ಭೂ ಸುಧಾರಣೆಗೆ ಆಗ್ರಹಿಸಿ ಜುಲೈ20ರಂದು ರಾಜ್ಯಾದ್ಯಂತ ಧರಣಿ

0
89

ಕಾರವಾರ : ದೇವರಾಜು ಅರಸು ಶತಜಯಂತಿ ಆಚರಣೆ ಸಂದರ್ಭದಲ್ಲಿ 2ನೇ ಸುತ್ತಿನ ಭೂ ಸುಧಾರಣೆಗೆ ಆಗ್ರಹಿಸಿ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜುಲೈ 20 ರಂದು ಧರಣಿ ನಡೆಸಲಾಗುತ್ತಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಸಿರಿಮನೆ ನಾಗರಾಜ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ 1950-60 ರ ದಶಕಗಳಲ್ಲಿ ಬೃಹತ್ ಹೋರಾಟದ ಫಲವಾಗಿ 1968 ರಲ್ಲಿ ಪರಿಷ್ಕøತವಾದ, ಕ್ರಾಂತಿಕಾರಿ ಭೂ ಸುಧಾರಣೆ ಕಾಯ್ದೆಯನ್ನು ಅಂದಿನ ಮುಖ್ಯ ಮಂತ್ರಿ ದೇವರಾಜು ಅರಸರ ದಿಟ್ಟ ನಿರ್ಧಾರದಿಂದ 1974 ರಲ್ಲಿ ಜಾರಿಗೆ ಬಂದಿದೆ ಎಂದರು.
ಆದರೆ ಬಡವರಿಗೆ ಭೂಮಿ ಹಂಚಿಕೆಯಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಕಂಡ ಈ ಕಾಯ್ದೆಯ ಸಕಾರಾತ್ಮಕ ಉದ್ದೇಶಗಳು ಸರಿಯಾಗಿ ಜಾರಿಗೆ ಬಂದಿಲ್ಲ.ಒಟ್ಟಾರೆ ಬಡವರ ಭೂಮಿ ಬೇಡಿಕೆ ಇಡೇರಿಸುವಲ್ಲಿ ಈ ಕಾಯ್ದೆ ಸಂಪೂರ್ಣವಾಗಿ ವಿಫಲಗೊಂಡಿದೆ. ದೇವರಾಜು ಅರಸು ಅವರ ನಂತರ ಬಂದ ಸರಕಾರಗಳು ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರಿಂದ ಕಾಯ್ದೆ ವಿಫಲಗೊಳ್ಳಲು ಮುಖ್ಯ ಕಾರಣ ಎಂದು ಆರೋಪಿಸಿದರು.
ಲಕ್ಷಾಂತರ ಬಡ ಭೂ ರಹಿತ ರೈತರು, ದಲಿತರು, ಆದಿವಾಸಿಗಳು, ಅಲೆಮಾರಿಗಳು, ಮೀನುಗಾರರು ಮುಂತಾದವರು ತುಂಡು ಭೂಮಿಗಾಗಿ ಹೆಣಗಾಡುತ್ತಿದ್ದಾರೆ. ಲಕ್ಷಾಂತರ ಬಡವರು ವಾಸಿಸಲೊಂದು ಸ್ವಂತ ಸೂರಿಗಾಗಿ ತುಂಡು ನಿವೇಶನಕ್ಕಾಗಿ ಪರಿತಪಿಸುತ್ತಿದ್ದಾರೆ. ಕೃಷಿಯೋಗ್ಯ ಭೂಮಿಯೆಲ್ಲ ಕೈಗಾರೀಕರಣ, ನಗರೀಕರಣದ ಹೆಸರಿಲ್ಲಿ ಸರಕಾರ ವಶಪಡಿಸಿಕೊಳ್ಳುತ್ತಿದೆ. ಕೈಗಾರಿಕೋದ್ಯಮಿಗಳು ಸರಕಾರದಿಂದ ಭೂಮಿಯನ್ನು ಪಡೆದುಕೊಂಡು ಅಭಿವೃದ್ಧಿ ಮಾಡದೆ ಪಾಳು ಬಿಟ್ಟಿದ್ದಾರೆ. ಆದರೆ ಬಡವರು ತುಂಡು ಭೂಮಿಯ ಹಕ್ಕುಪತ್ರಕ್ಕಾಗಿ ಕಳೆದ ಹಲವಾರು ದಶಕಗಳಿಂದ ಹೋರಾಡುತ್ತಲೇ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಬಡವರಿಗೆ ಉಳಲು ಭೂಮಿ, ಇರಲು ಮನೆ, ನಿವೇಶನಕ್ಕಾಗಿ ಒತ್ತಾಯಿಸಲು ಹೊಸದೊಂದು ಚಳವಳಿಯನ್ನು ಆರಂಭಿಸಲಾಗುತ್ತದೆ. ಈ ಉದ್ದೇಶದ ಈಡೇರಿಕೆಗಾಗಿ ಸಮಾನ ಮನಸ್ಕ ಜನಪರ ಸಂಘಟನೆಗಳು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟಕ್ಕಿಳಿದಿದೆ. ಅಗಸ್ಟ್ 20 ರಂದು ನಡೆಯಲಿರುವ ದೇವರಾಜು ಅರಸು ಜನ್ಮ ಶತಾಬ್ದಿ ಆಚರಣೆ ಪೂರ್ವದಲ್ಲಿ ವಿವಿಧ ರೀತಿಯ ಹಕ್ಕೊತ್ತಾಯಗಳನ್ನು ಸರಕಾರದ ಮುಂದಿಡಲಾಗುತ್ತದೆ. ಸರಕಾರ ಆ.20 ರೊಳಗೆ ಭೂ ಕಾಯ್ದೆಗೆ ಹೊಸ ರೂಪುರೇಷೆ ಕೊಟ್ಟು ಜಾರಿ ತರಬೇಕು ಎಂದರು.
ಅಡಿಯಾಳಾಗಿರುವ ಸರಕಾರ:
ಲಕ್ಷಾಂತರ ಬಡ ಕೃಷಿಕ, ಜನಸಾಮಾನ್ಯರಿಂದ ಭೂಮಿಯನ್ನು ಕಸಿದುಕೊಂಡು ಸರಕಾರ ಕಾಪೆರ್Çೀರೇಟ್ ಸಂಸ್ಥೆ ಹಾಗೂ ಬಂಡವಾಳಶಾಹಿಗಳಿಗೆ ಮಾರಾಟ ಮಾಡಿ ಅನುಕೂಲ ಕಲ್ಪಿಸುತ್ತಿದೆ. ಕೃಷಿಯೇತರರು ಭೂಮಿ ಖರೀದಿಸದಂತೆ 25 ಲಕ್ಷರೂ.ಗಳ ಮಿತಿ ಹೇರಿ ಭೂ ಕಬಳಿಕೆಗೆ ಅವಕಾಶ ಮಾಡಿಕೊಳ್ಳಲಾಗುತ್ತದೆ.
ಅಲ್ಲದೇ ಈಗ 2 ಕೋಟಿ ರೂ. ಮಿತಿ ಏರಿಸುವಂತೆ ಒತ್ತಾಯ ಪಡಿಸಲಾಗುತ್ತದೆ. 1974ರ ಭೂ ಸುಧಾರಣೆ ಕಾಯ್ದೆ, ದೊಡ್ಡ ಜಮೀನುದಾರರಿಗೆ ಅನುಕೂಲಕರವಾದ ಭೂ ಮಿತಿ ಸಹ ವಾಸ್ತವದಲ್ಲಿ ಜಾರಿಯಲ್ಲಿಲ್ಲ. ಇದರಿಂದ ಇತ್ತೀಚಿನ ವರ್ಷಗಳಲ್ಲಿ ಹೊಸ ರೀತಿಯಲ್ಲಿ ಬಲಾಢ್ಯರ ಭೂ ಕಬಳಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಮುಖ್ಯಮಂತ್ರಿಗಳ ನೇತೃತ್ವದ ಟಾಸ್ಕ್‍ಫೆÇೀರ್ಸ್ ಸಮಿತಿಯ ವರದಿ ಪ್ರಕಾರ ರಾಜ್ಯದಲ್ಲಿ ಸುಮಾರು 11 ಲಕ್ಷ ಸರಕಾರಿ ಭೂಮಿ ನೆಲಗಳ್ಳರಿಂದ ಮತ್ತು ಶ್ರೀಮಂತ ಪ್ರಭಾವಿ ಜನರಿಂದ ಒತ್ತುವರಿಯಾಗಿದೆ.ಇದರ ಹಿಂದೆ ಭೂ ಮಾಫಿಯಾ ಸಕ್ರೀಯವಾಗಿದೆ. ಸರಕಾರ ಮಾತ್ರ ಕಂಡು ಕಾಣದಂತೆ ಮಾಡುತ್ತಿದ್ದು, ಭೂಮಿಯನ್ನು ಮರು ವಶ ಪಡಿಸಿಕೊಳ್ಳಲು ಸಮಿತಿಗಳು ನೀಡಿದ ಶಿಫಾರಸ್ಸು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದರಂತೆ ಉತ್ತರ ಕನ್ನಡ ಜಿಲ್ಲೆಯ ಸೀಬರ್ಡ್ ನೌಕಾನೆಲೆ ನಿರಾಶ್ರಿತರ ಸಮಸ್ಯೆ ಬಹದೊಡ್ಡ ಸಮಸ್ಯೆಯಾಗಿದೆ. ಯೋಜನೆಯಿಂದ ನಿರಾಶ್ರಿತರಾದವರಿಗೆ ಸೂಕ್ತ ಪರಿಹಾರ, ನ್ಯಾಯ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪ್ರಮುಖ್ಯತೆ ನೀಡುತ್ತದೆ. ಜುಲೈ 20 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳುವ ಹೋರಾಟದಲ್ಲಿ ಸೀಬರ್ಡ್ ನಿರಾಶ್ರತರ ಸಮಸ್ಯೆಯೂ ಒಳಗೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ರಮೇಶ,ಗುರುದಾಸ ಬಾನಾವಳಿ, ರಮೇಶ ಗೌಡ, ಪುರುಷೋತ್ತಮ್ ಗೌಡ, ರಾಜನ್ ಬಾನಾವಳಿ ಮುಂತಾದವರು ಇದ್ದರು.

loading...

LEAVE A REPLY

Please enter your comment!
Please enter your name here