ಗಣೇಶ ಉತ್ಸವ : ವಿಶೇಷ ದಂಡಾಧಿಕಾರಿ ನೇಮಕ

0
32

ವಿಜಯಪುರ 03: ಗಣೇಶ ಉತ್ಸವವನ್ನು ಸೌಹಾರ್ದಯುತವಾಗಿ ಆಚರಿಸುವ ನಿಟ್ಟಿನಲ್ಲಿ ಶಾಂತಿ ಸುವ್ಯವಸ್ಥೆಯ ಮುನ್ನೆಚ್ಚರಿಕೆ ಕ್ರಮವಾಗಿ ಕಾನೂನು ಸುವ್ಯವಸ್ಥೆ ಮೇಲೆ ನಿಗಾ ಇಡಲು ವಿಶೇಷ ದಂಡಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ.ಬಿ.ಶಿವಕುಮಾರ ಆದೇಶ ಹೊರಡಿಸಿದ್ದಾರೆ.
ಗಣೇಶ ಪ್ರತಿಷ್ಠಾಪನೆಯ ಸೆ.5ರ ಬೆಳಿಗ್ಗೆ 6 ರಿಂದ ಹಾಗೂ ಗಣೇಶ ವಿಸರ್ಜನೆಯ ಸೆ.15ರ ಬೆಳಿಗ್ಗೆ6 ರವರೆಗೆ ಜಿಲ್ಲೆಯ ಐದೂ ತಾಲೂಕುಗಳಲ್ಲಿ ವಿಶೇಷ ದಂಡಾಧಿಕಾರಿಗಳನ್ನು ನೇಮಕ ಮಾಡಿದ್ದು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು, ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳನ್ನು ವಿಜಯಪುರ ತಾಲೂಕಿಗೆ ಹಾಗೂ ಬಸವನಬಾಗೇವಾಡಿ, ಮುದ್ದೇಬಿಹಾಳ, ಇಂಡಿ ಮತ್ತು ಸಿಂದಗಿ ತಾಲೂಕಿಗೆ ಆಯಾ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ವಿಶೇಷ ದಂಡಾಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಹಾಡು ನಿಷೇಧ : ಗಣೇಶ ಉತ್ಸವ ಕಾಲಕ್ಕೆ ಸೆ.5 ರಿಂದ 15 ರವರೆಗೆ ವಿವಿಧ ಗಣೇಶ ಪ್ರತಿಷ್ಠಾನ ಮಂಡಳಿಗಳೂ ನಡೆಸುವ ಸಾಂಸ್ಕøತಿಕ ಮತ್ತು ಮನರಂಜನೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಮನರಂಜನೆ ಕಾರ್ಯಕ್ರಮ ಹಾಗೂ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ “ಅಗರ ಛೂಆ ಮಂದಿರ ತೋ ಬತಾಯೇಂಗೆ” ಹಿಂದಿ ಭಾಷೆಯ ಹಾಡನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

loading...

LEAVE A REPLY

Please enter your comment!
Please enter your name here