ಸೆ.21 ರಿಂದ 22ರ ವರೆಗೆÀ ನಡೆಯುವ ರಾಜ್ಯ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ

0
36

ಕನ್ನಡಮ್ಮ ಸುದ್ದಿ- ಕಾರವಾರ : ನಗರದ ಮಾಲೇದೇವಿ ಕ್ರೀಡಾಂಗಣದಲ್ಲಿ ಸೆ.21 ಹಾಗೂ22ರಂದು ರಾಜ್ಯ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೆ. ಟಿ. ಭಟ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ. ಪೂ. ಶಿಕ್ಷಣ ಇಲಾಖೆ, ಸಿದ್ದರದ ಮಲ್ಲಿಕಾರ್ಜುನ ಪ. ಪೂ. ಕಾಲೇಜು, ಜಿಲ್ಲಾ ಪಪೂ ಕಾಲೇಜುಗಳ ಬೋಧಕರ ಹಾಗೂ ಬೋಧಕೇತರ ಸಿಬ್ಬಂದಿಗಳ ಸಂಘಗಳ ಸಹಕಾರದೊಂದಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.
ವಿವಿಧ ಜಿಲ್ಲೆಯ 96 ಪದವಿ ಪೂರ್ವ ಪಿಯುಸಿ ಕಾಲೇಜುಗಳ ಬಾಲಕರ 30 ಹಾಗೂ ಬಾಲಕಿಯರ 30 ತಂಡಗಳೂ ಸೇರಿ ಒಟ್ಟು 60 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು ಒಟ್ಟೂ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಕ್ರೀಡಾಕೂಟದಲ್ಲಿ ರಾಜ್ಯ ಬೆಂಗಳೂರು, ಕೊಪ್ಪಳ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ನುರಿತ ದೈಹಿಕ ಶಿಕ್ಷಕರು ನಿರ್ಣಾಯಕರಾಗಿ ಆಗಮಿಸಲಿದ್ದಾರೆ ಎಂದರು.
ನಗರದ ದೈವಜ್ಞ ಕಲ್ಯಾಣ ಮಂಟಪ ಹಾಗೂ ಯುನಿಟಿ ಹೈಸ್ಕೂಲ್ ಕಟ್ಟಡದಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಲಾಗಿದೆ. ಸರಕಾರದಿಂದ ಕ್ರೀಡಾಕೂಟ ಆಯೋಜನೆಗೆ ಸುಮಾರು 50 ಸಾವಿರ ರೂ ಅನುದಾನ ಲಭಿಸಿದೆ. ಆದರೆ ಕ್ರೀಡಾಕೂಟ ನಡೆಸಲು ಸುಮಾರು ಎರಡುವರೆ ಲಕ್ಷ ರೂ. ಖರ್ಚು ವೆಚ್ಚವಾಗಲಿದ್ದು ಬಾಕಿ ಮೊತ್ತವನ್ನು ಶಿಕ್ಷಕರು ಹಾಗೂ ಬೋಧಕೇತರ ನೌಕರರ ಸಂಘದಿಂದಲೇ ಭÀರಿಸಲು ನಿರ್ಧರಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿದ್ದರ ಮಲ್ಲಿಕಾರ್ಜುನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ. ಪಿ. ನಾಯಕ, ಉಪನ್ಯಾಸಕ ಜಿ. ಡಿ. ಮನೋಜ್, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸತೀಶ ನಾಯ್ಕ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here