ಅರ್ಜಿ ವಜಾಗೊಳಿಸಿದ್ದು ಕನ್ನಡಿಗರಿಗೆ ಆಘಾತ ಉಂಟಾಗಿದೆ

0
70

30 Kagwad 1ಕಾಗವಾಡ 30: ಕಾಗವಾಡದ ರಾಣಿ ಚೆನ್ನಮ್ಮ ವೃತ್ತದಲ್ಲಿ ಅಥಣಿ ತಾಲೂಕಿನ ಮತ್ತು ಕಾಗವಾಡದ ಕರ್ನಾಟಕ ರಕ್ಷಣಾ ವೇದಿಕೆ ಇವರಿಂದ ಮಹಾದಾಯಿ ನದಿ ನೀರು ಹಂಚಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಈ ಕುರಿತು ಶನಿವಾರ ಬೆಳಿಗ್ಗೆ ಉಗ್ರವಾಗಿ ರಸ್ತೆ ತಡೆ ಮಾಡಿ ಪ್ರತಿಭಟನೆ ಕೈಗೊಂಡರು.
ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷರಾದ ಬಸಗೌಡ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡರು. ಕಾಗವಾಡ ಉಪತಹಸ್ಸಿಲ್ದಾರ ವಿಜಯ ಚೌಗಲೆ, ಪಿಎಸ್‍ಐ ಎಚ್.ಎಲ್ ಧರ್ಮಟ್ಟಿ ಮನವಿ ಅರ್ಪಿಸಿದರು.
ಕಳಸಾ ಬಂಡೂರಿ ನ್ಯಾಯಾಧೀಕರಣ ಪೀಠ ರಾಜ್ಯದ ಅರ್ಜಿಯನ್ನು ವಜಾಗೊಳಿಸಿದ್ದು, ಕನ್ನಡಿಗರಿಗೆ ಆಘಾತ ಉಂಟು ಮಾಡಿದೆ. ಕಳೆದ 40 ವರ್ಷಗಳಿಂದ ಹೋರಾಟ ನಡೆಸಿದ್ದು, ನೀರಾವರಿ ಯೋಜನೆಯಲ್ಲಿ ಸದಾ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ರಾಜ್ಯದ ಸಂಸದರು, ಸಚಿವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ನಿಷ್ಕಾಳಜಿ ವಹಿಸುತ್ತಿದ್ದಾರೆ ಎಂದು ಹೇಳಿ ಪ್ರತಿಭಟಿಸಿದರು. ರಾಜ್ಯದ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಧಾನಿ ಮೋದಿಯವರ ಮೇಲೆ ಒತ್ತಡ ಹೇರಲು ಮುಂದಾಗಬೇಕು ಎಂದು ಮನವಿಯಲ್ಲಿ ನಮೂದಿಸಿ ಅರ್ಪಿಸಿದರು.
ರಸ್ತೆ ತಡೆಗಟ್ಟಿ ಟಾಯರ್‍ಗಳನ್ನು ಸುಟ್ಟು ಹಾಕಿ ನಡೆಸಿದ ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸಿದ್ದು ವಡೇಯರ್, ಸಚೀನ ಚೌಗಲೆ, ಬಾಬು ಪಾಟೀಲ, ಪ್ರಕಾಶ ಪಾಟೀಲ, ವಿನಾಯಕ ಚೌಗಲೆ, ರಾಮಗೌಡ ಪಾಟೀಲ, ಉಮೇಶ ಪಾಟೀಲ, ಉಮೇಶ ತೇಲಿ, ಜ್ಯೋತಿಕುಮಾರ ಪಾಟೀಲ, ಸುಧಾಕರ ನಾಂದನಿ, ಉಮೇಶ ಬರಮಾದೆ, ಕಲ್ಲಗೌಡ ಪೀರಗೌಡರ, ಪ್ರಶಾಂತ ಪೂಜಾರಿ, ಸದಾಶೀವ ಸಾತಗೋನವರ, ಮಹೇಶ ವೇದಗೇರಿ, ಪ್ರಶಾಂತ ಪೂಜಾರಿ, ಅನೀಲ ಬಿರಾದಾರ, ಪರಸು ಪಾಟೀಲ, ಸುರೇಶ ಕೋರೆ, ಪಿಂಟು ಖನಾಯಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಪೊಲೀಸ್‍ರು ಬಿಗಿ ಬಂದೂಬಸ್ತ ನೀಡಿದರು.

loading...

LEAVE A REPLY

Please enter your comment!
Please enter your name here