ಕಿತ್ತೂರ ಉತ್ಸವ: ಮಳಿಗೆ ಸ್ಥಾಪನೆಗೆ ಅರ್ಜಿ ಆಹ್ವಾನ

0
54

ಕನ್ನಡಮ್ಮ ಸುದ್ದಿ
ಬೆಳಗಾವಿ 03: ಕಿತ್ತೂರಿನಲ್ಲಿ ಅಕ್ಟೋಬರ್ 23ರಿಂದ ಮೂರು ದಿನಗಳ ಕಾಲ ನಡೆಯಲಿರುವ ಚೆನ್ನಮ್ಮನ ಕಿತ್ತೂರು ಉತ್ಸವದ ಅಂಗವಾಗಿ ಕೈಗಾರಿಕಾ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ.ಈ ವಸ್ತುಪ್ರದರ್ಶನದಲ್ಲಿ ಖಾದಿ ಗ್ರಾಮೋದ್ಯೋಗ, ಗೃಹ ಬಳಕೆ, ಕರಕುಶಲ ವಸ್ತುಗಳು, ಕೈಮಗ್ಗದ ವಸ್ತುಗಳು ಹಾಗೂ ಇತರೆ ವಸ್ತುಗಳ ಮಾರಾಟ ಹಾಗೂ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ.ಸಣ್ಣ ಕೈಗಾರಿಕೆ ಘಟಕಗಳು, ಕುಶಲಕರ್ಮಿಗಳು, ಸ್ವ-ಸಹಾಯ ಸಂಘಗಳು, ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಯವರು ವಸ್ತುಪ್ರದರ್ಶನದಲ್ಲಿ ಮಳಿಗೆ ಹಾಕಲು ಅಕ್ಟೋಬರ್ 15ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.ಸರ್ಕಾರಿ ಇಲಾಖೆಗಳಿಗೆ 5 ಸಾವಿರ ರೂಪಾಯಿ; ಕುಶಲಕರ್ಮಿಗಳ ಘಟಕ 1 ಸಾವಿರ; ಸಣ್ಣ ಕೈಗಾರಿಕಾ ಘಟಕ 3 ಸಾವಿರ; ಆಹಾರ ಮಳಿಗೆ 6 ಸಾವಿರ; ಇತರೆ ಹಾಗೂ ಸ್ವಸಹಾಯ ಸಂಘದವರಿಗೆ 1 ಸಾವಿರ ರೂಪಾಯಿ ಬಾಡಿಗೆಯನ್ನು ನಿಗದಿಪಡಿಸಲಾಗಿದೆ.ಉತ್ಸವದಲ್ಲಿ ಮಳಿಗೆಯನ್ನು ಪಡೆಯಲು ಇಚ್ಛಿಸುವರು ಬಾಡಿಗೆಯನ್ನು ಡಿ.ಡಿ. ರೂಪದಲ್ಲಿ ‘ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಬೆಳಗಾವಿ’ ಇವರ ಹೆಸರಿನಲ್ಲಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಉದ್ಯಮಬಾಗ ಬೆಳಗಾವಿ ಅಥವಾ ಟಿ.ಎಸ್.ಮಲ್ಲಿಕಾರ್ಜುನ ಸಹಾಯಕ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ (ದೂರವಾಣಿ 0831-2440187) ಅಥವಾ ಎ.ಐ.ಪಠಾಣ ಬೈಲಹೊಂಗಲ್ ಕೈಗಾರಿಕಾ ವಿಸ್ತರಣಾಧಿಕಾರಿ(ಮೊಬೈಲ್-9448866919) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

loading...

LEAVE A REPLY

Please enter your comment!
Please enter your name here