ದೇವರಾಜ ಅರಸರ ಚಿಂತನೆಯಿಂದ ವಿಧಾನಸಭೆಗೆ ಕಳೆ :ಸಚಿವ ಜಯಚಂದ್ರ

0
32

ಕನ್ನಡಮ್ಮ ಸುದ್ದಿ
ಬೆಳಗಾವಿ:19 ಇತ್ತೀಚಿನ ದಿನಮಾನಗಳಲ್ಲಿ ವಿಧಾನ ಸಭೆಯ ಮೌಲ್ಯಗಳು ಕಡಿಮೆಯಾಗುತ್ತಿದೆ. ದೇವರಾಜ ಅರಸು ಅವರ ಚಿಂತನೆ ಹಾಗೂ ವಿಚಾರ ಸಂಕೀರ್ಣಗಳ ಮೂಲಕ ಮೆಲಕು ಹಾಕಿದಾಗ ವಿಧಾನ ಸಭೆಗೆ ಒಂದು ಕಳೆ ಬರುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಾಹರಗಳ ಸಚಿವ ಟಿ.ಬಿ.ಜಯಚಂದ್ರ ಇಂದಿಲ್ಲಿ ಹೇಳಿದರು.
ಅವರು ಸೋಮವಾರ ಸುವರ್ಣ ವಿಧಾನ ಸೌಧದ ಸೆಂಟ್ರಲ್ ಹಾಲನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದೇವರಾಜು ಅರಸು ಜನ್ಮ ಶತಮಾನೋತ್ಸವ ಸಮಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಸಹಯೋಗದಲ್ಲಿ ನಡೆದ “ದೇವರಾಜು ಅರಸು ಚಿಂತನೆಗಳು ಮತ್ತು ಮಾಧ್ಯಮ ಎಂಬ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ, ದೇವರಾಜ ಅರಸು ಅವರು ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ನಡೆಯುತ್ತಿದ್ದ ಗಾಂಭೀರ ಚರ್ಚೆ ಹಾಗೂ ಅಧಿವೇಶನಗಳು ಇಂದು ನಡೆಯುತ್ತಿಲ್ಲ. ವಿಧಾನ ಸಭೆಯಲ್ಲಿ ದೇವೆಗೌಡರು ಹಾಗೂ ದೇವರಾಜು ಅರಸು ಅವರು ಚರ್ಚೆ ಮಾಡಲು ಪ್ರಾರಂಭಿಸಿದರೇ ರಾತ್ರಿಯವರೆಗೂ ಇರುತ್ತಿತ್ತು. ಆದರೆ ಸದ್ಯದ ಪರಿಸ್ಥಿಯಲ್ಲಿ ಸ್ಪೀಕರ್ ಗಳು ಸಂಪುಟ ಸಚಿವರನ್ನು ತರಾಟೆಗೆ ತೆಗೆದುಕೊಳ್ಳುವ ಪ್ರಸಂಗ ಎದುರಾಗಿರುವುದು ವಿಪರ್ಯಾಸದ ಸಂಗತಿ ಎಂದರು.
ಅರಸು ಅವರಿಗೆ ಮುಂದಾಲೋಚನೆ ಇಲ್ಲದೆ ಹೋಗಿದರೇ, ರಾಜ್ಯ ತನ್ನ ಪಾಲಿನ ನೀರಿನ ಹಕ್ಕನ್ನು ಕಳೆದುಕೊಳ್ಳುವ ಅಪಾಯವಿತ್ತು. ಕೆ.ಆರ್.ಎಸ್ ಜಲಾಶಯದ ನೀರು ಕೇವಲ ಮಂಡ್ಯ ಜಿಲ್ಲೆಗೆ ಹಾಗೂ ಹೇಮಾವತಿ ನೀರು ಕೇವಲ ಹಾಸನ ಜಿಲ್ಲೆಗೆ ಸಿಮಿತವಾಗಿದ್ದ ಸಮಯದಲ್ಲಿ ಕಾವೇರಿ ನೀರನ್ನು ಮೈಸೂರು ಜಿಲ್ಲೆಯ ಮೂಲೆ ಮೂಲೆಗಳಿಗೂ ಹಾಗೂ ಹೇಮಾವತಿ ನೀರನ್ನು ತುಮಕೂರು ಜಿಲ್ಲೆಯ ಮೂಲ ಮೂಲೆಗೂ ತಲುಪಿಸಿದ ಕೀರ್ತಿ ಅರಸರಿಗೆ ಸಲುತ್ತದೆ.
ಮಂಡ್ಯ ಜಿಲ್ಲೆಯಲ್ಲಿ ಬಾರಿ ಪತ್ರಿಭಟನೆ ನಡೆದರೂ ಅದನ್ನು ಲೆಕ್ಕಿಸಿದೆ ವರುಣ ನಾಲೆ ಮೂಲಕ ಮೈಸೂರು ಜಿಲ್ಲೆಗೆ ಕಾವೇರಿ ನೀರು ಹರಿಸಿದರು. ಅರಸರ ಮುಂದಾಲೋಚನೆಯಿಂದಾಗಿ ನಾವು ಕಾವೇರಿ ನ್ಯಾಯಾಧೀಕರಣದಲ್ಲಿ 18 ಲಕ್ಷ ಎಕ್ಟೆರ್ ಪ್ರದೇಶಕ್ಕೆ ನೀರು ಹರಿಸುವಂತ ತೀರ್ಪು ಬರಲು ಸಾಧ್ಯವಾಯಿತು. ಇಲ್ಲದೆ ಹೋಗಿದ್ದರೆ ನಮ್ಮ ಪಾಲಿನ ನೀರಿನ ಹಕ್ಕನ್ನು ಕಳೆದುಕೊಳ್ಳುವಂತ ಆಂತಕದ ಪರಿಸ್ಥಿತಿ ಇತ್ತು ಎಂದರು.
ಹಾವ, ಬಾವ, ನಡೆ ಎಲ್ಲವೂ ಮುಖ್ಯಮಂತ್ರಿ ಸ್ಥಾನಕ್ಕೆ ಹೇಳಿ ಮಾಡಿಸಿದಂತೆ ಇತ್ತು. ಆ ಮೈಕಟ್ಟು, ಮಾತುಕತೆ ಎಲ್ಲವೂ ಆ ಸ್ಥಾನಕ್ಕೆ ಅರ್ಹರು ಎಂಬ ಸಂಕೇತವನ್ನು ರವಾನೆ ಮಾಡಿತ್ತು, ಅರಸು ಮನೆತನದಲ್ಲಿ ಹುಟ್ಟಿದರೂ ಅರಮನೆ ಜೀವನ ಬಯಸದೆ ಜನರ ಜೊತೆ ಬೇರೆಯುವ ಜೀವನವನೇ ಇಷ್ಟಪಟ್ಟಿದರಿಂದ ಬಡವರ ಕಷ್ಟಗಳು ಅರ್ಥವಾಗಿ ಅವರನ್ನು ಮೇಲೆತ್ತುವ ಕಾರ್ಯಕ್ರಮಗಳನ್ನು ರೂಪಿಸಿ, ರಾಜ್ಯಕ್ಕೂ, ದೇಶಕ್ಕೂ ರೋಲ್ ಮಾಡಲ್ ಆಗಿದ್ದರು ಎಂದು ಸಚಿವ ಜಯಚಂದ್ರ ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಎಸ್.ಶಂಕರಪ್ಪ, ವಿಚಾರ ಸಂಕಿರಣದ ಸಂಚಾಲಕ ಮುತ್ತು ನಾಯ್ಕರ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಮ್ ಸಿದ್ದರಾಜು, ಬೆಳಗಾವಿ ವಾರ್ತಾ ಇಲಾಖೆಯ ಸಹಾಯಕ ಉಪ ನಿರ್ದೇಶಕ ಗುರುನಾಥ ಕಡಬೂರ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here