳಿಕೊಳ್ಳುವುದು ಎಂದು ತೀರ್ಮಾನಿಸಲಾಯಿತು. ಜುಲೈ ಮೂರನೆ ವಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಅಭಿಯಾನವನ್ನು ಆರಂಭಿಸಲು ತಿರ್ಮಾನಿಸಲಾಯಿತು. ನಂತರದಲ್ಲಿ ಕಾಲಕಾಲಕ್ಕೆ ಘಟಕವು ಸಭೆ ಸೇರುವಂತೆ, ನಿರಂತರವಾಗಿ ಕಾರ್ಯಕ್ರಮಗಳನ್ನು ಸಂಘಟಿಸುವ ಕುರಿತು ಚರ್ಚಿಸಲಾಯಿತು. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‍ನ್ನು ಅತ್ಯಂತ ಪರಿಣಾಮಕಾರಿಯಾಗಿ, ಕ್ರಿಯಾಶೀಲವಾಗಿ ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಯೂ, ತನ್ನ ಈ ಹಿಂದಿನ ಸಂಘಟನೆಗಳಲ್ಲಿಯ ಅನುಭವಗಳನ್ನು ಪರಿಷತ್ ಬೆಳವಣಿಗೆ ಬಳಸಿಕೊಳ್ಳುವುದಾಗಿ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಹೇಳಿದರು. ಪರಿಷತ್ ಕಾರ್ಯ ಚಟುವಟಿಕೆಗಳಿಗೆ ಎಲ್ಲರ ಸಹಕಾರ ಕೋರಿದರು.
ಸಾಹಿತ್ಯ ಪರಿಷತ್ ರಚನಾತ್ಮಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಗಂಗಾಧರ ಕೊಳಗಿ ಹೇಳಿದರು. ಪರಿಷತ್ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರವನ್ನು ಇಲಾಖೆಯಿಂದ ನೀಡುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ನಾಯ್ಕ ಹೇಳಿದರು. ನಿಕಟಪೂರ್ವ ಅಧ್ಯಕ್ಷ ಕನ್ನೇಶ್ ಕೋಲಶಿರ್ಸಿ ಪರಿಷತ್ ಬೆಳವಣಿಗೆ ಆಗಬೇಕಾಗಿರುವ ಕೆಲಸ ಕಾರ್ಯಗಳ ಕುರಿತು ತಿಳಿಸಿದರು. ಸಭೆಯಲ್ಲಿ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎನ್.ನಾಯ್ಕ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ.ನಾಯ್ಕ ಕಡಕೇರಿ, ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ ಹಾರ್ಸಿಮನೆ, ಬರಹಗಾರ ತಮ್ಮಣ್ಣ ಬೀಗಾರ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕ ಗೋಪಾಲ ನಾಯ್ಕ ಬಾಶಿ, ತಾಲೂಕಾ ಗೌರವ ಕೋಶಾಧ್ಯಕ್ಷ ಪ್ರಶಾಂತ ಶೇಟ್, ಸದಸ್ಯರಾದ ಅಣ್ಣಪ್ಪ ನಾಯ್ಕ ಶಿರಳಗಿ, ಮಂಜುನಾಥ ಭಟ್ಟ, ಟಿ.ಕೆ.ಎಂ.ಆಜಾದ್, ವೆಂಕಟೇಶ ಮಡಿವಾಳ, ಶೋಭಾ ನಾಯ್ಕ ಹಿರೆಕೈ, ಸುಧಾರಾಣ ನಾಯ್ಕ, ಸುಮಿತ್ರಾ ಶೇಟ್ ಉಪಸ್ಥಿತರಿದ್ದರು. ತಾಲೂಕಿನ ಗೌರವ ಕಾರ್ಯದರ್ಶಿಗಳಾದ ಎಂ.ವಿಠ್ಠಲ ಅವರಗುಪ್ಪ ಸ್ವಾಗತಿಸಿದರು. ಪ್ರಶಾಂತ ಹೆಗಡೆ ವಂದಿಸಿದರು.

loading...

LEAVE A REPLY

Please enter your comment!
Please enter your name here