ನ್ಯಾ. ಬನ್ನೂರಮಠರಿಗೆ ನಿವೇಶನ ಕಾಟ

0
20

ರಾಜ್ಯದ ಲೋಕಾಯುಕ್ತರಾಗಿ ಪೀಠ ಇರುವ ಮೂಹೂರ್ತಕ್ಕಾಗಿ ಕಾಯ್ದು ಕುಳಿತಿರುವ ನ್ಯಾಯಮೂರ್ತಿ ಎಸ್. ಆರ್. ಬನ್ನೂರ ಮಠ ಅವರಿಗೆ ನಿವೇಶನ ಕಾಟ ಎದುರಾಗಿದೆ. ಈ ಹಿಂದೆ ಲೋಕಾಯುಕ್ತರಾಗಿ ನೇಮಕಗೊಂಡ 67 ದಿನ ಲೋಕಾಯುಕ್ತರಾಗಿ ಕಾರ್ಯ ಮಾಡಿದ್ದ ನ್ಯಾಯಮೂರ್ತಿ  ಶಿವರಾಜ ಪಾಟೀಲ, ಇದೇ ರೀತಿಯ ನಿವೇಶನ ಕಾಟದಿಂದ ತಮ್ಮ ಸ್ಥಾನಕ್ಕೆ  ರಾಜೀನಾಮೆ ನೀಡಿದ ಕಹಿ ನೆನಪು ಮರೆಯಾಗುವ ಮೊದಲೇ  ಪೀಠ ಏರಲು ಸಿದ್ಧರಾಗಿರುವ ಬನ್ನೂರ ಮಠ ಅವರಿಗೆ ಅದೇ ರೀತಿಯ ನಿವೇಶನ ಕಾಟ ಈಗ ಆರಂಭವಾಗಿದೆ.

ಯಲಹಂಕ ಸಮೀಪದ ಅಲ್ಲಾಳ ಸಂಧ್ರದಲ್ಲಿ ಕರ್ನಾಟಕ ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘ ನಿರ್ಮಿಸಿದ್ದ ಬಡಾವಣೆಯಲ್ಲಿ ಶ್ರೇಷ್ಠ ನ್ಯಾಯಾಲಯದ ಆದೇಶದಂತೆ 404 ನಿವೇಶನಗಳ ನಾಗರಿಕರ ಸೌಲಭ್ಯಕ್ಕಾಗಿ ಒದಗಿಸಬೇಕಾಗಿತ್ತು ಜೊತೆಗೆ ಸರಕಾರದ ಪಟ್ಟಣ ಯೋಜನೆ ನೀತಿಗೆ ಅನುಸಾರವಾಗಿ ಉದ್ಯಾನ ಶಾಲೆ ರಸ್ತೆಗಾಗಿ ಜಾಗೆಯನ್ನು ಮೀಸಲಾಗಿ  ಇಡಬೇಕಾಗಿತ್ತು. ನ್ಯಾಯಾಂಗ ಬಡಾವಣೆಯಲ್ಲಿ ಆ ರೀತಿ ಮೀಸಲಾಗಿ ಇಟ್ಟ 404 ನಿವೇಶನಗಳನ್ನು ಗುರುತಿಸಲಾಗಿದೆ. ಆ ಪೈಕಿ ನಿವೇಶನ ಶಂಕೆ  2118/ ಎ ದಲ್ಲಿ 110-60 ಅಳತೆಯ ನಿವೇಶನವನ್ನು ನ್ಯಾಯಮೂರ್ತಿ ಬನ್ನೂರಮಠ ಪಡೆದುಕೊಂಡಿದ್ದಾರೆ. ಹಾಗೂ ಆ ನಿವೇಶನದಲ್ಲಿ ಮನೆಯನ್ನು ಕಟ್ಟಿಕೊಂಡಿದ್ದಾರೆ. ಈ ನಿವೇಶನವನ್ನು ಅವರು 2001 -02 ರಲ್ಲಿ ಸಬ್ ರಜಿಸ್ಟರ್ ದಾಖಲೆ ಸಹಿತ  ಸಂಖ್ಯೆ 4788 ರಲ್ಲಿ ನ್ಯಾಯಮೂರ್ತಿ ಬನ್ನೂರ ಮಠ ಅವರಿಗೆ  ನೊಂದಣಿ ಮಾಡಿಕೊಡಲಾಗಿದೆ.. ಆದರೆ ಈ ಮೊದಲು  ಈ ನಿವೇಶನವನ್ನು ಉದ್ಯಾನವನ ನಿರ್ಮಿಸಲು ಮೀಸಲಾಗಿ  ಇಡಲಾಗಿತ್ತು ಎಂದು ಹೇಳಲಾಗಿದೆ.

ಕರ್ನಾಟಕ ಶ್ರೇಷ್ಠ ನ್ಯಾಯಾಲಯದ ನ್ಯಾಯಮೂರ್ತಿಯಾಗಿ  ನಂತರ ಕೇರಳ ಶ್ರೇಷ್ಠ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ಮಾಡಿರುವ ನ್ಯಾಯಮೂರ್ತಿ  ಬನ್ನೂರಮಠ ನಿವೇಶನ ಪಡೆಯಬಹುದು. ಎಂದು ನ್ಯಾಯಾಲಯ ಹೇಳಿತ್ತು. ಆದರೆ ಉದ್ಯಾನವನಕ್ಕಾಗಿ ಮೀಸಲಾಗಿಟ್ಟ ನಿವೇಶನವನ್ನು ನ್ಯಾಯಮೂರ್ತಿ ಬನ್ನೂರ ಮಠ ಪಡೆದಿರುವುದು ಈಗ ವಿವಾದಕ್ಕೆ ಕಾರಣವಾಗಿದೆನೀ ಕುರಿತು ಈಗಾಗಲೇ ಸರಕಾರಕ್ಕೆ ಹಾಗೂ ರಾಜ್ಯ ಪಾಲರಿಗೆ ದೂರು ನೀಡಲಾಗಿದೆ ಎಂದು ಹೇಳಲಾಗಿದೆ.

ನ್ಯಾಯಮೂರ್ತಿ ಶಿವರಾಜ ಪಾಟೀಲ ನೇಮಕದಲ್ಲಿ ಕೈ ಸುಟ್ಟುಕೊಂಡಿರುವ ಸರಕಾರ ಮತ್ತೆ ಅದೇ ರೀತಿಯ ತಪ್ಪು ಆಗದ ಹಾಗೆ  ಎಚ್ರಿಕೆಯ  ಹೆಜ್ಜೆಗಳನ್ನು  ಇಡಬೇಕಾಗಿದೆ. ನೇಮಕವಾಗುವ ಮೊದಲೇ ಈ ಪ್ರಕರಣ ಬೆಳಕಿ ಬಂದಿರುವುದರಿಂದ  ನ್ಯಾಯಮೂರ್ತಿ  ಬನ್ನೂರ ಮಠ ಅವರು ನೇಮಕದ ಕುರಿತು ಸರಕಾರ  ಯಾವ ರೀತಿಯ  ಹೆಜ್ಜೆಗಳನ್ನು  ಇಡುತ್ತದೆ ಎಂಬುದನ್ನು ಈಗ ಕಾಯ್ದು ನೋಡಬೇಕಾಗಿದೆ.

ಈ ಎಲ್ಲ ಬೆಳವಣಿಗೆಗಳನ್ನು ನೋಡಿದಾಗ  ಜನರಿಗೆ  ನ್ಯಾಯ ದಾನ ನೀಡಬೇಕಾದ ನ್ಯಾಯಮೂರ್ತಿಗಳು ತಾವೇ  ಕಾನೂನನ್ನು ಗಾಳಿಗೆ ಯಾವ ರೀತಿ ತೂರಿದ್ದಾರೆ ಎಂಬ ಸತ್ಯ ಗೊತ್ತಾಗುತ್ತದೆ. ನ್ಯಾಯಮೂರ್ತಿಗಳು ಜನರಿಗೆ ಕಾನೂನು ಪಾಠ ಹೇಳುವ ಗುರುತರವಾದ ಜವಾಬ್ದಾರಿಯನ್ನು ನನಿರ್ವಹಿಸಬೇಕಾಗುತ್ತದೆ. ಆದರೆ ಅವರೇ ತಮ್ಮ ಸ್ವಂತ ಬದುಕಿನಲ್ಲಿಕಾನೂನು ಪಾಲಿಸದೇ ಹೋದರೆ ಬೇರೆಯವರಿಗೆ ಕಾನೂನು ಃಏಲುವ ನೈತಿಕತೆ ಅವರಿಗೆ ಃಏಗೆ ಬರುತ್ತದೆ ಎಂಬುದು ಪ್ರಶ್ನೆಯಾಗಿ ಜನರನ್ನು ಕಾಡತೊಡಗಿದೆ. ಇದನ್ನು ನೋಡಿದರೆ ನ್ಯಾಯಾಂಗ ಸಹ ಹಾದಿ ತಪ್ಪಿದಂತೆ ಕಂಡು ಬರುತ್ತದೆ.

 

 

 

loading...

LEAVE A REPLY

Please enter your comment!
Please enter your name here