ತಹಶೀಲ್ದಾರ ಕಚೇರಿ ಮುತ್ತಿಗೆ ಹಾಕಿದ ಹೋರಾಟಗಾರರು ಈರುಳ್ಳಿ ಬೆಂಬಲ ಕೇಂದ್ರವನ್ನು ಆರಂಭಿಸುವಂತೆ ಒತ್ತಾಯ.

0
74

ನವಲಗುಂದ: ಇವತ್ತು ಈರುಳ್ಳಿ ಬೆಳೆದಂತಹ ರೈತನ ಕಣ್ಣಲ್ಲಿ ಕಣ್ಣಿರು ಬರುತ್ತಿದೆ ಆತ್ಮಹತ್ಯೇಯನ್ನು ಮಾಡಿಕೂಳ್ಳವುದು ಒಂದೆ ದಾರಿ ಈ ಕೂಡಲೇ ಈರುಳ್ಳಿ ಬೆಂಬಲ ಬೆಲೆಯನ್ನು ಘೋಷಿಸಿ ಖರಿದಿ ಕೇಂದ್ರವನ್ನು ಆರಂಭ ಮಾಡುವಂತೆ ರಾಜ್ಯ ಸರ್ಕಾರವನ್ನು ಲೋಕನಾಥ ಹೆಬಸೂರ ಆಗ್ರಹಿಸಿದರು.
ಈರುಳ್ಳಿ ಖರೀದಿ ಕೇಂದ್ರವನ್ನು ಆರಂಭಿಸುವಂತೆ ನಿನ್ನೇಯ ದಿನ ರೈತ ಭವನವನ್ನು ಮುತ್ತಿಗೆ ಹಾಕಿ ಮಾತನಾಡಿದ ಅವರು ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದು ಬಂದಿರುವಂತಹ 10ಪ್ರತಿಶತ ಭಾಗದ ಈರುಳ್ಳಿಯನ್ನು ಮಾರಲು ಹೋದರೆ 100ರೂಪಾಯಿ ಕ್ವಿಂಟಾಲ್‍ಗೆ ಮಾರಾಟ ಮಾಡಿ ಬರುವಂತಹ ಪರಿಸ್ಥಿತಿ ಬರುತ್ತಿದೆ. ಇದರಿಂದ ರೈತರು ಮಾಡಿದಂತಹ ಸಾಲ ದುಪ್ಪಟ್ಟಾಗುತ್ತಿದೆ. ಇದರಿಂದ ರೈತಕುಲದ ನೋವು ಕೇಳುವವರಾರು ಇಲ್ಲದಂತಾಗಿದೆ. ಇವತ್ತು ಕಾವೇರಿ ಹೋರಾಟಗಾರರ ಮೇಲೆ ಹಾಕಿದಂತಹ ಪ್ರಕರಣಗಳನ್ನು ಹಿಂಪಡೆದಿರುವಂತಹ ಸರ್ಕಾರ ಮಹದಾಯಿ ಹೋರಾಟಗಾರರು ಮೇಲೆ ಹಾಕಿದಂತಹ ಪ್ರಕರಣಗಳನ್ನು ಹಿಂದೆ ಪಡೆಯಲು ಮೀನಾಮೇಷ ಎನಿಸುತ್ತಿದ್ದಾರೆ. ಈ ರೀತಿಯಾಗಿ ದಕ್ಷಿಣ ಕರ್ನಾಟಕ ಉತ್ತರ ಕರ್ನಾಟಕ ಅಂತಾ ಮಲತಾಯಿ ಧೋರಣೆಯನ್ನು ತೋರುತ್ತಿದ್ದಾರೆ. ಇದೇ ರೀತಿಯಾಗಿ ರಾಜ್ಯ ಸರ್ಕಾರ ತನ್ನ ಆಡಳಿತವನ್ನು ಮುಂದುವರೆಸಿದರೆ ಇದಕ್ಕೇ ಗಂಡು ಮೆಟ್ಟಿದ ನಾಡಿನ ರೈತರ ಶಕ್ತಿ ಏನೆಂಬುದು ತೋರಿಸಬೇಕಾಗುತ್ತದೆ ಎಂದು ಆಕ್ರೊಶವನ್ನು ವ್ಯಕ್ತಪಡಿಸಿದರು.

ನಂತರ ಮಾತನಾಡಿದ ರೈತಪರಹೋರಾಟಗಾರ ಸುಭಾಷಚಂದ್ರಗೌಡ ಪಾಟೀಲ ಮಾತನಾಡಿ ರೈತರ ಹೆಸರಿನ ಮೇಲೆ ಪ್ರಮಾಣ ವಚನವನ್ನು ಸ್ವೀಕರಿಸಿ ಅಧಿಕಾರಕ್ಕೇರುವಂತಹ ಮುಖ್ಯಮಂತ್ರಿಗಳು ಇವತ್ತು ರೈತರ ನೋವನ್ನು ಅರಿಯುವ ಪರಿಸ್ಥಿತಿ ಅರಿಯದಾಗಿದ್ದಾರೆ. ಇಂತಹ ಬರಗಾಲದಂತಹ ಪರಿಸ್ಥಿತಿಯಲ್ಲಿ ಏನೋ ಅಲ್ಪ ಸ್ವಲ್ಪ ಭಗವನ್ನು ಬೆಳೆದಂತಹ ರೈತರು ಈರುಳ್ಳಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಮನಬಂದಂತೆ ಅದಕ್ಕೇ ಬೆಲೆ ಕಟ್ಟಿ 100 ಕ್ಕಿಂತಲೂ ಕಡಿಮೆ ಬೆಲೆಗೆ ಕೇಳುತ್ತಿರುವುದು ದುರಂತದ ಸಂಗತಿಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತಪರ ಹೋರಾಟಗಾರರಾದ ಡಿ.ವಿ.ಕುರಹಟ್ಟಿ, ಈರಣ್ಣ ನೀರಲಗಿ, ಸೈಪುದ್ದೀನ ಅವರಾದಿ, ಅಬ್ಬಾಸಲಿ ದೇವರಿಡು, ಮಾಬುಸಾಬ ತಾಸೇದ, ವಿರುಪಾಕ್ಷಗೌಡ ಕುಲಕರ್ಣಿ, ಸಂಗಪ್ಪ ನಿಡವಣಿ, ಗುರುಸಿದ್ದಪ್ಪ ಕಾಲುಂಗರ್, ದೇವೆಂದ್ರಪ್ಪ ಹಳ್ಳದ, ಶಿವಾನಂದ ಅಂಗಡಿ, ರಮೇಶ ಉಕಲಿ, ದೊಸಿಂಗಪ್ಪ ಶೆಲ್ಲೆಣ್ಣವರ, ಅಲ್ಲಾಭಕ್ಷ ಹಂಚಿನಾಳ, ಯಲ್ಲಪ್ಪ ತಡಸಿ, ಮಲ್ಲೇಶ ಉಪ್ಪಾರ, ಯಲ್ಲಪ್ಪ ದಾಡಿಬಾವಿ ಇನ್ನೀತರರು ಉಪಸ್ಥಿತರಿದ್ದರು.

*****
ಆತ್ಮಹತ್ಯೇ ಮಾಡಿಕೂಳ್ಳಲು ಯತ್ನಿಸಿದ ಯುವಕ.
ನಗರದ ತಹಶೀಲ್ದಾರರ ಕಾರ್ಯಾಲಯದಲ್ಲಿ ನಿನ್ನೇ ನಡೆದ ಕಚೇರಿ ಮುತ್ತಿಗೆ ಸಂದರ್ಭದಲ್ಲಿ ಮೈಲಾರೆಪ್ಪ ಕುಬೇರಪ್ಪ ವೈದ್ಯ ಎಂಬ ಯುವಕ ಟ್ರ್ಯಾಕ್ಟರನ ಮೇಲೆ ನಿಂತು ತಹಶಿಲ್ದಾರ ಕಾರ್ಯಾಲಯದ ಮುಂದೆ ಹಗ್ಗ್ ಹಾಕಿ ಆತ್ಮಹತ್ಯೆಯನ್ನು ಮಾಡಿಕೂಳ್ಳಲು ಹೋದ ಸಂದರ್ಭದಲ್ಲಿ ಪೊಲಿಸರು ಅವನನ್ನು ಆತ್ಮಹತ್ಯೆ ಮಾಡಿಕೂಳ್ಳದಂತೆ ತಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಮೈಲಾರಿ ತಾನು ಬೆಳೆದಂತಹ ಈರುಳ್ಳಿಯನ್ನು ತಹಶಿಲ್ದಾರ ಕಾರ್ಯಾಲಯದ ಒಳಗಡೆ ತಂದು ಹಾಕಿದ್ದೇನೆ. ಇದರ ಖರ್ಚು ವೆಚ್ಚ ಸೇರಿ 50 ಸಾವಿರ ರೂಪಾಯಿ ಬಂದಿದೆ. ಆದರೆ ಇದೆ ಈರುಳ್ಳಿಯನ್ನು ಮಾರುಕಟ್ಟೆಗೆ ತೆಗೆದುಕೂಂಡು ಹೋದರೆ 100ರೂಪಾಯಿಗೆ ಕ್ವಿಂಟಾಲ್ ಕೇಳುತ್ತಿದ್ದಾರೆ. ನಾನು ಏನು ಮಾಡಬೇಕು ನಮ್ಮ ತಂದೆಯವರು ಕ್ಯಾನ್ಸರ ಆಗಿ 3 ವರ್ಷದ ಹಿಂದೆ ತೀರಿ ಹೋಗಿದ್ದಾರೆ. ಮನೆತನವನ್ನು ನಡೆಸುವುದು ಹೇಗೆ ಎಂಬುವುದು ತಿಳಿತಾಯಿಲ್ಲಾ. ನಮ್ಮ ಹೋಲದ ಮೇಲೆ 1ಲಕ್ಷ 30ಸಾವಿರ ರೂಪಾಯಿ ಬೋಜಾ ಇದೆ. 8 ಗಂಟೆಯೊಳಗೆ ಸರ್ಕಾರ ಈರುಳ್ಳಿ ಕೇಂದ್ರವನ್ನು ಸ್ಥಾಪಿಸದಿದ್ದರೆ ಆತ್ಮಹತ್ಯೆಯನ್ನು ಮಾಡಕೂಳ್ಳುತ್ತೆನೆಂದು ಎಚ್ಚರಿಕೆಯನ್ನು ನೀಡಿದರು.

loading...

LEAVE A REPLY

Please enter your comment!
Please enter your name here