ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ: ಪ್ರತಿಭಟನೆ

0
33

ಯಲ್ಲಾಪುರ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಾ ರೈತ ಸಂಘ ಹಾಗೂ ಭಾರತೀಯ ಕಿಸಾನ್ ಸಂಘಗಳ ವತಿಯಿಂದ ಗುರುವಾರ ತಹಶೀಲ್ದಾರ ಮತ್ತು ಉಪಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಲ್ಲಿಸಿದ ಮನವಿಯಲ್ಲಿ ತಾಲೂಕಿನಾದ್ಯಂತ ಕಾಡುಪ್ರಾಣಿಗಳಿಂದ ರೈತರ ಬೆಳೆಗಳು ನಷ್ಟವಾಗುತ್ತಿವೆ. ತಾಲೂಕಿನ ನಂದೊಳ್ಳಿ, ಚಂದಗುಳಿ,ಕಿರವತ್ತಿ, ಮದ್ನೂರು.ಕಂಪ್ಲಿ, ವಜೃಳ್ಳಿ, ಮಾವಿನಮನೆ ಮಂಚಿಕೇರಿ ಕುಂದರಗಿ ಮುಂತಾದ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಕಾಡಾನೆ, ಕಾಡುಕೋಣ, ಕಾಡುಹಂದಿ, ಬಿಳಿ ಮಂಗ, ಕೆಂಪು ಮಂಗ ಮುಂತಾದ ಪ್ರಾಣಿಗಳ ಉಪಟಳ ಜಾಸ್ತಿಯಾಗಿದೆ. ಭತ್ತದ ಗದ್ದೆ, ಅಡಿಕೆ ತೋಟ, ಕಬ್ಬಿನ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಧ್ವಂಸ ಮಾಡುತ್ತಿದ್ದು ಅಪಾರ ನಷ್ಟ ಉಂಟಾಗುತ್ತಿದೆ.
ಕಾರಣ ರೈತರ ಜಮೀನಿನಲ್ಲಿ ಕಾಡುಪ್ರಾಣಿಗಳ ಉಪಟಳ ನಿಯಂತ್ರಿಸುವದಕ್ಕೆ ಶಾಶ್ವತ ಪರಿಹಾರ ಕ್ರಮ ರೂಪಿಸಬೇಕು. ಕಾಡುಪ್ರಾಣಿಗಳಿಂದ ಬೆಳೆಗಳು ಹಾನಿಯಾದಲ್ಲಿ ನೀಡುತ್ತಿರುವ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು. ಅರಣ್ಯ ಇಲಾಖೆ ವತಿಯಿಂದ ರೈತರ ನೆರವು ಪಡೆದು ಜಮೀನಿನ ಸುತ್ತ ಕಂದಕ, ತಂತೀ ಬೇಲಿ ನಿರ್ಮಿಸಿಕೊಡಬೇಕು. ಅತಿಯಾದ ಉಪಟಳವಿರುವ ಭಾಗದಲ್ಲಿ ಈ ಪ್ರಾಣಿಗಳ ಕಾರಿಡಾರ್‍ಗಳನ್ನು ಗುರುತಿಸಿ ಸೋಲಾರ್ ಬೇಲಿ ಅಳವಡಿಸಬೇಕು. ಪಾರಂಪರಿಕ ಅರಣ್ಯ ಅತಿಕ್ರಮಣ ಜಮೀನಿನಲ್ಲಿಯೂ ಬೆಳೆ ಹಾನಿಯಾದಲ್ಲಿ ಪರಿಹಾರ ನೀಡಬೇಕು. ರೈತರು ಪ್ರಾಣಿಗಳನ್ನು ಬೆದರಿಸಲು ಇಟ್ಟುಕೊಂಡಿರುವ ಬಂದೂಕುಗಳನ್ನು ಸ್ಥಳಿಯವಾದ ಚುನವಣಾ ಸಂದರ್ಭದಲ್ಲಿ ಡಿಪಾಸಿಟ್ ಮಾಡುವುದನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಕಾರ್ಯರೂಪಕ್ಕೆ ತರಲು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಸಮಸ್ತ ರೈತರನ್ನು ಒಗ್ಗೂಡಿಸಿಕೊಂಡು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ನಿರ್ಣಯವನ್ನು ತೆಗೆದುಕೊಳ್ಳುತ್ತೇವೆಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ತಾಲೂಕಾ ರೈತ ಸಂಘದ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ, ರೈತಸಂಘದ ಉಪಾಧ್ಯಕ್ಷ ವಿ. ಎನ್. ಭಟ್ಟ ಗೇರಗದ್ದೆ, ಪ್ರಮುಖರಾದ ಗಜಾನನ ಭಟ್ಟ ಜಡ್ಡಿ, ಶ್ರೀನಿವಾಸ ಗಾಂವ್ಕಾರ್, ಗಣಪತಿ ಸುಬ್ರಾಯ ಭಟ್ಟ ಸಹಸ್ರಳ್ಳಿ, ದತ್ತಾತ್ರಯ ಕೋಲಿಬೇಣ, ಶ್ರೀಧರ ಭಟ್ಟ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here