ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ

0
26

ಬೆಳಗಾವಿ 03: ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಚಿಕ್ಕೋಡಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗಾಗಿ ಲಘು ಮೋಟಾರು ವಾಹನ ಹಾಗೂ ಭಾರೀ ಸರಕು ವಾಹನ ಚಾಲನಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
8ನೇ ತರಗತಿ ಅಥವಾ ಎಸ್ಸೆಸ್ಸೆಲ್ಸಿ ಪಾಸಾದ ನಿರುದ್ಯೋಗಿ ಯುವಕ/ಯುವತಿಯರು ಅರ್ಜಿ ಸಲ್ಲಿಸಬಹುದು. ತರಬೇತಿ ವೆಚ್ಚದಲ್ಲಿ ಸರ್ಕಾರ ಶೇ.75 ಸಹಾಯಧನ ನೀಡಲಿದ್ದು, ಉಳಿದ ಶೇ.25 ವೆಚ್ಚವನ್ನು ವಿದ್ಯಾರ್ಥಿಗಳು ಭರಿಸಬಹುದು.
ಅರ್ಜಿ ಸಲ್ಲಿಸಲು ಆಗಸ್ಟ್ 17 ಕಡೆಯ ದಿನವಾಗಿದೆ. ಅರ್ಜಿ ನಮೂನೆಗಳನ್ನು ಚಿಕ್ಕೋಡಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಆಗಸ್ಟ್ 10ರೊಳಗೆ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಪ್ರಾದೇಶಿಕ ಸಆರಿಗೆ ಕಚೇರಿಯನ್ನೂ ಸಂಪರ್ಕಿಸಬಹುದು ಎಂದು ಚಿಕ್ಕೋಡಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here