ಹಸಿರಿದ್ದರೆ ಉಸಿರು: ಬಾಲಕೃಷ್ಣ

0
26

ದಾಂಡೇಲಿ : ನಗರದ ಬಂಗೂರನಗರ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಎಸಿ.ಎಫ್ ಬಾಲಕೃಷ್ಣ ಅವರು ಹಸಿರಿದ್ದರೆ ಉಸಿರು. ಭೂಮಂಡಳದ ಎಲ್ಲಾ ಜೀವರಾಶಿಗಳು ಪರಿಸರವನ್ನೆ ಅವಲಂಭಿಸಿ ಬದುಕು ನಡೆಸುತ್ತವೆ. ಪರಿಸರವನ್ನೆ ಅವಲಂಭಿಸಿಕೊಂಡು ಬದುಕು ಸವೆಸುವ ನಾವು ಪರಿಸರ ಸಂರಕ್ಷಕರಾಗಬೇಕೆ ಹೊರತು ಪರಿಸರ ಭಕ್ಷಕರಾಗಬಾರದು. ಭವಿಷ್ಯದ ಉನ್ನತಿಗಾಗಿ ಈಗಿಂದಲೇ ಪರಿಸರ ಸಂರಕ್ಷಣೆಯನ್ನು ಮೊದಲ ಗುರಿಯಾಗಿಸಿಕೊಳ್ಳುವುದು ಅತ್ಯಗತ್ಯ ಎಂದರು.
ಇನ್ನೋರ್ವ ಅತಿಥಿ ಆರ್.ಎಫ್.ಒ ಬಸವರಾಜ ಬೋಚಳ್ಳಿಯವರು ಮಾತನಾಡಿ ವಿಧ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಜಾಗೃತಶಕ್ತಿಗಳಾಗಬೇಕೆಂದು ಕರೆ ನೀಡಿದರು. ದಾಂಡೇಲಿ ಶಿಕ್ಷಣ ಸಂಸ್ಥೆಯ ಸಂಯೋಜಕ ಕೆ.ಜಿ.ಗಿರಿರಾಜ ಅವರು ಪರಿಸರವಿದ್ದರೆ ನಾವು. ನಮಗಾಗಿ, ನಮ್ಮ ಬದುಕಿಗಾಗಿ ಪರಿಸರ ಸಂರಕ್ಷಿಸಬೇಕೆಂದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯೆ ಡಾ: ಶೋಭಾ ಶರ್ಮಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿ ಡಾ.ಬಿ.ಎಲ್.ಗುಂಡೂರ, ಉಪನ್ಯಾಸಕರುಗಳಾದ ಎಸ್.ಎಸ್.ಕುಲಕರ್ಣಿ, ಡಾ.ಪಿ.ಎ.ಹೊಸಮನಿ, ಡಾ:ಎಚ್.ವೈ.ಮೆರವಾಡೆ, ನಯನಾ ರೇವಣಕರ, ಎಸ್.ಎಸ್.ಹಿರೇಮಠ, ಎಸ್.ವಿನಯ್, ಎಸ್.ಕೆ.ಬಾಗೇವಾಡಿ ಹಾಗೂ ಸಿಬ್ಬಂದಿ ವರ್ಗ ಅಲ್ಲದೆ ಎನ್.ಎಸ್.ಎಸ್.ಸ್ವಯಂ ಸೇವಕ/ಸೇವಕಿಯರು ಹಾಗೂ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿ/ನಿಯರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here