ಬೆಳೆ ನಷ್ಟದ ಪರಿಹಾರ ರೈತರಿಗೆ ಹಂಚಿಕೆ ಮಾಡಿಲ್ಲ: ಪೂಜಾರ

0
56

ಸವಣೂರ : ಮಳೆ ಇಲ್ಲದೆ ಬೆಳೆ ನಷ್ಟದ ಪರಿಹಾರವನ್ನು ತಾಲ್ಲೂಕು ಆಡಳಿತದಿಂದ ಸರಿಯಾಗಿ ರೈತರಿಗೆ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿ ಯಾವ ತಾಲೂಕಿನ ಅಧಿಕಾರಿಗಳು ಯಾವ ರೈತರಿಗೆ ಬೆಳೆಹಾನಿಯನ್ನು ಸಮರ್ಪಕವಾಗಿ ಪುರೈಸಿದ್ದಿರಿ ಎಂದು ಕೃಷಿ ಅಧಿಕಾರಿ ಜೆ.ಟಿ. ವೀರಭದ್ರರೆಡ್ಡಿ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಮಾಲತೇಶ ಪೂಜಾರ ತರಾಟೆಗೆ ತಗಿದುಕೊಂಡರು.

ತಾಲೂಕ ಕಂಧಾಯ ಇಲಾಖೆ ಎದುರಿಗೆ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಒತ್ತಾಯಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಹಾಗೂ ತಾಲೂಕ ಘಟಕದ ವತಿಯಿಂದ ಪ್ರತಿಭಟನೆ ಕೈಗೊಂಡು ತಹಸೀಲ್ದಾರ ವಿ.ಡಿ.ಸಜ್ಜನ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

ಅಧಿಕಾರಿ ಮಾತನಾಡಿ ಇಗ ಸುಮಾರು ರೈತರಿಗೆ ತಲುಪಿದೆ ಉಳಿದ ರೈತರಿಗೆ ಅವರ ಬ್ಯಾಂಕ ಖಾತೆ ನಂಬರ ತಪ್ಪಾಗಿರುವದರಿಂದ ತಲುಪಿಲ್ಲಾ ಆದ್ದರಿಂದ ಪ್ರತಿನಿತ್ಯ ರೈತರ ಖಾತೆ ನಂಬರ ಇಗಾಗಲೆ ತೆಗೆದುಕೊಳ್ಳಲಾಗುತ್ತಿದೆ ಸಂಪೂರ್ಣ ಮುಗಿದ ಮೇಲೆ ಜಮಾ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಗೋವಿನ ಜೋಳ 12275 ಎಕರೆ ಬಿತ್ತನೆಯಾಗಿದೆ ಇದರಲ್ಲಿ ಶೇ 33% ರಷ್ಟು ಹಾನಿಯಾಗಿದೆ ಎಂದು ಸರ್ಕಾರಕ್ಕೆ ತಿಳಿಸಲಾಗಿದೆ. ರೈತರು ಬಿತ್ತನೆ ಮಾಡಿದ ಶೇಂಗಾ ಹತ್ತಿ ಸೋಯಾಭಿನ್ ಹೆಚ್ಚಾಗಿ ಹಾನಿಯಾಗಿದೆ ಎಂದು ಸರ್ಕಾರಕ್ಕೆ ಮಾಹಿತಿಯನ್ನು ಕಳುಹಿಸಲಾಗಿದೆ ಸರ್ಕಾರದಿಂದ ಅನುಧಾನ ಬಂದಮೇಲೆ ಜಮಾ ಮಾಡಲಾಗುವದು ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಮಾತನಾಡಿ.ಸತತ ಮೂರು ವರ್ಷಗಳಿಂದ ಬರಗಾಲದ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡದೇ ಸರಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ.
ರೈತರು ಸಾಲ ಮಾಡಿ ಬಿತ್ತನೆ ಮಾಡಿ ಖರ್ಚು ಕೂಡಾ ಕೈಗೆ ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ರೈತರ ಸರಕಾರಗಳು ಎಚ್ಚೆತ್ತು ರೈತರ ಉಳಿವಿಗಾಗಿ ಶ್ರಮಿಸಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ರೈತರೆಲ್ಲ ಒಂದಗಿ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ತಾರತಮ್ಯಕ್ಕೆ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರೇ ಕಾರಣ. ಯಾವೊಬ್ಬ ಅಧಿಕಾರಿಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಪರಿಶೀಲನೆಯನ್ನೂ ಮಾಡಿಲ್ಲ. ಕಚೇರಿಯಲ್ಲಿ ಕುಳಿತು ಮನಸೊ ಇಚ್ಛೆ ಪರಿಹಾರ ನಿಗದಿ ಪಡಿಸಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ತಹಶೀಲ್ದಾರ್ ವಿ.ಡಿ ಸಜ್ಜನ ಹಾಗೂ ಕೃಷಿ ನಿರ್ದೇಶಕ ಜಿ.ಟಿ.ವೀರಭದ್ರರಡ್ಡಿ ಪ್ರತಿಭಟನಕಾರರ ಬಳಿ ಬಂದು ಕೃಷಿ ಇಲಾಖೆ ಮತ್ತು ಕಂದಾಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದು, ಅದರಂತೆ ಎಲ್ಲಾ ರೈತರಿಗೆ ಹಣ ಹಂಚಿಕೆ ಮಾಡಲಾಗಿದೆ. ಎಲ್ಲಿಯಾದರೂ ಬರ ಪರಿಹಾರದ ಹಣ ಹಂಚಿಕೆಯಲ್ಲಿ ಲೋಪ ಕಂಡು ಬಂದರೆ ಪರಿಶೀಲಿಸಿ ಸರಿಪಡಿಸಲಾಗುವುದು. ಎಂದು ಭರವಸೆ ನೀಡಿದರು.

ಬೇಡಿಕೆಗಳು
1) ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು
2) ಹೆಸ್ಕಾಂ ಇಲಾಖೆಯಿಂದ ರೈತರ ಪಂಪಸೆಟ್ಟಗಳಿಗೆ ಹೆಚ್ಚಾಗಿ ಟಿಸಿ ಒದಗಿಸಿ ನಿರಂತರ ವಿದ್ಯುತ್ ಸಂಪರ್ಕ ಒದಗಿಸಬೇಕು, ರೈತರಿಗೆ ನೀರಾವರಿ ಮೂಲಕ ಬೇಸಾಯ ಮಾಡಲು ಅನುಕೂಲ ಮಾಡಬೇಕು
3) ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳು ನೇರವಾಗಿ ರೈತರಿಗೆ ಸಿಗುವಂತೆ ಮಾಡಬೇಕು
4) ಆಹಾರ ಇಲಾಖೆಯಲ್ಲಿ ಕೋಪನ್ ವ್ಯವಸ್ಥೆ ರದ್ದಾಗಬೇಕು ಹಾಗೂ ಪ್ರತಿ ಕುಟುಂಬಕ್ಕೆ ಸೀಮೆ ಎಣ್ಣೆ ವಿತರಿಸಲು ರೈತರ ಆಗ್ರಹ
5) ತೀಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಬೆಳೆವಿಮೆ ನಿಡಲು ಆಗ್ರಹ
6) ಹಳ್ಳಿಯ ಜನರಿಗೆ ಬಸ್ಸಿನ ಸೌಲಭ್ಯಕ್ಕಾಗಿ ಆಗ್ರಹ
7) ಹೊಸ ಆದೇಶದನ್ವಯ ಎಲ್ಲ ರೈತರಿಗೆ ರೇಶನ ಕಾರ್ಡ ವಿತರಿಸಬೇಕು.
8) ವಾರ್ಡ ಹಾಗೂ ಗ್ರಾಮ ಸಭೆಗೆ ರೈತ ಮುಖಂಡರುಗಳಿಗೆ ಕಡ್ಡಾಯವಾಗಿ ಆಹ್ವಾನಿಸಬೇಕು.
9) ಗ್ರಾಮ ಲೇಕ್ಕಾಧಿಕಾರಿಗಳು ಗ್ರಾಮಗಳಿಗೆ ದಿನ ನಿತ್ಯ ಬರುತ್ತಿಲ್ಲ. ಗ್ರಾಮ ಲೇಕ್ಕಾಧಿಕಾರಿಗಳು ಆಯಾ ಗ್ರಾಮದಲ್ಲಿ ಇದ್ದು ರೈತರ ಸಮಸ್ಯೆಯನ್ನು ಬಗೆ ಹರಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ

ಮಂಜಪ್ಪ ಮುದಿಯಪ್ಪನವರ, ಪರಮೇಶಪ್ಪ ಕಟೇಕರ, ಈರಪ್ಪ ಮುದ್ದೇಪ್ಪನವರ, ಹಾಲಪ್ಪ ಬೆಳಗಾವಿ, ಮಂಜಪ್ಪ ಹರಳಳ್ಳಿ, ಶಿವಾನಂದ ಚಂದ್ರಪಟ್ಟಣ, ಮಂಜುನಾಥ ಅಂಗಡಿ, ಪಕ್ಕೀರಪ್ಪ ಜೋಗೇರ, ಮಹೇಶ ಜಗ್ಲ, ರಮೇಶ ತೂಂಡೂರ, ರಾಜೇಂದ್ರ ಹಾವೇರಿ, ದುರಗಪ್ಪ ವಡ್ಡರ, ಯಲ್ಲಪ್ಪ ಕಂಬಳಿ, ಮೌನೇಶ ಜೋಗೇರ, ಗುರುರಾಜ ಅರಗಂಜಿ, ಈರಪ್ಪ ಲಮಾಣಿ, ಧರ್ಮಣ ಹರಿಜನ, ಸುಭಾಸ ಕೇರೆಕೊಪ್ಪದ, ಯಲ್ಲಪ್ಪ ಪೂಜಾರ,ನಾರಾಯಣ ಜೋಗೇರ ಹಾಗೂ ಇತರರು ಇದ್ದರು.

loading...

LEAVE A REPLY

Please enter your comment!
Please enter your name here