ಬ್ಲೂಟೂತ್ ಕಿರುಚಿತ್ರಕ್ಕೆ ಮುಹೂರ್ತ, ಅಂಧ ವಿದ್ಯಾರ್ಥಿಗಳಿಂದ ಚಾಲನೆ

0
50

ಹುಬ್ಬಳ್ಳಿ : ಮೊಬೈಲ್‍ನಂತಹ ಆಧುನಿಕ ಆಕರ್ಷಣೆಗಳು ಹಳ್ಳಿ ಬದುಕನ್ನು ಹೇಗೆಲ್ಲ ಹಾಳು ಮಾಡುತ್ತಿವೆ ಎಂಬುದರ ಎಳೆಯನ್ನಿಟ್ಟುಕೊಂಡು ಪತ್ರಕರ್ತ ಡಿ.ವಿ. ಕಮ್ಮಾರ ಬರೆದಿರುವ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ `ಬ್ಲೂಟೂತ್’ ಕಿರುಚಿತ್ರದ ಚಿತ್ರೀಕರಣಕ್ಕೆ ಭಾನುವಾರ ಸಿದ್ಧಾರೂಢ ಮಠದಲ್ಲಿ ಮುಹೂರ್ತ ನಡೆಯಿತು.
ಸಿದ್ಧಾರೂಢ ಮಠದ ಸರ್ಕಾರಿ ಅಂಧ ಮಕ್ಕಳ ಶಾಲೆಯ ಪ್ರತಿಭಾವಂತ ಅಂಧ ವಿದ್ಯಾರ್ಥಿಗಳಾದ ಭೀರಪ್ಪ ಮತ್ತು ಮಂಜು ಮರ್ಲಾಪುರ ಕ್ಯಾಮೆರಾಗೆ ಚಾಲನೆ ನೀಡಿದರು.
`ವಿಜಯವಾಣಿ’ ಪತ್ರಿಕೆಯ ಸ್ಥಾನಿಕ ಸಂಪಾದಕ ಮೋಹನ ಹೆಗಡೆ ಪೂಜೆ ಸಲ್ಲಿಸಿದರು. ಸಂಸ್ಕøತಿ ಕಾಲೇಜ್ ಆಫ್ ವಿಜ್ಯುವಲ್ ಆ್ಯಂಡ್ ಪರ್ಫಾರ್ಮಿಂಗ್ ಆಟ್ರ್ಸ್‍ನ ಸಿಇಒ ಡಾ. ವೀಣಾ ಡ್ಯಾನಿಯಲ್ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಚಿತ್ರ ನಟ ಚಿಂದೋಡಿ ವಿಜಯಕುಮಾರ, ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣನವರ, ಹಿರಿಯ ಛಾಯಾಗ್ರಾಹಕ ಕಿರಣ ಬಾಕಳೆ, ಚಿತ್ರದ ನಿರ್ದೇಶಕ ವಿನಯಕುಮಾರ ಪಾಟೀಲ, ಚಿತ್ರಕಥೆ ಬರೆದಿರುವ ಡಿ.ವಿ. ಕಮ್ಮಾರ, ಛಾಯಾಗ್ರಾಹಕ ವಿನಾಯಕ ಬಾಕಳೆ, ಇತರರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here