ಕಲೆ ಮುಂದಿನ ಪೀಳಿಗೆಗೆ ತಲುಪಿಸಿ: ದಯಾನಂದ

0
45

ಚಿಕ್ಕೋಡಿ 18: ಇಂದಿನ ಜಾಗತಿಕ ವ್ಯವಸ್ಥೆಯಲ್ಲಿ ಹುಟ್ಟಿಕೊಳ್ಳುತ್ತಿರುವ ತಾಂತ್ರಿಕ ವ್ಯವಸ್ಥೆಗಳಿಂದಾಗಿ ರಂಗಭೂಮಿ ಹಾಗೂ ಜಾನಪದ ಕಲಾವಿಧರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಯುವ ಧುರೀಣ ದಯಾನಂದ ಮಠಪತಿ ಆತಂಕ ವ್ಯಕ್ತಪಡಿಸಿದರು.
ಸ್ಥಳೀಯ ನೌಕರರ ಭವನದಲ್ಲಿ ನಡೆದ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಲೆ, ಕಲಾವಿಧರು ಮುಂದಿನ ಪೀಳಿಗೆಗೆ ತಲುಪಬೇಕಾದರೆ ಅವುಗಳಿಗೆ ಸಮಾಜದ ಬೆಂಬಲ ಅತಿ ಅವಶ್ಯವಾಗಿದ್ದು, ಜಾನಪದ ಉಳಿದರೆ ಮಾತ್ರ ನಮ್ಮ ದೇಶದ ಸಂಸ್ಕøತಿ ಉಳಿಯುತ್ತದೆ ಎಂದರು.
ಹಿರಿಯ ಜಾನಪದ ಕಲಾವಿದ ಬಸವರಾಜ ಘೀವಾರಿ ಮಾತನಾಡಿ, ದೂರದರ್ಶನ ಮಾದ್ಯಮಗಳ ಹಾವಳಿಯಿಂದ ಜಾನಪದ ಕಲಾವಿಧರು ಮಾತ್ರವಲ್ಲದೇ ಹಲವಾರು ವರ್ಷಗಳ ಕಾಲ ಜನಮನ ರಂಜಿಸಿದ ನಾಟಕ ಕಂಪನಿಗಳು ಮುಚ್ಚಿಹೋಗಿದ್ದು, ಅವುಗಳ ಉಳುವಿಗಾಗಿ ಅಭಿಮಾನಿಗಳು ಹಾಗೂ ಸರಕಾರ ಟೊಂಕಕಟ್ಟಿ ನಿಲ್ಲಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸಂದೀಪ ಶೇರಖಾನೆ, ನೌಕರರ ಸಂಘದ ಅಧ್ಯಕ್ಷ ಎಸ್.ಎನ್. ಬೆಳಗಾವಿ, ಸಯ್ಯದ, ಲಖನ್ ಸವಸುದ್ಧಿ, ಗೋಪಾಲ ಭಜಂತ್ರಿ, ಪ್ರಕಾಶ ವಂಟಮುತ್ತೆ, ತಾ.ಪಂ. ಸದಸ್ಯ ರಾಜು ಪಾಟೀಲ, ಸೂರ್ಯಕಾಂತ ನಾಯಿಕ, ಶಿವಾನಂದ ಶಿರಗಾಂವಿ, ದಲಿತ ಮುಖಂಡರಾದ ಬಸವರಾಜ ಡಾಕೆ, ಸುದರ್ಶನ ತಮ್ಮನ್ನವರ, ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here