ದಲಿತರು ಬಡತನದ ವಿರುದ್ಧ ಹೋರಾಟಕ್ಕಿಳಿಯಬೇಕಿದೆ

0
49

ಬೆಳಗಾವಿ:28 ದಲಿತರು ಸಮಾಜದಲ್ಲಿ ದರಿದ್ರತನ ಹಾಗೂ ಬಡತನದ ವಿರುದ್ಧ ಹೋರಾಟ ನಡೆಸಬೇಕಿದೆ. ಕೇಂದ್ರ ಸರಕಾರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಇಂದಿಲ್ಲಿ ಕರೆ ನೀಡಿದರು.
ಅವರು ರವಿವಾರ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿಯ ಸಂವಿಧಾನಾತ್ಮಕ ಸವಲತ್ತುಗಳ ಅನುಷ್ಠಾನ ಮತ್ತು ರಕ್ಷಣಾ ಪರಿಷತ್ ಮತ್ತು ಕಣಬರ್ಗಿ ಇಂಡಸ್ಟ್ರಿಯಲ ಏರಿಯಾ ಅಸೋಸಿಯೇಷನ, ಎಸ್‍ಸಿ ಎಸ್‍ಟಿ ಸಮುದಾಯಗಳಿಗೆ ಕೇಂದ್ರ ಸರಕಾರವು ಜಾರಿಗೆ ತಂದಿರುವ ಯೋಜನೆಗಳ ತಿಳುವಳಿಕೆ ಹಾಗೂ ಅನುಷ್ಠಾನಗೊಳಿಸಲು ಜಾಗೃತಿ ಸಮಾವೇಶದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಲಿತರ ಸಮಾಜದ ಜನರು ಒಗ್ಗಟ್ಟಾಗಿರಬೇಕು. ಮನಷ್ಯನಿಗೆ ಛಲವೊಂದಿದ್ದರೇ ಏನು ಬೇಕಾದರೂ ಸಾಧಿಸಬಹುದು. ಛಲ ಇಲ್ಲದಿದ್ದರೇ ಏನು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ದಲಿತರು ಉದ್ಯೋಗದ ಮೇಲೆ ಅವಲಂಭಿತರಾಗದೆ. ಸ್ವಂತ ಉದ್ಯೋಗ ಸೃಷ್ಠಿ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ದಲಿತ ಬಾಂಧವರಿಗೆ ಈ ಹಿಂದಿನ ಸರಕಾರಗಳು ಕೇವಲ ಕುರಿ, ಕೋಳಿ, ಕೋಣಗಳನ್ನು ಕೊಟ್ಟು ಅವರಿಗೆ ಸೋಮಾರಿಗಳನ್ನಾಗಿ ಮಾಡಿವೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಅವರು ಹೇಳಿದ್ದಂತೆ ಎಲ್ಲರೂ ಸುರಕ್ಷಿತರಾಗಿರಬೇಕು ಎಂದು ಅವರು ಹೇಳಿದರು.
ಹೋರಾಟ ಮಾಡುವುದು ಎಂದರೇ ಅದಕ್ಕೆ ಯಶಸು ಸಿಗಬೇಕು. ನಮ್ಮ ದರಿದ್ರತೆ, ಬಡತನದ ವಿರುದ್ಧ ಹೋರಾಟ ನಡೆಸಬೇಕಿದೆ. ನಮ್ಮ ಹಕ್ಕುಗಳಿಗಾಗಿ ನಾವು ಬೀದಿಗಿಳಿದು ಹೋರಾಟ ಮಾಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಹೊಲೆಯ, ಮಾದಿಗ ಎಂಬ ಭಾವನೆಯನ್ನು ಹೋಗಲಾಡಿಸಬೇಕು ದಲಿತರು ಎಂಬ ಮನೋಭಾವ ಎಲ್ಲರಲ್ಲಿಯೂ ಮೂಡಬೇಕೆಂದು ಅವರು ಕರೆ ನೀಡಿದರು.
ಇಂದು ಅಲ್ಪಸಂಖ್ಯಾತರೂ ಸರಕಾರದಿಂದ ಬಂದಂತಹ ಎಲ್ಲ ಯೋಜನೆಗಳನ್ನು ಸದಪಯೋಗ ಪಡೆಸಿಕೊಳ್ಳುತಿದ್ದಾರೆ. ಅದೇ ರೀತಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರು ಸರಕಾರ ಜಾರಿಗೆ ತಂದ ಯೋಜನೆಗಳನ್ನು ಸದಪಯೋಗ ಪಡೆಸಿಕೊಳ್ಳಲು ಮುಂದಾಗಬೇಕು. ಇಂದಿನ ಸಮಾಜದ ಜತೆಗೆ ನಾವು ಕೂಡಾ ಬದಲಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಕಂಡ ಕನಸು ನನಸು ಮಾಡಲು ನಮ್ಮ ಜನರು ಸಿದ್ದವಾಗಬೇಕು ಎಂದರು.
ಸಮಾಜದಲ್ಲಿ ಇಂಥ ಕಾರ್ಯಕ್ರಗಳು ನಡೆಯುವದರಿಂದ ನಮ್ಮ ಜನರಿಗೆ ದಾರಿದೀಪಗಳಾಗಿವೆ. ನಮ್ಮ ಹಕ್ಕಗಳಿಗಾಗಿ ಡಾ.ಬಾಬಾಸಾಹೇಬ್ ಅಂಬೇಡ್ಕರ ಸಾಕಷ್ಟು ಹೋರಾಟ ಮಾಡಿದ್ದಾರೆ. ಆದರೆ ಇಂದು ನಮ್ಮ ಜನ ಒಳ್ಳೆಯ ಹೋರಾಟ ಮಾಡುವ ಬದಲು ಉಪಯೋಗಕ್ಕೆ ಬಾರದ ವಿಷಯಗಳಿಗೆ ಹೆಚ್ಚು ತೆಲೆ ಕೆಡೆಸಿಕೊಳ್ಳಲಾಗುತ್ತಿರುವುದು ವಿಷಾದಕರವಾಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಜತೆಗೆ ನಾವು ಕೂಡಾ ಬದಲಾಗಿ ಸರಕಾರದ ಒಳ್ಳೆಯ ಉದ್ದೇಶಗಳನ್ನು ಸದುಪಯೋಗ ಪಡೆಸಿಕೊಂಡು ಎಲ್ಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರು ಸಜ್ಜಾಗಬೇಕು ಎಂದರು. ಸಾಮಾಜಿಕ ಕಾರ್ಯಕರ್ತ ಅರುಣ ಕುಮಾರ ಮಾತನಾಡಿ, 21ನೇ ಶತಮಾನದಲ್ಲಿ ಸಮಾಜ ಸುಧಾರಣೆಯ ಮಾರ್ಗದಲ್ಲಿ ಸಾಗುತ್ತಿರುವ ಪ್ರಧಾನಿ ಮೋದಿ, ಯುವಕರಿಗೆ ಉದ್ಯೋಗ ಸೃಷ್ಟಿಸಲು ಹೊಸ ಯೋಜನೆಗಳನ್ನು ಜಾರಿಗೊಳಿಸಿ ಯುವಕರನ್ನು ಉದ್ಯಮಿಶೀಲರನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ಯುವಕರು ಬೇರಿ ಸಮುದಾಯದ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟು ಉದ್ಯಮಿಯಾಗುವ ನಿಟ್ಟಿನಲ್ಲಿ ಪ್ರಯತ್ನಶೀಲರಾಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಮಾಜಿ ಸಚಿವ ಶಶಿಕಾಂತ ನಾಯಕ, ಸಂಸದ ಸುರೇಶ ಅಂಗಡಿ, ಶಾಸಕ ಸಂಜಯ ಪಾಟೀಲ, ಮಾಜಿ ಶಾಸಕ ಅಭಯ ಪಾಟೀಲ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಅನಿಲ ಬೆನಕೆ, ಸಂಘದ ಅಧ್ಯಕ್ಷ ಸುರೇಶ ಯಾದವ್ ,ದಲಿತ ಸಂಘಟನೆಗಳ ಒಕ್ಕೂಟ ಜಿಲ್ಲಾಧ್ಯಕ್ಷ ಸುರೇಶ ತಳವಾರ,ಕೆ. ಪಳನಿವೇಲು, ಜಗದೀಶ ಹಿರೇಮನಿ, ರಾಜೇಂದ್ರ ಪವಾರ, ಮುಕ್ತಾರ್‍ಹುಸೇನ್ ಪಠಾಣ ಮತ್ತೀತರ ಗಣ್ಯರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here