433 ನೇ ದಿನಕ್ಕೇ ಕಾಲಿಟ್ಟ ಕಳಸಾ-ಬಂಡೂರಿ ಹೋರಾಟ

0
47

ನವಲಗುಂದ: ನಗರದ ರೈತಭವನದಲ್ಲಿ ಕಳೆದ 433 ದಿನಗಳಿಂದ ನಿರಂತರವಾಗಿ ಮಹದಾಯಿ ಹಾಗೂ ಕಳಸಾ-ಬಂಡೂರಿ ನೀರಿಗಾಗಿ ಹೋರಾಟವನ್ನು ಮಾಡುತ್ತಿದ್ದರು ಸಹ ಇಲ್ಲಿಯವರೆಗೆ ಬಂದಿರುವಂತಹ ಸರ್ಕಾರಗಳಾಗಲಿ ಈ ಭಾಗದ ಜನಪ್ರತಿನಿಧಿಗಳಾಗಲಿ ಯಾವುದೇ ರೀತಿಯ ಸೂಕ್ತಕ್ರಮವನ್ನು ತೆಗೆದುಕೂಂಡಿಲ್ಲಾ. ಇದನ್ನು ಹಿಗೆಯೇ ಮುಂದುವರೆಸಿದರೆ ಮುಂದಿನ ದಿನಮಾನಗಳಲ್ಲಿ ನವಲಗುಂದದಲ್ಲಿ ಮತ್ತೂಂದು ಬಂಡಾಯವನ್ನು ಮಾಡಿಯಾದರು ಸರಿ ಮಹದಾಯಿ ನೀರನ್ನು ಪಡದೆ ತೀರುತ್ತೇವೆ ಎಂದು ರೈತಪರ ಹೋರಾಟಗಾರ ಸುಭಾಷಚಂದ್ರಗೌಡ ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚಿಗೆ ನ ಕುಡಿಯಲು ನೀರು ಕೊಡಿ ಅಂತಾ ಹೋರಾಟ ಮಾಡುತ್ತಿದ್ದರು ಈ ಭಾಗದ ಜನಪ್ರತಿನಿಗಳು ಇದಕ್ಕೇ ಕ್ಯಾರೆ ಅನ್ನುತ್ತಿಲ್ಲಾ. ಇನ್ನು ಬಿ.ಜೆ.ಪಿಯವರು ನೀರಿನ ವಿಷಯದಲ್ಲಿ ರಾಜಕೀಯವನ್ನು ಮಾಡುತ್ತಿದ್ದಾರೆ. ಈ ಯೋಜನೆಯನ್ನು ಜಾರಿಯಾಗಲು ಬಿಡುತ್ತಿಲ್ಲಾ. ನಾವು ಕೇಳತಾಯಿರುವುದು ಕುಡಿಯಲು ನೀರು. ಇವತ್ತು ಬದುಕಲು ನೀರು ಅವಶ್ಯವಾಗಿ ಬೇಕು. ನೀರು ನಮ್ಮ ಮೂಲಭೂತವಾಗಿರುವಂತಹ ಹಕ್ಕು ಅದನ್ನೇ ಒದಗಿಸಲಾಗದಿರುವಂತಹ ಸರ್ಕಾರ ಇದ್ದರೆಷ್ಟು ಸತ್ತರೆಷ್ಟು ಕಳೆದ ಮೂರು ದಶಕಗಳಿಂದ ಮಹದಾಯಿ ನೀರನ್ನು ಮಲಪ್ರಭೆಗೆ ಜೋಡಿಸಿ ಅಂದರು ಸಹ ಇದಕ್ಕೇ ಯಾವ ಸರ್ಕಾರಗಳು ಕ್ರಮವನ್ನು ತೆಗೆದುಕೂಳ್ಳಲಿಲ್ಲಾ. ಮಳೆ ಬಾರದೆ ಬೆಳೆ ಬಂದಿಲ್ಲಾ ಕುಡಿಯಲು ನೀರಿಗೂ ತೊಂದರೆ ಪಡುವಂತಹ ಪರಿಸ್ಥಿತಿ ಬಂದಿದೆ. ನಾವು ಹೋರಾಟವನ್ನು ಯಾವುದೇ ಕಾರಣಕ್ಕು ನಿಲ್ಲಿಸುವುದಿಲ್ಲಾ. ರಾಜಕೀಯ ಪಿತೂರಿಗೆ ನಾವೆಂದು ಬಗ್ಗುವುದಿಲ್ಲಾ ಈ ಉತ್ತರ ಕರ್ನಾಟಕದ ಭಾಗದಲ್ಲಿ ಮಹದಾಯಿ ನೀರು ಹರಿಯುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತೇ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತಪರ ಹೋರಾಟಗಾರರಾದ ಬಸಪ್ಪ ಬೀರಣ್ಣವರ, ಯಲ್ಲಪ್ಪ ತಡಸಿ, ಗುರುಸಿದ್ದಪ್ಪ ಕಾಲುಂಗರ್, ಫಕ್ಕಿರಪ್ಪ ಮರಲಕ್ಕಣ್ಣವರ, ರವಿಗೌಡ ಪಾಟೀಲ್, ಲಕ್ಷ್ಮಣ ಮಳಗಿ, ಸೋಮಣ್ಣಾ ಕವಟೇಕರ್, ಈರಪ್ಪ ಬಡಿಗೇರ್, ಬಸನಗೌಡ ಹಿರೇಗೌಡ್ರ, ಉಮೇಶ ಪಲ್ಲೇದ, ಚನ್ನಪ್ಪ ದಾಟನಾಳ, ಇಮಾಮಸಾಬ ಚಾಹುಸೇನ್, ನಿಂಗಪ್ಪ ಬಾಡಗುಂಡಿ, ಜಗದೀಶ ಹೊಂಬಳ, ಬಸಪ್ಪ ಕರಡ್ಡಿ, ಅಲ್ಲಾಭಕ್ಷ ಹಂಚಿನಾಳ, ಬಸನಗೌಡ ಫಕ್ಕೀರಗೌಡ್ರ, ತಿಪ್ಪಣ್ಣ ಕರಿಗಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here