ಧಾರ್ಮಿಕ ಸಮರಸದ ಜೀವನವನ್ನು ಅಮರ ಜೀವನಕ್ಕೆ ಕೊಂಡೊಯ್ಯುವುದೇ ನಿಜವಾದ ಧರ್ಮ ರಂಭಾಪುರಿ ಶ್ರೀ

0
54

ಕನ್ನಡಮ್ಮ ಸುದ್ದಿ ರಾಮದುರ್ಗ
ಧಾರ್ಮಿಕ ಸಮರ ಜೀವನವನ್ನು ಅಮರ ಜೀವನಕ್ಕೆ ಕೊಂಡೊಯ್ಯುವುದೇ ನಿಜವಾದ ಧರ್ಮ. ಅನೇಕ ಧರ್ಮಗಳಿದ್ದರೂ ಗುರಿ ಮಾತ್ರ ಒಂದೇ ಆಗಿದೆ. ಸರ್ವಧರ್ಮವನ್ನು ಸಮಾನತೆಯಿಂದ ನೋಡಬೇಕು ಅದರಿಂದ. ಪರಧರ್ಮದ ಸಹಿಷ್ಣುತೆ ಹೆಚ್ಚು ಬೆಳೆದು ಶಾಂತಿ ನೆಮ್ಮದಿಂಯಿಂದಿರಲು ಸಾಧ್ಯವಾಗುತ್ತದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಗೊಡಚಿ ಶ್ರೀ ವೀರಭದ್ರೇಶ್ವರ ಕ್ಷೇತ್ರದಲ್ಲಿ ಜರುಗುತ್ತಿರುವ ಶರನ್ನವರಾತ್ರಿ ದಸರಾ ರಜತ ಧರ್ಮ ಸಮಾವೇಶದ 6ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಬಸವಣ್ಣನವರು ಹೇಳಿದಂತೆ ಅಂತರಂಗ ಮತ್ತು ಬಹಿರಂಗಳೆರಡರಲ್ಲಿ ಶುದ್ದವಾದಾಗ ಜೀವನ ಸಾರ್ಥಕಗೊಳ್ಳುತ್ತದೆ. ಭಕ್ತಿ ಜ್ಞಾನ ಕ್ರಿಯೆಗಳ ಸಮ ಸಮುಚ್ಛಯ ಹೊಂದಿದ ವೀರಶೈವ ಧರ್ಮ ಕಾಯಕ ಮತ್ತು ದಾಸೋಹಕ್ಕೆ ಬಹಳಷ್ಟು ಮಹತ್ವ ಕೊಟ್ಟಿದೆ. ಧರ್ಮದ ಉದಾತ್ತವಾದ ಮೌಲ್ಯಗಳ ಪರಿಪಾಲನೆಯಿಂದ ಜಗದಲ್ಲಿ ಶಾಂತಿ ನೆಮ್ಮದಿ ಮೂಡಿ ಬರಲು ಸಾಧ್ಯ. ಅರ್ಚನೆಗಿಂತ ಅರ್ಪಣೆ, ವ್ಯಕ್ತಿನಿಷ್ಠೆಗಿಂತ ತತ್ವ ನಿಷ್ಠೆಗೆ, ಚರಿತ್ರೆಗಿಂತ ಚಾರಿತ್ರ್ಯಕ್ಕೆ, ದಾನಕ್ಕಿಂತ ದಾಸೋಹಕ್ಕೆ ಪ್ರತಿಜ್ಞೆಗಿಂತ ಪ್ರಜ್ಞೆಗೆ ಒತ್ತು ನೀಡಿದ ಧರ್ಮ ವೀರಶೈವ. ಧನ ಸಂಪತ್ತಿಗಿಂತ ಸಾಧನೆಗೆ ವ್ಯವಸ್ಥೆಗಿಂತ ಆಸಕ್ತಿಗೆ ಮತ್ತು ಆತೋದ್ದಾರಕ್ಕಿಂತಲೂ ಲೋಕೋದ್ಧಾರಕ್ಕೆ ವೀರಶೈವ ಸಮಾಜವು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದೆ ಆದರೆ ಧರ್ಮ ಜಾಗೃತಿಗಾಗಿ ಎಲ್ಲರೂ ಕೆಲಸಕಾರ್ಯಗಳನ್ನು ಮಾಡಬೇಕು ಎಂದು ತಿಳಿಸಿದರು.
ಅತಿಥಿ ಮಾಜಿ ಸಚಿವ ಕಳಕಪ್ಪ ಬಂಡಿ, ಮಾತನಾಡಿ 12ನೇ ಸತಮಾನದಲ್ಲಿ ವೀರಶೈವ ಧರ್ಮ ಸ್ಥಾಪನೆಯಾಯಿತು ಹಾಗೂ ರಂಭಾಪುರಿ ಜಗದ್ಗುರುಗಳು ಒಚಿದು ಶಕ್ತಿ ಪೀಠ ಆದ್ದರಿಂದ ಸಾಹಿತ್ಯ.ಶಿಕ್ಷಣಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದೆ ಎಂದು ಹೇಳಿದರು.
ರಂಭಾಪುರಿ ಬೆಳಗು ಬಿಡುಗಡೆ ಮಾಡಿದ ಸವದತ್ತಿ ಶಾಸಕ ಆನಂದ ಮಾಮನಿ ಮಾತನಾಡಿ ಇಲ್ಲಿ ನಡೆದಿರುವುದು ಕೇವಲ ದಸರಾ ದರ್ಬಾರ ಆಗಿರದೇ ಧರ್ಮದ ದರ್ಬಾರ ಆಗಿದೆ. 1997ರಲ್ಲಿ ಸವದತ್ತಿಯಲ್ಲಿ ತಮ್ಮ ತಂದೆಯವರಾದ ಸಿ.ಎಂ.ಮಾಮನಿಯವರ ನೇತೃತ್ವದಲ್ಲಿ ನಡೆದ ದಸರಾ ಮಹೋತ್ಸವ ಇಂದಿಗೂ ತಮ್ಮ ಮನದಲ್ಲಿ ಹಸಿರಾಗಿ ಉಳಿದಿದೆ ಎಂದರು.
ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ನೆಗಳೂರು ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಸಂಕಲ್ಪ ನುಡಿಯಲ್ಲಿ ಧರ್ಮ ಪೀಠದ ಮೇಲಿನ ಶೃದ್ಧೆ ಬಾಳಿನ ಭಾಗ್ಯೋದಯಕ್ಕೆ ಸಹಕಾರಿಯಾದೀತು ಎಂದರು.
ಉಪಸ್ಥಿತಿ ಗೊಡಚಿ ಕ್ಷೇತ್ರದ ಸಂಗ್ರಾಮಸಿಂಹ ಸಿಂಧೆ ಮಹಾರಾಜರು, ಟಿ.ಪಿ. ಮನೋಳಿ ಅಶೋಕ ಪ್ರಜೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ದೊಡ್ಡವಾಡದ ಶಿವಲಿಂಗಪ್ಪ ಪರಂಡಿ ಸ್ವಾಗತಿಸಿದರು. ವೀರೇಶ ಕಿತ್ತೂರ ಅವರಿಂದ ಸಂಗೀತ ಜರುಗಿತು. ಸವಣೂರಿನ ಗುರುಪಾದಯ್ಯ ಸಾಲಿಮಠ ನಿರೂಪಿಸಿದರು
ಗುರು ರಕ್ಷೆ- ಪ್ರಶಸ್ತಿ ಪ್ರದಾನ: “ವೀರಶೈವ ಸಿರಿ” ಪ್ರಶಸ್ತಿಯನ್ನು ಲಕ್ಷ್ಮೇಶ್ವರ ಜಿ.ಎಂ. ಮಹಾಂತಶೆಟ್ಟರ್ ಅವರಿಗೆ ಪ್ರದಾನ ಮಾಡಿ ಗುರು ರಕ್ಷೆಯೊಂದಿಗೆ ಆಶೀರ್ವದಿಸಿದರು. ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ನಿಡಗುಂದಿಯ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ದಾಸೋಹ ದಾನಿಗಳಾದ ಚಂದ್ರಗೌಡ ಬಸನಗೌಡ ಪಾಟೀಲ ಸಿದ್ನಾಳ, ಬಿ.ಜೆ.ಪಿ. ಧುರೀಣ ಮಲ್ಲಣ್ಣ ಯಾದವಾಡ, ಹುಬ್ಬಳ್ಳಿಯ ಜಿ.ಎಂ.ಕರಡಿಮಠ, ಸಿ.ಆರ್. ಸಂಗೊಂದಿಮಠ, ನಿವೃತ್ತ ಶಿಕ್ಷಕರು, ಎಸ್.ವಿ. ಅಡ್ಡಣಗಿ, ಸದಾನಂದ ಹಿರೇಮಠ, ಶಿವಾನಂದ ಎಂ. ಹಂಚಿನಾಳ, ಸಿ.ಆರ್. ಉಕ್ಕಲಿ ವೇ. ವೀರಯ್ಯಸ್ವಾಮಿ ಹಿರೇಮಠ, ವಾಸ್ತು ತಜ್ಞ ಎಚ್. ಧರ ಪರಿಮಳಾಚಾರ್ಯ, ಜ್ಯೋತಿಷ್ಯ ರತ್ನ ಮಧು ದೀಕ್ಷಿತ ಮೈಸೂರು, ನಿಂಗಪ್ಪ ಮ. ಹೆಗ್ಗಳಗಿ ಸಾ. ಚಿಮ್ಮಡ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ಮಾಡಿದರು

loading...

LEAVE A REPLY

Please enter your comment!
Please enter your name here