ದಸರಾ ರಜೆ ಕಡಿತ ಬೇಡ ಶಿಕ್ಷಕರ ಸಂಘದ ಆಗ್ರಹ

0
51

ಚಿಕ್ಕೋಡಿ 30: ಸನ್ 2016ರ ದಸರಾ ರಜೆ ದಿನಗಳ ಕಡಿತದ ನಿರ್ಧಾರ ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.
9-10-2016 ರಿಂದ 27-10-2016ರವರೆಗೆ ರಜೆ ನಿಗದಿಪಡಿಸಲಾಗಿದ್ದನ್ನು ರದ್ದು ಪಡಿಸಿ 9-10-2016 ರಿಂದ 23-10-2016 ರವರೆಗೆ ಎಂದು ಮರು ನಿಗದಿಗೊಳಿಸಿ ಆದೇಶಿಸಿದ್ದಾರೆ. ಆದರೆ ನಾವು ರಜಾ ಇಲಾಖೆಗೆ ಅನ್ವಯಗೊಳ್ಳುವುದರಿಂದ ನಮಗೆ ವರ್ಷಕ್ಕೆ ಕೇವಲ 10 ಇಎಲ್ ಮಾತ್ರ ನೀಡುತ್ತಾರೆ. ನಮಗೂ 30 ಇಎಲ್ ನೀಡಿದರೇ ಪೂರ್ಣ ರಜಾ ಅವಧಿಯನ್ನು ಕೆಲಸ ನಿರ್ವಹಿಸಲು ಸಿದ್ಧರಿದ್ದೇವೆ. ಅಲ್ಲದೇ ನಮ್ಮ ಜಿಲ್ಲೆಯಲ್ಲಿ ನೀಡಿದ ರಜಾ ದಿನಗಳ ಬದಲಾಗಿ ಈಗಾಗಲೇ ಶನಿವಾರ ದಂದು ಪೂರ್ಣದಿನ ಶಾಲೆ ನಡೆಯಿಸಿ ಕಲಿಕಾ ಅವಧಿಗಳನ್ನು ಸರಿಪಡಿಸಿಕೊಂಡಿರುತ್ತೇವೆ. ಆದ್ದರಿಂದ ಸರಕಾರ ಈ ಆದೇಶ ಹಿಂದಕ್ಕೆ ಪಡೆದು ಮೊದಲಿದ್ದ ಆದೇಶದಂತೆ ರಜೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘದ ಜಿಲ್ಲಾ ಅಧ್ಯಕ್ಷ ಜಿ.ಎಂ.ಹಿರೇಮಠ, ಕಾರ್ಯದರ್ಶಿ ಎಸ್.ಎಂ.ಲೋಕನ್ನವರ, ವೈ.ಎಸ್.ಬುಡ್ಡಗೋಳ, ಸಿ.ಬಿ.ಅರಭಾಂವಿ, ಎನ್.ಎಸ್.ಕಾಂಬಳೆ, ಬಿ.ಬಿ.ಬಾಯನ್ನವರ, ಪ್ರದೀಪ ಕೋಚರಿಕರ, ವಿ.ಬಿ.ಗುರವ, ಸಿ.ಆರ್.ಪೂಜೇರಿ, ಎಸ್.ಎಸ್.ದುಪದಾಳ, ಎನ್.ಜಿ.ಪಾಟೀಲ, ಎಸ್.ಎಸ್.ಹಿರೇಮಠ, ಆರ್.ಕೆ.ಕಾಂಬಳೆ, ಇಂದುಮತಿ ಕಾಂಬಳೆ, ಕೆ.ಎಂ.ಪಾಟೀಲ, ವಿ.ಬಿ.ಅರಗೆ, ಡಿ.ಕೆ.ನಾಯಿಕಪಾಟೀಲ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here