ಅಮಾಯಕರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

0
39

ಬೆಳಗಾವಿ 02: ಕಳಸಾ ಬಂಡೂರಿ ನದಿ ನೀರಿಗಾಗಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದ್ದ ರೈತರ,ಅಮಾಯಕ ಮಹಿಳೆಯರ ಮತ್ತು ವೃದ್ಧರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯವನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಮಹಾನಗರ ಜಿಲ್ಲಾ ಘಟಕದ ಸದಸ್ಯರು ಮಂಗಳವಾರ ಕಪ್ಪು ಭಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಜಯಶ್ರೀ ಪಾಟೀಲ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ದೇಶಕ್ಕೆ ಅನ್ನ ನೀಡುವ ರೈತರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯದ ಹಿಂದೆ ಸರಕಾರದ ಕೈವಾಡವಿರುವುದಾಗಿ ಸರಕಾರದ ಕ್ರಮವನ್ನು ಖಂಡಿಸಿದರು.
ಯಮನೂರ, ಬೆಳಗಲ್, ನವಲಗುಂದ, ನರಗುಂದಗಳಲ್ಲಿ ಪೋಲಿಸರು ಮನೆಯ ಒಳಗೆ ಹೋಗಿ ಮಹಿಳೆಯರನ್ನು ಮತ್ತು ವೃದ್ಧರನ್ನು, ವಿದ್ಯಾರ್ಥಿಗಳನ್ನು ಹೊರಗೆ ಎಳೆದು ತಂದು ಮನ ಬಂದಂತೆ ತಳಿಸಿದ ಕ್ರಮ ಖಂಡನೀಯ. ಪೊಲೀಸರು ದೌರ್ಜನ್ಯವೆಸಗಿದ ಗ್ರಾಮಗಳಲ್ಲಿ ಸ್ಮಶಾನ ಸದೃಶ್ಯ ವಾತಾವರಣವಿದ್ದು, ಗಂಡಸರೆಲ್ಲ ಗ್ರಾಮ ತೋರಿದಿದ್ದು ಮಕ್ಕಳು, ಮಹಿಳೆಯರು ಭಯದ ವಾತಾವರಣದಲ್ಲಿ ಬಳಲುತ್ತಿದ್ದಾರೆ.
ಈ ಹೇಯ ಕೃತ್ಯವನ್ನು ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಉಗ್ರವಾಗಿ ಖಂಡಿಸುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಅಮಾಯಕರ ಮೇಲೆ ದೌರ್ಜನ್ಯವೆಸಗಿದ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಬಂದಿತ ರೈತರನ್ನು ಶೀಘ್ರವಾಗಿ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೇ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಶಿಫಾಲಿ ಮೋರೆ, ಸಾರಿಕಾ ಪಾಟೀಲ, ಮಯೂರಿ ಪಾಟೀಲ, ಭಾರತಿ ಕಡೆಮನಿ, ಲಕ್ಷ್ಮೀ ಪಾಚೂಳಕರ, ಸುವರ್ಣ ಪಾಟೀಲ, ದೀಪಾ ಕುಡಚಿ, ಸ್ನೇಹಲ ಕಾಳೆ, ಆರತಿ ಪಟ್ಟೋಳೆ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here