ಕೋಟೆ ನಾಡಿನಲ್ಲಿ ಯುವ ಬ್ರೀಗೇಡ್ ವತಿಯಿಂದ ಸ್ವಚ್ಛ ಸ್ಮಾರಕ ಸುಂದರ ಭಾರತ ಕಾರ್ಯಕ್ರಮ

0
44

ಗಜೇಂದ್ರಗಡ 2: ಪಟ್ಟಣದ ಗುಡ್ಡದ ಮೇಲೆ ಇರುವ ಛತ್ರಪತಿ ಶಿವಾಜಿ ಮಹಾರಾಜರ ಅಚ್ಚುಮೆಚ್ಚಿನ ಕೋಟೆಗಳಲ್ಲಿ ಒಂದಾದ ಐತಿಹಾಸಿಕ ಗಜೇಂದ್ರಗಡದ ಕೋಟೆಯಲ್ಲಿ ‘ಸ್ವಚ್ಛ ಸ್ಮಾರಕ ಸುಂದರ ಭಾರತ’ ಎಂಬ ಕಾರ್ಯಕ್ರಮದೊಂದಿಗೆ ಯುವ ಬ್ರೀಗೇಡ್ ತಂಡವು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಜಯಂತಿ ಕೋಟೆಯನ್ನು ಸ್ವಚ್ಛ ಮಾಡುವುದರೊಂದಿಗೆ ಆಚರಿಸಿದರು.

ಇದೆ ಸಂದರ್ಭದಲ್ಲಿ ಯುವ ಬ್ರೀಗೇಡ್‍ನ ರೋಣ ತಾಲೂಕ ಸಂಚಾಲಕ ವೀರೇಶ ಮಡಿವಾಳ ಮಾತನಾಡಿ ಸ್ವಚ್ಛತೆ ಕುರಿತಂತೆ ಗಾಂಧೀಜಿಯವರಿಗೆ ತುಂಬಾ ಕಾಳಜಿಯಿತ್ತು. ಭಾರತವನ್ನು ಈ ದೃಷ್ಟಿಯಿಂದ ಸುಂದರಗೊಳಿಸುವ ಅವರ ಕಲ್ಪನೆಗೆ ಈಗ ನಿಜವಾದ ಶಕ್ತಿ ಯುವ ಬ್ರೀಗೆಡ್ ತಂಡದೊಂದಿಗೆ ಬಂದಿದೆ. ಈ ಬಾರಿಯ ನಮ್ಮ ಯುವಕರ ತಂಡವು ಅಕ್ಟೋಬರ್-2 ರಂದು ರಾಜ್ಯವ್ಯಾಪಿ ಐತಿಹಾಸಿಕ ಸ್ಮಾರಕಗಳನ್ನು ಸ್ವಚ್ಛಹೊಳಿಸುವುದು ಮತ್ತು ಪ್ಲಾಸ್ಟಿಕ್ ಮುಕ್ತಗೊಳಿಸುವ ಸಂಕಲ್ಪವನ್ನು ಮಾಡಿ ಸೂಮಾರು 100 ವೀರಪುರುಷರ ಮನೆ, ಹುತಾತ್ಮರ ಸ್ಮಾರಕ, ವೀರಗಲ್ಲು, ಮಾಸ್ತಿಗಲ್ಲು, ಹಳೆಯ ಕೋಟೆಗಳನ್ನು ಸ್ವಚ್ಛ ಮಾಡಿ ಮುಂದಿನ ಪೀಳಿಗೆಗೆ ಉಳಿಸಿ ಹೋಗುವ ಕಾರ್ಯವನ್ನು ಹಮ್ಮಿಕೊಂಡಿದೆ ಎಂದರು.
ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸ್‍ಪ್‍ಗಳಲ್ಲಿ 24-ತಾಸು ಕುಳಿತು ಕಮೆಂಟ್ ಮಾಡುವವರು ಮತ್ತು ಶೇರ್ ಮಾಡುವವರು ಬಹಳ ಯುವಕ ಯುವತಿಯರು ಇದ್ದಾರೆ. ಆದರೆ ಮನಸ್ಪೂರ್ತಿಯಾಗಿ ಕೆಲಸಮಾಡಿ ಮಾತನಾಡವವರು ಸಿಗುವುದ ಕಷ್ಟಸಾಧ್ಯ. ನಾವು ಮಹಾತ್ಮರ ಕನಸುಗಳನ್ನು ನಿಜವಾಗಿಯೂ ನನಸು ಮಾಡಬೇಕು ಎಂದು ಪಣ ತೋಡುವುದಾದರೆ ಬೀದಿಗಿಳಿದು ಮೊದಲು ಕೆಲಸ ಮಾಡಬೇಕು ನಂತರ ಮಾತನಾಡಬೇಕು. ಮಾತಾಡೋರು ಮಾತಾಡ್ತಿರ್ಲಿ ನಾವ್ ಕೆಲ್ಸ ಮಾಡೋಣ ಎಂದು ಉಪನ್ಯಾಸಕ ವಿನಾಯಕ ಜಾಧವ ಅವರು ಹೇಳಿದರು.

ವಿಷಾದನಿಯ ಸಂಗತಿ : ಐತಿಹಾಸಿಕ ಕೋಟೆಯನ್ನು ಸ್ವಚ್ಛ ಮಾಡುತ್ತಿರುವಾಗ ಕಂಡುಬಂದ ದೃಶ್ಯಗಳೆಂದರೆ ಎಲ್ಲಿ ನೋಡಿದರಲ್ಲಿ ಪ್ರೇಮ ಬರಹಗಳೆ ತುಂಬಿ ತುಳುಕುತ್ತಿದ್ದವು. ಹೆಮ್ಮರವಾಗಿ ಬೆಳೆದಿದ್ದ ಕಸವನ್ನು ತೆಗೆಯುವಾಗ ಹೆಚ್ಚಾಗಿ ಬೀಯರ್ ಬಾಟಲ್‍ಗಳು ಮತ್ತು ನಿರೋಧದ ಪಾಕೇಟ್‍ಗಳೆ ಕಂಡು ಬಂದವು. ಜಗತ್ ಪ್ರಸಿದ್ದಿಕೋಟೆಯು ಅನೈತಿಕ ಚಟುವಟಿಕೆಗಳ ತಾಣ ಆಗುತ್ತಿರುವುದರ ಬಗ್ಗೆ ಯುವ ಬ್ರೀಗೆಡ್ ತಂಡವು ಕಳವಳ ವ್ಯಕ್ತಪಡಿಸಿ ಸಿಕ್ಕ ವಸ್ತುಗಳನ್ನು ಕಸದೊಂದಿಗೆ ಸುಟ್ಟು ಹಾಕಿತು.

ಈ ಕಾರ್ಯಕ್ರಮದಲ್ಲಿ ಯುವ ಬ್ರೀಗೆಡ್‍ನ ಸದಸ್ಯರುಗಳಾದ ವಿಶ್ವನಾಥ ಕುಷ್ಟಗಿ, ಶೀವು ಪಾಟೀಲ್, ಅಕ್ಷಯ ಜರತಾರಿ, ಅಕ್ಷಯ ವನ್ನಾಲ,ನಾನು ಮಾಳೋತ್ರಾ, ವಿನಾಯಕ ಪಾಟೀಲ್, ರಾಖೇಶ ಮಾರನಬಸರಿ, ಸುನೀಲ ಅಂಗಡಿ, ಅಂಬು ರಂಗ್ರೇಜಿ ಇತರರು ಇದ್ದರು. ಮಂತಿ ಮಾಳೋತ್ರ ಸ್ವಾಗತಿಸಿ ನಿರೂಪಿಸಿದರು ಚನ್ನು ಸಮಗಂಡಿ ವಂದಿಸಿದರು.

loading...

LEAVE A REPLY

Please enter your comment!
Please enter your name here