ರಾಜ್ಯದ ಕೋರ್ಟಗಳಲ್ಲಿ ನ್ಯಾಯಾಧೀಶರ ಕೊರತೆ ಹೆಚ್ಚಿದೆ: ಕಾನೂನು ಸಚಿವ ಜಯಚಂದ್ರ

0
33

ಕನ್ನಡಮ್ಮ ಸುದ್ದಿ
ಬೆಳಗಾವಿ:19 ರಾಜ್ಯದ ಕೋರ್ಟಗಳಲ್ಲಿ ನ್ಯಾಯಾಧೀಶರ ಕೊರತೆಯಿಂದಾಗಿ ಇತ್ಯರ್ಥವಾಗಬೇಕಿದ್ದ ಒಟ್ಟು 13 ಲಕ್ಷ ಪ್ರಕರಣಗಳು ಬಾಕಿ ಉಳಿದುಕೊಂಡಿವೆ ಅದರಲ್ಲೂ ಬೆಳಗಾವಿ ಹಾಗೂ ಧಾರವಾಡ ನ್ಯಾಯಾಲಗಳಲ್ಲಿ ಹೆಚ್ಚು ಪ್ರಕರಣಗಳು ಇತ್ಯರ್ಥವಾಗದೆ ಹಾಗೆ ಉಳಿದುಕೊಂಡಿವೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಇಂದಿಲ್ಲಿ ಹೇಳಿದರು.
ಅವರು ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಕರೆಯಲಾದ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ನ್ಯಾಯಾಧೀಶರ ಕೊರತೆಯಿದೆ. ಹೈಕೋರ್ಟನಲ್ಲಿ ಒಟ್ಟು 67 ನ್ಯಾಯಾಧೀಶರ ಹುದ್ದೆಗಳು ಖಾಲಿಯಿದ್ದು 32 ಜನ ಮಾತ್ರ ಉಳಿದುಕೊಂಡಿದ್ದಾರೆ. ಒಟ್ಟಾರೆ ರಾಜ್ಯದ ಕೋರ್ಟುಗಳಲ್ಲಿ ಸುಮಾರು 50 ಪ್ರತಿಶತ ನ್ಯಾಯಾಧೀಶರ ಹುದ್ದೆಗಳು ಖಾಲಿ ಇರುವುದರಿಂದ ಸರಿಯಾದ ಸಮಯದಲ್ಲಿ ಇತ್ಯರ್ಥವಾಗಬೇಕಿದ್ದ ಪ್ರಕರಣಗಳು ವಿಳಂಭವಾಗುತ್ತಿದೆ ಎಂದು ಅವರು ಕಳವಳವ್ಯಕ್ತಪಡಿಸಿದರು.
ಅಲ್ಲದೆ ಬೆಳಗಾವಿ ಜಿಲ್ಲೆಗೆ ಕೆಎಟಿ ನೀಡಿರುವುದರಿಂದ ಎರಡು ಸ್ಥಳಗಳನ್ನು ಪರಿಶೀಲಿಸಿದೆ ಕೆಎಟಿ ಪ್ರಾರಂಭಿಸಲು ಇಬ್ಬರು ನ್ಯಾಯಾಧೀಶರನ್ನು ನೀಡಬೇಕಾಗುತ್ತದೆ. ಆದರೆ ಸುಪ್ರೀಂ ಕೋರ್ಟನಿಂದ ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆ ನಡೆದು ನೇಮಕವಾದ ನ್ಯಾಯಾಧೀಶರು ಕಾರ್ಯನಿರ್ವಹಿಸಲು ಇನ್ನೂ ಎರಡು ವರ್ಷಗಳ ಸಮಯಾವಕಾಶಬೇಕಾಗುತ್ತದೆ. ರಾಜ್ಯದಲ್ಲಿ ಒಟ್ಟು 147 ನ್ಯಾಯಾಧೀಶರ ಹುದ್ದೆ ಕರೆಯಲಾದ ಸಂದರ್ಭದಲ್ಲಿ ಪಾಸಾಗಿ ಬಂದ ಅಭ್ಯರ್ಥಿಗಳು 170 ಜನ ಬಂದಿದ್ದಾರೆ. ಆದರೆ ಇದರಲ್ಲಿ ಎಷ್ಟು ಜನ ಆಯ್ಕೆಯಾಗುತ್ತಾರೆ ಎಂಬುದು ಮಾತ್ರ ಹೇಳಲು ಸಾಧ್ಯವಿಲ್ಲ ಎಂದರು.
ಹೈಕೋರ್ಟನಲ್ಲಿ 2 ವರ್ಷಗಳಿಂದ ನ್ಯಾಯಾಧೀಶರ ಹುದ್ದೆಯ ಆಯ್ಕೆಯಾಗಿಲ್ಲ. ಪುಲ್ಜಿಯಂ ಎಂಬ ಕಾಯ್ದೆಯನ್ನು ಪಾಸಮಾಡಿ ಕಾನೂನನ್ನು ಮಾಡಿ ಅದರಯಡಿಯಲ್ಲಿ ನ್ಯಾಯಾಧೀಶರ ಆಯ್ಕೆ ನಡೆಸಲಾಗುತ್ತಿದೆ. ರಾಜ್ಯ ಸರಕಾರ ಪುಲ್ಜಿಯಂ ಕಾಯ್ದೆಯಡಿ ನ್ಯಾಯಾಧೀಶರ ನೇಮಕ ಮಾಡುವಂತೆ ಕೇಂದ್ರ ಸರಕಾರ ಹಾಗೂ ಸುಪ್ರೀಂ ಕೋರ್ಟಗೆ ಪ್ರಸ್ತಾನೆ ಸಲ್ಲಿಸಲಾಗಿದೆ ಆದಷ್ಟು ಬೇಗ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿಮಾಡಬೇಕೆಂದು ವಿನಂತಿಸಿಕೊಳ್ಳಲಾಗಿದೆ ಎಂದು ಸಚಿವ ಜಯಚಂದ್ರ ಹೇಳಿದರು.

loading...

LEAVE A REPLY

Please enter your comment!
Please enter your name here