ಹದೆಗೆಟ್ಟ ರಸ್ತೆ ಸರಿಯಾಗುವುದೆಂದು?

0
90

ದಾಂಡೇಲಿ : ನಗರೋತ್ತಾನ ಯೋಜನೆಯಡಿ ಡಾಂಬರೀಕರಣಗೊಂಡ ನಗರದ ಪ್ರಮುಖ ರಸ್ತೆಯಾದ ಜೆ.ಎನ್.ರಸ್ತೆಯ ಡಾಮರ್ ಸಂಪೂರ್ಣ ಕಿತ್ತು ಹೋಗಿ ದಿನಕ್ಕೆ ಮೂರ್ನಾಲ್ಕು ದ್ವಿಚಕ್ರ ವಾಹನ ಸವಾರರು ಬಿದ್ದು ಕೈ ಕಾಲು ಗಾಯ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.

ಸಚಿವ ದೇಶಪಾಂಡೆಯವರ ವಿಶೇಷ ಮುತುವರ್ಜಿಯಿಂದ ಬಂದಿರುವ ನಗರೋತ್ತಾನ ಅನುದಾನ ಕಳಪೆ ಕಾಮಗಾರಿಯಿಂದ ಬಂದ ಅನುದಾನ ನೀರಿಗೆ ಹೋಮ ಇಟ್ಟಂಗೆ ಆತು ಅಂತಾರೆ ಸಾರ್ವಜನಿಕರು. ಎಲ್ಲೆಡೆ ಕಳಪೆ ಕಾಮಗಾರಿಯೆ ಮೇಳೈಸಿದ್ದು, ಇದರ ಹಿಂದೆ ಅಭಿಯಂತರರುಗಳ ಕರಾಮತ್ತು ನಡೆದಿದೆ ಎಂಬ ಮಾತಿಗೆ ಪುಷ್ಟಿ ನೀಡುತ್ತಿದೆ ನಗರದ ಜೆ.ಎನ್.ರಸ್ತೆ.

ನಗರೋತ್ತಾನದಡಿ ಡಾಮರೀಕರಣಗೊಂಡ ರಸ್ತೆ ಆರು ತಿಂಗಳೊಳಗೆ ಡಾಮರ್ ಎದ್ದು ಹೋಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿ ಕೊನೆಗೆ ಮತ್ತೆ ಮರು ತೇಪೆ ಹಚ್ಚುವ ಡಾಮರೀಕರಣ ಮಾಡಿದ್ದರೂ, ಇದೀಗ ಮತ್ತೆ ಅದೇ ರಾಗ, ಅದೇ ಹಾಡು ಎಂಬ ಸ್ಥಿತಿ ಜೆ.ಎನ್.ರಸ್ತೆಗೆ ಬಂದಿದೆ. ಬಹುಷ: ಈ ವರ್ಷವು ನಗರೋತ್ತಾನದಡಿ ಇದೇ ರಸ್ತೆ ಡಾಮರೀಕರಣಕ್ಕೆ ಕೋಟಿ ರೂ ನುಂಗುವ ಯೋಚನೆಯೇ ಎಂಬ ಸಾರ್ವಜನಿಕರ ಪ್ರಶ್ನೆಗೆ ನಗರ ಸಭೆ ಉತ್ತರಿಸಬೇಕಾಗಿದೆ. ಒಟ್ಟಿನಲ್ಲಿ ತ್ವರಿತಗತಿಯಲ್ಲಿ ಈ ರಸ್ತೆಯನ್ನು ಸರಿಪಡಿಸದಿದ್ದಲ್ಲಿ ವಾಹನ ಸವಾರರು ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೆ ಕುತ್ತು ಬರುವುದರಲ್ಲಿ ಎಲ್ಲಷ್ಟು ಸಂಶಯವಿಲ್ಲ.

loading...

LEAVE A REPLY

Please enter your comment!
Please enter your name here