ಹೆಸರು ಬೆಳೆ ಖರೀದಿ ಕೇಂದ್ರಕ್ಕೆ ಮನವಿ

0
73

ಬೆಳಗಾವಿ 30: ರೈತರು ಬೆಳೆದ ಹೆಸರಿನ ಬೆಳೆಯನ್ನು ಖರೀದಿಸಲು ರಾಮದುರ್ಗ ತಾಲೂಕಿನಲ್ಲಿ ಖರೀದಿ ಕೇಂದ್ರವನ್ನು ತೆರೆಯುವಂತೆ ಆಗ್ರಹಿಸಿ ಹುಲಕುಂದ ಜಿಲ್ಲಾ ಪಂಚಾಯತ ಸದಸ್ಯ ರಮೇಶ ದೇಶಪಾಂಡೆ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಕಳೆದ 3-4 ವರ್ಷಗಳಿಂದ ರಾಮದುರ್ಗ ತಾಲೂಕು ಬರಗಾಲಿಗೆ ಸಿಕ್ಕು ರೈತರು ತತ್ತರಿಸಿದ್ದಾರೆ. ನಂಜುಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ತಾಲೂಕಿನಲ್ಲಿ ಹೆಸರಿನ ಬೆಳೆ ಬಹಳಷ್ಟು ಬಂದಿದೆ. ಹೆಸರಿನ ಬೆಲೆ ಕುಸಿದಿರುವುದರಿಂದ ರೈತ ಸಮೂಹ ಕಂಗಾಲಾಗಿದ್ದಾರೆ. ರೈತರನ್ನು ಮೇಲೆತ್ತಲು ರಾಜ್ಯ ಸರಕಾರ ನೀಡುವ ಬೆಂಬಲ ಬೆಲೆ ಹಾಗೂ ಕೇಂದ್ರ ಸರಕಾರ ನೀಡುವ ಪರಿಹಾರ ಎರಡು ದೊರೆಯಲೂ ಸರಕಾರದಿಂದ ರಾಮದುರ್ಗ ತಾಲೂಕಿನಲ್ಲಿ ರೈತರಿಗೆ ಸಹಾಯ ಮಾಡುವ ದೃಷ್ಟಿಯಿಂದ ಹೆಸರಿನ ಬೆಳೆ ಖರೀದಿ ಕೇಂದ್ರವನ್ನು ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸದಸ್ಯ ರಮೇಶ ದೇಶಪಾಂಡೆ. ಈ ಕೂಡಲೆ ಖರೀದಿ ಕೇಂದ್ರ ತೆರೆದು ಬರ ಹಾಗೂ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ಆಧಾರವಾಗಬೇಕು. ಆತನ ಪರಿಸ್ಥಿತಿ ಸುಧಾರಣೆಗೊಳಿಸಲು ಖರೀದಿ ಕೇಂದ್ರ ತೆರೆಯಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

loading...

LEAVE A REPLY

Please enter your comment!
Please enter your name here